ಶಿಕ್ಷಣ ಸಂಸ್ಕಾರಯುತ ಪರಾಕ್ರಮ, ದೇಶಪ್ರೇಮ ಬಿತ್ತಬೇಕು: ಡಾ.ಎ.ಆರ್. ಬೆಳಗಲಿ

| Published : Feb 06 2024, 01:32 AM IST

ಶಿಕ್ಷಣ ಸಂಸ್ಕಾರಯುತ ಪರಾಕ್ರಮ, ದೇಶಪ್ರೇಮ ಬಿತ್ತಬೇಕು: ಡಾ.ಎ.ಆರ್. ಬೆಳಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಿಂಗಪುರ: ಶಿಕ್ಷಣ ಹುಲಿಯ ಹಾಲಿದ್ದಂತೆ ಕುಡಿದವನು ಘರ್ಜಿಸಲೇಬೇಕು ಎಂಬ ವಾಣಿಯಂತೆ ಶಿಕ್ಷಣ ಸಂಸ್ಕಾರಯುತ ಪರಾಕ್ರಮ ಮತ್ತು ದೇಶಪ್ರೇಮ ಬಿತ್ತಬೇಕು. ಆ ಮೂಲಕ ಪ್ರತಿ ಮಗುನ್ನೂ ಶ್ರೇಷ್ಠ ನಾಯಕನನ್ನಾಗಿ ರೂಪಿಸಬೇಕು ಎಂದು ಖ್ಯಾತ ವೈದ್ಯ ಡಾ.ಎ.ಆರ್. ಬೆಳಗಲಿ ಹೇಳಿದರು. ಸ್ಥಳೀಯ ಬನಶಂಕರಿ ವಿದ್ಯಾವರ್ಧಕ ಸಂಘದ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯ 32 ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಶಿಕ್ಷಣ ಹುಲಿಯ ಹಾಲಿದ್ದಂತೆ ಕುಡಿದವನು ಘರ್ಜಿಸಲೇಬೇಕು ಎಂಬ ವಾಣಿಯಂತೆ ಶಿಕ್ಷಣ ಸಂಸ್ಕಾರಯುತ ಪರಾಕ್ರಮ ಮತ್ತು ದೇಶಪ್ರೇಮ ಬಿತ್ತಬೇಕು. ಆ ಮೂಲಕ ಪ್ರತಿ ಮಗುನ್ನೂ ಶ್ರೇಷ್ಠ ನಾಯಕನನ್ನಾಗಿ ರೂಪಿಸಬೇಕು ಎಂದು ಖ್ಯಾತ ವೈದ್ಯ ಡಾ.ಎ.ಆರ್. ಬೆಳಗಲಿ ಹೇಳಿದರು.

ಸ್ಥಳೀಯ ಬನಶಂಕರಿ ವಿದ್ಯಾವರ್ಧಕ ಸಂಘದ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯ 32 ನೇ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಹೇಳುವಂತೆ ಶಿಕ್ಷಣ ಪುರುಷ ಸಿಂಹಗಳನ್ನು ಸೃಷ್ಟಿಸಬೇಕು, ಶಿಕ್ಷಣ ಕೇವಲ ಅಕ್ಷರ ಜ್ಞಾನ ಮತ್ತು ನೌಕರಿಗೆ ಸೀಮಿತವಾಗದೆ ಅಗಾಧ ದೇಶಪ್ರೇಮ, ಪರಾಕ್ರಮ ಬೆಳೆಸುವಂತಾಗಬೇಕು. ಆ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಷ ಶೇಖರ ಅಂಗಡಿಯವರ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸೇವೆ ಅನನ್ಯ. ಅತೀ ಕಡಿಮೆ ಶುಲ್ಕದಲ್ಲಿ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಉನ್ನತ ನಾಯಕತ್ವದ ಗುಣ ಹೊಂದಿರುವ ಅವರೇ ಮಕ್ಕಳಿಗೆ ಮಾದರಿಯಾಗಿದ್ದಾರೆ ಎಂದರು.

