ಸಾರಾಂಶ
ಶಿಗ್ಗಾಂವಿ: ತಾಲೂಕಿನ ಪ್ರತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ಥಾಪನೆ ಮಾಡುವ ಜತೆಗೆ ಶಿಗ್ಗಾಂವಿ ತಾಲೂಕನ್ನು ಮಾದರಿ ಮಾಡಲು ಸಂಘಗಳ ಮೂಲ ಸೌಕರ್ಯಗಳ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ತಿಪ್ಪಣ್ಣ ಸಾತಣ್ಣವರ ತಿಳಿಸಿದರು.ಪಟ್ಟಣದ ಹನುಮಂತಗೌಡ್ರ ಕಲ್ಯಾಣ ಮಂಟಪದಲ್ಲಿ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ಶಿಗ್ಗಾಂವಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ(ಹಾವೆಮುಲ್) ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಹಾಗೂ ನಂದಿನಿ ಡೀಲರ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹಾಲು ಉತ್ಪಾದಕರ ಸಂಘಗಳ ಹಾಲಿನ ಪ್ರಮಾಣ ಹಾಗೂ ಗುಣಮಟ್ಟ ಹೆಚ್ಚಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಸಭೆಯ ಅಧ್ಯಕ್ಷತೆಯನ್ನ ಹಾವೇರಿ ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ವಹಿಸಿದ್ದರು. ಹಾವೆಮುಲ್ ನಾಮನಿರ್ದೇಶಕ ