೭೫೦ಜನ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

| Published : Mar 18 2025, 12:34 AM IST

ಸಾರಾಂಶ

ಕರ್ನಾಟಕ ರತ್ನ ಡಾ.ಪುನೀತ್‌ರಾಜ್‌ಕುಮಾರ್ ೫೦ನೇವರ್ಷದ ಹುಟ್ಟುಹಬ್ಬದ ಪ್ರಯುಕ್ತ ಬೈಚಾಪುರದ ಅಪ್ಪು ಅಭಿಮಾನಿಗಳಿಂದ ಬೈಚಾಪುರ ಗ್ರಾಪಂಯ ೧೨ಗ್ರಾಮದ ೧೩ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ೭೫೦ಜನ ವಿದ್ಯಾರ್ಥಿಗಳಿಗೆ ಲೇಖನಾ ಸಾಮಾಗ್ರಿ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕರ್ನಾಟಕ ರತ್ನ ಡಾ.ಪುನೀತ್‌ರಾಜ್‌ಕುಮಾರ್ ೫೦ನೇವರ್ಷದ ಹುಟ್ಟುಹಬ್ಬದ ಪ್ರಯುಕ್ತ ಬೈಚಾಪುರದ ಅಪ್ಪು ಅಭಿಮಾನಿಗಳಿಂದ ಬೈಚಾಪುರ ಗ್ರಾಪಂಯ ೧೨ಗ್ರಾಮದ ೧೩ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ೭೫೦ಜನ ವಿದ್ಯಾರ್ಥಿಗಳಿಗೆ ಲೇಖನಾ ಸಾಮಾಗ್ರಿ ವಿತರಣೆ ಮಾಡಲಾಯಿತು.

ಬೈಚಾಪುರ ಗ್ರಾಪಂ ವ್ಯಾಪ್ತಿಯ ಭಕ್ತರಹಳ್ಳಿ, ಹನುಮೇನಹಳ್ಳಿ, ಚಿಕ್ಕನಹಳ್ಳಿ, ಬುಡ್ಡೇನಹಳ್ಳಿ, ಬೈಚಾಪುರ, ರಾಯವಾರ, ರಾಯವಾರ ಕಾಲೋನಿ, ಕ್ಯಾಶವಾರ, ರೆಡ್ಡಿಹಳ್ಳಿ ಮತ್ತು ಬಸವನಹಳ್ಳಿಯ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ೭೫೦ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಲಿಕಾ ಸಮಾಗ್ರಿಯ ಜೊತೆ ಸಿಹಿ ವಿತರಣೆ ಮಾಡಿ ವಿಶೇಷತೆ ಮೆರೆದರು.ಬೈಚಾಪುರ ಗ್ರಾಪಂ ಸದಸ್ಯ ವೆಂಕಟಾರೆಡ್ಡಿ ಮಾತನಾಡಿ ಅಪ್ಪು ಅಭಿಮಾನಿ ಬಳಗದಿಂದ ಪುನೀತ್‌ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ಲೇಖನಾ ಸಾಮಾಗ್ರಿ ವಿತರಣೆ ಮಾಡಿದ್ದೇವೆ. ಮುಂದಿನ ವರ್ಷದ ಹುಟ್ಟುಹಬ್ಬಕ್ಕೆ ಬೈಚಾಪುರ ಸೇರಿ ಅರಸಾಪುರ, ಬೊಮ್ಮಲದೇವಿಪುರ ಮತ್ತು ಅಕ್ಕಿರಾಂಪುರ ಗ್ರಾಪಂ ವ್ಯಾಪ್ತಿಯ ೫೦ಕ್ಕೂ ಅಧಿಕ ಶಾಲೆಯ ಮಕ್ಕಳಿಗೆ ವಿತರಣೆ ಮಾಡುತ್ತೇವೆ ಎಂದರು.ರಾಯವಾರ ಗ್ರಾಪಂ ಸದಸ್ಯ ನವೀನಕುಮಾರ್ ಮಾತನಾಡಿ ಕರ್ನಾಟಕ ರತ್ನ ಪುನೀತ್‌ರಾಜ್‌ಕುಮಾರ್ ಮಾಡಿದ ಸಮಾಜಸೇವೆ ಸದಾ ಅಭಿಮಾನಿಗಳ ಹೃದಯದಲ್ಲಿ ಜೀವಂತ. ಅಪ್ಪು ೫೦ನೇ ಹುಟ್ಟುಹಬ್ಬವು ನಮ್ಮೂರಿನ ವಿಶೇಷವಾಗಿ ಜನಸೇವೆ ಮಾಡುವ ಮೂಲಕ ಆಚರಣೆ ಮಾಡಿದ್ದೇವೆ. ಸರಕಾರಿ ಶಾಲೆಯ ಬಡಮಕ್ಕಳಿಗೆ ಅವಶ್ಯಕತೆ ಇರುವ ಲೇಖನಾ ಸಾಮಾಗ್ರಿ ನೀಡುವುದೇ ನಮ್ಮೇಲ್ಲರ ಉದ್ದೇಶ ಎಂದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ತಿಪ್ಪೇಶ್.ಆರ್.ಟಿ, ಪಿಡಿಓ ಉಮೇಶ್, ಸದಸ್ಯ ಕರೀಯಪ್ಪ, ಲಕ್ಷ್ಮೀನರಸಯ್ಯ, ಮುಖಂಡರಾದ ಹರೀಶ್, ವೆಂಕಟೇಶ್, ಕಾಮರಾಜು, ಮನೋಜ್, ಮುಖ್ಯಶಿಕ್ಷಕ ಶಿವಕುಮಾರ್ ಸೇರಿದಂತೆ ಅಪ್ಪು ಅಭಿಮಾನಿಗಳು ಇದ್ದರು.