ನಂತರ ಮಾತನಾಡಿದ ವೈ.ವೈ.ಕೊಕ್ಕನವರ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ಗೀಳು ಅಂಟಿಸಿಕೊಂಡಿದ್ದು, ಅವರು ಅದನ್ನು ಅವಶ್ಯಕತೆ ಇದ್ದಷ್ಟು ಮಾತ್ರ ಬಳಸಬೇಕು. ಮೊಬೈಲ್ ಇಂದಿನ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ. ಪುಸ್ತಕ ಓದುವುದನ್ನು ಹೆಚ್ಚು ಹೆಚ್ಚು ರೂಢಿ ಮಾಡಿಸಬೇಕು. ಮಕ್ಕಳು ಬೆಳವಣಿಗೆ ಆಗಬೇಕಾದರೆ ಶಿಕ್ಷಣದ ಜೊತೆಗೆ ಎಲ್ಲಾ ರಂಗದಲ್ಲಿ ಸಮಾಜಮುಖಿ ಕೆಲಸ ಮಾಡಿ ನಾಡಿಗೆ,ದೇಶಕ್ಕೆ ಹೆಸರು ತರುವಂತಹ ಮಕ್ಕಳು ಆಗಬೇಕೆಂದರು.

ಪತ್ರಕರ್ತರಾದ ಜಯರಾಮ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಿ ಮಕ್ಕಳು ತಂದೆ, ತಾಯಿ, ಅಜ್ಜ, ಅಜ್ಜಿ ಇಡೀ ಕುಟುಂಬ ಜೊತೆ ಬೆಳೆಸಿದರೆ ಒಳ್ಳೆಯ ಸಂಸ್ಕಾರ ಸಿಗಲು ಸಾಧ್ಯವಾಗುತ್ತದೆ. ಆಟ ಪಾಠ ಎರಡು ಸಮ ಸಮವಾಗಿದ್ದರೆ. ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಠರಾಗಲು ಸಾಧ್ಯ ಎಂದು ಹೇಳಿದರು.

ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಪ್ರಶಸ್ತಿ ಮತ್ತು ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶ್ರೀಶೈಲ ಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಶೇಖರ ಅಂಗಡಿ ಪ್ರಾಸ್ತವಿಕವಾಗಿ ಮಾತನಾಡಿದರು.

ಪುರಸಭಾ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಲವಂತಗೌಡ ಪಾಟೀಲ, ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಪುರಸಭೆ ಸದಸ್ಯ ರವಿ ಜವಳಗಿ, ಕಾನಿಪ ಕಾರ್ಯದರ್ಶಿ ಹನುಮಂತ ನಾವಿ, ಪ್ರಕರ್ತರಾದ ಮಹೇಶ ಆರಿ,ಎಸ್.ಎಸ್. ಈಶ್ವರಪ್ಪಗೋಳ, ನರನಗೌಡ ಉತ್ತಂಗಿ, ಲಕ್ಷ್ಮಣ ಕಿಶೋರ, ಅರುಣಾ ಅಂಗಡಿ, ನಾಗಲಿಂಗ ಬಡಿಗೇರ, ಶಿವು ಹೂಗಾರ, ಮದಾರ ಮುಲ್ಲಾ, ಅಶೋಕ ಡೋಣಿ, ರಾಘವೇಂದ್ರ ಮಾಳಗಿ,ನಂದೇಶ ಲಾತುರ, ಸುನೀಲ ಸಂತಿ, ಅಪ್ಪು ದಂಡಿನ,ಮುಖ್ಯಶಿಕ್ಷಕ ಗೀತಾ ಪಾಟೀಲ ಮತ್ತು ಇತರರಿದ್ದರು. ಐಮನ್ ಕಟ್ಟಿಮನಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಶಿಕ್ಷಕಿ ಅನ್ನಪೂರ್ಣ ಚಿಚಖಂಡಿ ಸ್ವಾಗತಿಸಿ, ಶಿಕ್ಷಕಿ ಶಿವಲೀಲಾ ಹಿರೇಮಠ ಬಹುಮಾನ ವಿತರಿಸಿ, ಶಿಕ್ಷಕ ಎಚ್.ಕೆ.ಪಾಟೀಲ ನಿರೂಪಿಸಿದರು.