ಎಮ್ಮೆಮಾಡು ಸೂಫೀ ಶಹೀದ್ , ಸೈಯ್ಯದ್ ಹಸ್ಸನ್ ಸಖಾಫ್ ಮತ್ತು ಇತರೆ ಸೂಫಿ ಶ್ರೇಷ್ಠರ ಸ್ಮರಣಾತ್ಮ ನಡೆಸಿಕೊಂಡು ಬರುತ್ತಿರುವ ಎಮ್ಮೆಮಾಡು ಉರೂಸ್ ಪ್ರಯುಕ್ತ ನೇರ್ಚೆ ಕುರಿಕ್ಕಲ್ ಕಾರ್ಯಕ್ರಮ ಸೋಮವಾರ ಜರುಗಿತು.
ನಾಪೋಕ್ಲು: ಇಲ್ಲಿಗೆ ಸಮೀಪದ ಎಮ್ಮೆಮಾಡು ಸೂಫೀ ಶಹೀದ್ , ಸೈಯ್ಯದ್ ಹಸ್ಸನ್ ಸಖಾಫ್ ಮತ್ತು ಇತರೆ ಸೂಫಿ ಶ್ರೇಷ್ಠರ ಸ್ಮರಣಾತ್ಮ ನಡೆಸಿಕೊಂಡು ಬರುತ್ತಿರುವ ಎಮ್ಮೆಮಾಡು ಉರೂಸ್ ಪ್ರಯುಕ್ತ ನೇರ್ಚೆ ಕುರಿಕ್ಕಲ್ ಕಾರ್ಯಕ್ರಮ ಸೋಮವಾರ ಜರುಗಿತು.
ಆರಂಭದಲ್ಲಿ ಪ್ರಾರ್ಥನೆ ಸಲ್ಲಿಸಿ ದಫ್ ಪ್ರದರ್ಶನ ನಡೆಯಿತು. ಅಧ್ಯಕ್ಷ ಹುಸೈನ್ ಸಖಾಫಿ ಹಾಗೂ ಧರ್ಮ ಗುರುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅನಂತರ ಮಸೀದಿ ಆವರಣದಲ್ಲಿ ಉರೂಸ್ ಕಾರ್ಯಕ್ರಮಗಳ ಮಾಹಿತಿಯನ್ನು ಅಧಿಕೃತವಾಗಿ ಜಮಾ ಅತ್‌ನ ಅಧ್ಯಕ್ಷ ಹುಸೈನ್ ಸಖಾಫಿ ಪ್ರಕಟಿಸಿದರು.ಕುರಿಕ್ಕಲ್ ಕಾರ್ಯಕ್ರಮ:
ಔಪಚಾರಿಕವಾಗಿ ಉರೂಸ್ ದಿನಾಂಕ ಪ್ರಕಟಿಸುವ ಕಾರ್ಯಕ್ರಮವಾಗಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಮ್ಮೆಮಾಡು ಉರೂಸ್ ಏ. 17ರಿಂದ 24ರವರೆಗೆ ನಡೆಯಲಿದೆ ಎಂದು ಪ್ರಕಟಿಸಲಾಯಿತು.ಉರೂಸ್ ಅಂಗವಾಗಿ ಏ.17ರಂದು ಜುಮಾ ನಮಾಝ್ ಬಳಿಕಉರೂಸ್ ಉದ್ಘಾಟನೆ ನೆರವೇರಲಿದೆ. ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರಿ ಮುತ್ತು ಕ್ಕೋಯ ತಂಙಳ್
ಮಖಾಂ ಝಿಯಾರತ್ ನಡೆಸುವರು. ಧ್ವಜಾರೋಹಣವನ್ನು ತಾಜುಲ್ಇಸ್ಲಾಂ ಮುಸ್ಲಿಂ ಜಮಾಯತ್ ಅಧ್ಯಕ್ಷ ಹುಸೈನ್ ಸಖಾಫಿ ನೆರವೇರಿಸುವರು .ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಏ. 24ರವರೆಗೆ ನೆರವೇರಲಿವೆ ಎಂದರು.ಬಳಿಕ ಹಣ್ಣು ಹಂಪಲು ಹಾಗೂ ಫಲಹಾರಗಳನ್ನು ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸಲಾಯಿತು.
ಈ ಸಂದರ್ಭ ಇಸ್ಲಾಂ ಮುಸ್ಲಿಂ ಜಮಾಯಿತಿನ ಮೊಯ್ದು ಮಾಹಿನ್ ಚಂಬಾರಂಡ, ಅಬ್ದುಲ್ ರಹಿಮಾನ್, ಪ್ರಧಾನ ಕಾರ್ಯದರ್ಶಿ, ಸೈಯ್ಯದ್ ಝಕರಿಯ ಸಅದಿ ಅಲ್ ಐದರೂಸಿ, ಖಜಾಂಜಿ ಅಬ್ದುಲ್ ಮಜೀದ್, ಮುದರ್ರಿಸ್ ಹಂಸ ಸಖಾಫಿ, ಮೇಲ್ಮುರಿ, ಖತೀಬ್ ರಾಝಿಕ್ ಫೈಝಿ ಪಟ್ಟಾಂಬಿ, ಸಹ ಕಾರ್ಯದರ್ಶಿಗಳಾದ ಅಶ್ರಫ್ ಚಂಬಾರಂಡ, ಹನೀಫಾ ಎಂ.ಎ., ಸಮಿತಿ ಸದಸ್ಯರು, ಶಹೀದಿಯಾ ಅನಾಥಾಲಯದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಊರಿನ ಹಿರಿಯ, ಕಿರಿಯ ಮತಬಾಂಧವರು ಉಪಸ್ಥಿತರಿದ್ದರು.