ವಿಕಲಚೇತನ ಮಕ್ಕಳಲ್ಲಿ ನಿರೀಕ್ಷೆಗೂ ಮೀರಿ ಶೈಕ್ಷಣಿಕ ಪ್ರಗತಿ

| Published : Mar 17 2024, 01:47 AM IST

ವಿಕಲಚೇತನ ಮಕ್ಕಳಲ್ಲಿ ನಿರೀಕ್ಷೆಗೂ ಮೀರಿ ಶೈಕ್ಷಣಿಕ ಪ್ರಗತಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಾದ್ಯಂತ ವಿಕಲಚೇತನ ಶೈಕ್ಷಣಿಕ ಪ್ರಗತಿಯಲ್ಲಿ ಮಾರ್ಗದರ್ಶಿ ವಿಕಲಚೇತನ ಸ್ವಯಂ ಸೇವಾ ಸಂಸ್ಥೆ ತನ್ನದೇ ಆದ ಕರ್ತವ್ಯವನ್ನು ಮಾಡುತ್ತಿದ್ದು ಇದರಿಂದಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಕಲಚೇತನ ಮಕ್ಕಳು ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ವಲಯ ವ್ಯವಸ್ಥಾಪಕ ಕಿರಣ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲೆಯಾದ್ಯಂತ ವಿಕಲಚೇತನ ಶೈಕ್ಷಣಿಕ ಪ್ರಗತಿಯಲ್ಲಿ ಮಾರ್ಗದರ್ಶಿ ವಿಕಲಚೇತನ ಸ್ವಯಂ ಸೇವಾ ಸಂಸ್ಥೆ ತನ್ನದೇ ಆದ ಕರ್ತವ್ಯವನ್ನು ಮಾಡುತ್ತಿದ್ದು ಇದರಿಂದಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಕಲ ಚೇತನ ಮಕ್ಕಳು ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ವಲಯ ವ್ಯವಸ್ಥಾಪಕ ಕಿರಣ್ ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಗದರ್ಶಿ ಸಂಸ್ಥೆ ಜಿಲ್ಲಾದ್ಯಂತ ವಿಕಲಚೇತನ ಮಕ್ಕಳ ಶ್ರೇಯೋಭಿವೃದ್ದಿಗೆ ಕೆಲಸ ಮಾಡುತ್ತಿದ್ದು, ಅಂಗವಿಕಲ ಮಕ್ಕಳಿಗೆ ಬೇಕಾದ ಚಟುವಟಿಕೆಗಳನ್ನು ಮಾಡುತ್ತಿದ್ದು, ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಯಾವ ರೀತಿ ತರಬೇತಿ ನೀಡಬೇಕು ಎಂಬ ಯೋಜನೆ ರೂಪಿಸುವ ಜೊತೆಗೆ ಅಂಗವಿಕಲ ಮಕ್ಕಳ ಫಲಿತಾಂಶ ಕಡಮೆ ಇದ್ದುದರಿಂದ ೮ ಮತ್ತು ೯ನೇ ತರಗತಿ ಹಂತದಲ್ಲೇ ತರಬೇತಿ ನೀಡಿದ್ದರಿಂದಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದರು. ಎಸ್ಸೆಸ್ಸೆಲ್ಸಿ ನಂತರ ಏನು ಮಾಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಿ, ಮಾರ್ಗದರ್ಶಿ ಸಂಸ್ಥೆ ಜಿಲ್ಲೆಯಲ್ಲಿ ಕಳೆದ ವರ್ಷಗಳಲ್ಲಿ ೧೦ ವರ್ಷಗಳಿಂದ ಕೆಲಸ ಮಾಡುತ್ತಿದೆ, ಶೇ.೨೦ರಷ್ಟಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶ ಈಗ ಶೇ.೮೬ಕ್ಕೆ ಹೆಚ್ಚಿದೆ, ಈ ಬಾರಿ ೭೫ ಮತ್ತು ಪಿಯುಸಿ ಪರೀಕೆಯನ್ನು ೫೦ ವಿಕಲಚೇತನ ಮಕ್ಕಳು ಬರೆಯುತ್ತಿದ್ದು, ಅವರಿಗೆ ಬೇಕಾದ ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ ಎಂದರು.ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಲು ಬೇಕಾದ ಎಲ್ಲಾ ರೀತಿಯ ತರಬೇತಿ ನೀಡಲಾಗುತ್ತಿದ್ದು, ಇದರಿಂದ ವಿಭಾಗೀಯ ಮತ್ತು ರಾಜ್ಯ ಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತರಬೇತಿ ನೀಡಲಾಗುತ್ತಿದ್ದು, ಉನ್ನತ ಶಿಕ್ಷಣಕ್ಕೂ ದಾಪುಗಾಲು ಇಟ್ಟಿದ್ದಾರೆ ಎಂದರು. ವಸತಿ ಶಾಲೆಗಳಲ್ಲಿ ಅಂಗವಿಕಲ ಮಕ್ಕಳಿಗೆ ಮೀಸಲಾತಿ ಇದ್ದು, ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಉದ್ಯೋಗ ಪಡೆಯಲು ಸಾಧ್ಯವಾಗಿದೆ. ಉದ್ಯೋಗ, ಶಿಕ್ಷಣದಲ್ಲಿ ವಿಕಲಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಹಿಂದೆ ಅಂಗವಿಕಲರು ಸಮಗ್ರ ದಾಖಲೆ ಪಡೆದುಕೊಳ್ಳಲು ಕಷ್ಟವಾಗುತ್ತಿತ್ತು. ಈಗ ನಮ್ಮ ಸಂಸ್ಥೆ ಇದರ ಬಗ್ಗೆ ಅರಿವು ಮೂಡಿಸಲಾಗಿದೆ. ಅಂಗವಿಕರಲಿಗೆ ಶೈಕ್ಷಣಿಕವಾಗಿ ನೆರವಾಗುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯವರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಭಿಷೇಕ್ ಷರೀಫ್, ಚಂದ್ರಮ್ಮ, ಪ್ರಕಾಶ್, ಹಂಸವೇಣಿ ಇದ್ದರು.