ಸಾರಾಂಶ
ವಿದ್ಯಾರ್ಥಿಗಳು ತಮ್ಮ ಆಸಕ್ತಿ ಏನು ಎಂಬುದನ್ನು ಖಚಿತಪಡಿಸಿಕೊಂಡು ಆ ದಿಕ್ಕಿನಲ್ಲಿ ಸಾಗಬೇಕು. ಸತತ ಪ್ರಯತ್ನ, ಆಸಕ್ತಿ ಇದ್ದರೆ ಯಶಸ್ಸು ಕಾಣಬಹುದು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಶಿಕ್ಷಣ ಮನುಷ್ಯನನ್ನು ವಿನಮ್ರನನ್ನಾಗಿ ಮಾಡುತ್ತದೆ. ವಿದ್ಯೆ ವಿನಯ ಕಲಿಸುತ್ತದೆ ಎಂದು ಬೆಂಗಳೂರಿನ ಯುವ ಲೇಖಕಿ ಆನಿಕಾ ಗಜೇಂದ್ರಗಡ ಹೇಳಿದರು.ರಾಮದುರ್ಗದ ಶ್ರೀಮತಿ ಸುಶೀಲಾತಾಯಿ ವೈ. ಕುಲಗೋಡ ಪಿ.ಯು. ಕಾಲೇಜಿನಲ್ಲಿ ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ಸ್ವರಚಿತ ಯುಫೋನಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಏನು ಎಂಬುದನ್ನು ಖಚಿತಪಡಿಸಿಕೊಂಡು ಆ ದಿಕ್ಕಿನಲ್ಲಿ ಸಾಗಬೇಕು. ಸತತ ಪ್ರಯತ್ನ, ಆಸಕ್ತಿ ಇದ್ದರೆ ಯಶಸ್ಸು ಕಾಣಬಹುದು. ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ಜ್ಞಾನ ಮನುಷ್ಯನನ್ನು ಸುಸಂಕೃತ ವ್ಯಕ್ತಿಯನ್ನಾಗಿಸುತ್ತದೆ ಎಂದು ತಿಳಿಸಿದರು.
ವಿಪಿಎಸ್ ಸದಸ್ಯರಾದ ಪಿ.ಎಂ.ಜಗತಾಪ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾ ಪ್ರಸಾರಕ ಸಮಿತಿಯ ಕೊಡುಗೆ ಅಮೂಲ್ಯವಾಗಿದೆ. ಈ ಸಂಸ್ಥೆಯಲ್ಲಿ ಅನೇಕ ಪ್ರತಿಭಾವಂತರು ಶಿಕ್ಷಣ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಭಾರತ ಜ್ಞಾನಕ್ಕೆ ಬಹಳ ಮಹತ್ವ ಕೊಟ್ಟಿದೆ ಎಂಬುವುದಕ್ಕೆ ಭಾರತ ಹೆಸರೇ ಸಾಕ್ಷಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಉದಾಹರಣೆ ಸಮೇತ ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ವಿದ್ಯಾಪ್ರಸಾರಕ ಸಮಿತಿಯ ಅಧ್ಯಕ್ಷ ಟಿ.ದಾಮೋದರ ಮಾತನಾಡಿದರು. ವಿನಾಯಕ ಗಜೇಂದ್ರಗಡ, ಎಂ.ಎಚ್. ರಾಠೋಡ, ಬಿ.ವೈ. ತಳವಾರ, ರಾಮವ್ವ ಪೂಜಾರ ಇದ್ದರು. ಎಂ.ಬಿ. ಪಾಟೀಲ ಸ್ವಾಗತಿಸಿ, ಪರಿಚಯಿಸಿದರು. ಡಾ.ಪಿ.ಬಿ. ತೆಗ್ಗಿಹಳ್ಳಿ ಪುಸ್ತಕ ಪರಿಚಯಿಸಿದರು. ಬಿ.ಆರ್. ಪಮ್ಮಾರ ನಿರೂಪಿಸಿದರು. ಎಸ್.ಆರ್. ಗೋಲನ್ನವರ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ನಿವೇದಿತಾ ಪಾಟೀಲ ವಂದಿಸಿದರು.
;Resize=(128,128))
;Resize=(128,128))