ಸಾರಾಂಶ
ಮೈಸೂರಿನ ಗ್ರಾಮಾಂತರ ಬುದ್ದಿಜೀವಿಗಳ ಬಳಗದ ವತಿಯಿಂದ ನೀಡಲಾಗುವ ವಿಶ್ವಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿಗೆ ಈರಮಂಡ ಹರಿಣಿ ವಿಜಯ್ ಆಯ್ಕೆಯಾಗಿದ್ದಾರೆ.
ಮಡಿಕೇರಿ : ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ ನೀಡಲಾಗುವ ವಿಶ್ವಮಾನ್ಯ ಕನ್ನಡಿಗ ರಾಜ್ಯ ಪ್ರಶಸ್ತಿಗೆ ಬರಹಗಾರ್ತಿ, ಚಿತ್ರ ನಿರ್ಮಾಪಕಿ, ನಟಿ ಹಾಗೂ ಸಹನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಆಯ್ಕೆಯಾಗಿದ್ದಾರೆ.
ಗ್ರಾಮಾಂತರ ಬುದ್ಧಿಜೀವಿಗಳ ಬಳಗದ 40ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸಭಾಂಗಣದಲ್ಲಿ ಫೆ.23 ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯುವ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಈರಮಂಡ ಹರೀಣಿ ವಿಜಯ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಸಾಹಿತ್ಯೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ್ ಜೋಶಿ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಈರಮಂಡ ಹರೀಣಿ ವಿಜಯ್ ಅವರು ಸಾಹಿತ್ಯ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕೊಡಗಿನ ಪ್ರತಿಷ್ಠಿತ ಕೊಡಗಿನ ಗೌರಮ್ಮ ದತ್ತಿನಿಧಿ ಪ್ರಶಸ್ತಿ ಹಾಗೂ ಗೋಪಾಲಕೃಷ್ಣ ದತ್ತಿನಿಧಿ ಪ್ರಶಸ್ತಿಗೂ ಈ ಹಿಂದೆ ಭಾಜನರಾಗಿದ್ದರು.-------------------------------
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ : ಶ್ರೀಮಂಗಲ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಈ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ 11 ಕೆವಿ ಮಾರ್ಗಗಳಾದ ಎಫ್1 ಬಿರುನಾಣಿ, ಎಫ್2 ಕುಟ್ಟ, ಎಫ್3 ಶ್ರೀಮಂಗಲ, ಎಫ್ 4 ಕಣ್ಣೂರು, ಎಫ್5 ಬಾಡಗ, ಎಫ್6 ಬೀರುಗ, ಎಫ್7 ಶೆಟ್ಟಿಗೇರಿ, ಮಾರ್ಗಗಳಲ್ಲಿ ಫೆ.21 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.ಆದ್ದರಿಂದ ಕಾಯಿಮನೆ, ಮಂಚಳ್ಳಿ, ಪೂಜೆಕಲ್ಲು, ನಾಲ್ಲೂರು, ನಾಥಂಗಾಲ, ತೈಲ, ಕುಟ್ಟ, ಸಿಂಕೋನ, ಕೆ.ಎಂ ಕೊಲ್ಲಿ, ಶ್ರೀಮಂಗಲ, ಹರಿಹರ, ನಾಲ್ಕೇರಿ, ಅಲುಮಡಿಕೇರಿ, ಚೀಪೆಕೊಲ್ಲಿ, ಗುಂಡಮಾಡು, ಎರ್ಮಾಡು, ಚೂರಿಕಾಡು, ಪಲ್ಲೇರಿ, ಕೆ.ಬಾಡಗ, ನಾಣಾಚಿ, ಬೊಳ್ಳೇರ ಗೇಟ್, ಕೆಟ್ಟಿಗೇರಿ, ತಾವಳಗೇರಿ, ಗೂಟುಕೊಲ್ಲಿ, ಹೊಗರೆ, ಹೊಸಕೇರಿ, ಈಸ್ಟ್-ನೆಮ್ಮಲೆ, ಕೆಕೆಆರ್, ಬಿರುಗ, ಇರ್ಪು, ಚಪ್ಪಡಿಕೊಲ್ಲಿ, ಕುಮಟೂರು, ಕಾಕೂರು, ಕುರ್ಚಿ, ವೆಸ್ಟ್-ನೆಮ್ಮಲೆ, ಬಾಡಗಕೇರಿ, ಕೂಟಿಯಾಲು, ಬಿರುನಾಣಿ, ಪೂಕೆಳ, ಕಾಳಕೊರೆ, ಪರಕಟಕೇರಿ, ತೇರಾಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ಹಾಗೆಯೇ 66/11ಕೆವಿ ಪೊನ್ನಂಪೇಟೆ ವಿದ್ಯುತ್ ವಿತರಣಾ ಕೇಂದ್ರದ ನಿರ್ವಹಣ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಈ ವಿದ್ಯುತ್ ಕೇಂದ್ರದಿಂದ ಹೊರಹೊಮ್ಮುವ 11ಕೆವಿ ಎಫ್12 ಬೆಕ್ಕೆಸೊಡ್ಲೂರು, ಎಫ್1 ನಲ್ಲೂರು, ಎಫ್2 ಬಾಳೆಲೆ, ಎಫ್4 ತಿತಿಮತಿ, ಎಫ್5 ಪಾಲಿಬೆಟ್ಟ, ಎಫ್6 ಬೇಗೂರು, ಎಫ್7 ಗೋಣಿಕೊಪ್ಪ, ಎಫ್13 ದೇವನೂರು, ಎಫ್8 ಪೊನ್ನಂಪೇಟೆ, ಎಫ್9 ಹಾತೂರು, ಎಫ್10 ಹೈಸೂಡ್ಲೂರು ಮಾರ್ಗಗಳಲ್ಲಿ ಗ್ರಾಮಗಳಾದ ಸುಳುಗೋಡು ಕೋಣನಕಟ್ಟೆ, ಧನುಗಾಲ, ನಲ್ಲೂರು, ಜಾಗಲೆ, ಕಾರ್ಮಾಡು, ಕೊಟ್ಟಗೇರಿ, ನಿಟ್ಟೂರು, ಬಾಳೆಲೆ, ರಾಜಪುರ, ದೇವನೂರು, ಮಲ್ಲೂರು, ವೆಡ್ಡರಮಾಡು, ಮಲ್ಲಂಗೆರೆ, ಕಿರುಗೂರು, ಪೊನ್ನಂಪೇಟೆ, ಗೋಣಿಕೊಪ್ಪಲು, ತಿತಿಮತಿ, ಹಾತೂರು, ಅರವತೋಕ್ಲು, ಅತ್ತೂರು, ಕಾನೂರು, ದೇವರಪುರ, ಮಾಯಮುಡಿ, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದರು.