ಸಾರಾಂಶ
2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮಾ-21ರಿಂದ ಪ್ರಾರಂಭವಾಗಲಿದ್ದು, ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರವರು ಪಟ್ಟಣದ 4 ಹಾಗೂ ತಾಲೂಕಿನ ಕೊಣ್ಣೂರ ಗ್ರಾಮದ 1 ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿದರು.
ನರಗುಂದ: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆ ಮಾ-21ರಿಂದ ಪ್ರಾರಂಭವಾಗಲಿದ್ದು, ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಗುರುನಾಥ ಹೂಗಾರವರು ಪಟ್ಟಣದ 4 ಹಾಗೂ ತಾಲೂಕಿನ ಕೊಣ್ಣೂರ ಗ್ರಾಮದ 1 ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿದರು.
ಆನಂತರ ಮಾತನಾಡಿ ನಾಳೆಯಿಂದ ನಡೆಯುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ತಾಲೂಕಿನ 5 ಪರೀಕ್ಷೆ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಯಾವುದೇ ರೀತಿ ತೊಂದರೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. 745 ವಿದ್ಯಾರ್ಥಿಗಳು, 782 ವಿದ್ಯಾರ್ಥಿನಿಯರು ಸೇರಿ ಒಟ್ಟು 1527 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 5 ಮುಖ್ಯ ಅಧೀಕ್ಷರು, 94 ಜನ ಸುಪರ್‌ವೈಜರ, 5 ಜನ ಕಚೇರಿ ಸಿಬ್ಬಂದಿಗಳು, 13 ಜನ ಜವಾನರು, ಪರೀಕ್ಷೆ ಸೇವೆಗೆ ನಿಯೋಜನೆ ಮಾಡಲಾಗಿದೆ. ನಕಲು ನಡೆಯದ ಹಾಗೆ ಪ್ರತಿಯೊಂದು ಕೊಠಡಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಇದ್ದರು.
೨೮ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನಿರಾಕರಣೆ: ಪರೀಕ್ಷೆ ಬರೆಯಲು ಅರ್ಹತೆ ಪಡೆಯಲು ವಿದ್ಯಾರ್ಥಿ ಕನಿಷ್ಠ ಶೇ ೭೫ ಹಾಜರಾತಿ ಹೊಂದಿರಬೇಕು ಎಂಬ ಇಲಾಖೆಯ ನಿಯಮವಿದ್ದು, ಈ ಹಾಜರಾತಿ ಹೊಂದಿರದ 28 ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನಿರಾಕರಣೆ ಮಾಡಿದ ಘಟನೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಪಬ್ಲಿಕ್ ಶಾಲೆಯಲ್ಲಿ ನಡೆದಿದೆ.ಈ ಶಾಲೆಯಲ್ಲಿ ಒಟ್ಟು ೭೯ ವಿದ್ಯಾರ್ಥಿಗಳಿದ್ದು, ಇವರಲ್ಲಿ ೫೧ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪತ್ರ ನೀಡಿದ್ದು, ೯ ಜನ ಹಾಜರಾತಿ ಕಡಿಮೆ ಇರುವ ಬಗ್ಗೆ ಹಾಗೂ ೧೯ ವಿದ್ಯಾರ್ಥಿಗಳು ಕಾಯಂ ಶಾಲೆಗೆ ಗೈರು ಹಾಜರಾಗಿರುವುದರಿಂದ ಅವರಿಗೂ ಕೂಡ ಪ್ರವೇಶ ಪತ್ರ ನಿರಾಕರಣೆ ಮಾಡಲಾಗಿದೆ.ತಾಲೂಕಿನ ಕಡಕೋಳ ಗ್ರಾಮದ ಪಬ್ಲಿಕ್ ಶಾಲೆಯಲ್ಲಿ ಪೂರ್ಣ ಪ್ರಮಾಣದ ಹಾಜರಾತಿ ಹೊಂದಿದ ೫೧ ಮಕ್ಕಳಿಗೆ ಪರೀಕ್ಷೆ ಬರೆಯಲು ಪ್ರವೇಶ ಪತ್ರ ನೀಡಲಾಗಿದೆ. ಇನ್ನುಳಿದಂತೆ ಹಾಜರಾತಿ ಕೊರತೆ ಮತ್ತು ಸಂಪೂರ್ಣ ಗೈರ ಉಳಿದ ಕಾರಣ ಪ್ರವೇಶ ಪತ್ರ ನಿರಾಕರಣೆ ಮಾಡಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಎನ್.ಬಿ. ಮುಲಕಿಗೌಡರ ಹೇಳಿದ್ದಾರೆ.
ಮಕ್ಕಳ ಪಾಲಕರಿಗೆ ನೋಟಿಸ್ ನೀಡಲಾಗಿದೆ. ಪಾಲಕರ ಸಭೆ ಕರೆದರೂ ಒಮ್ಮೆಯೂ ಹಾಜರಾಗಿಲ್ಲ. ಪರೀಕ್ಷೆ ಫಲಿತಾಂಶದ ಸುಧಾರಣೆ ದೃಷ್ಟಿಯಿಂದ ಹಾಗೂ ಇಲಾಖೆ ನಿಯಮ ಪಾಲನೆ ಮಾಡಿದ್ದು, ನಮ್ಮದು ಏನೂ ತಪ್ಪಿಲ್ಲ ಎಂದು ಹೇಳುತ್ತಾರೆ.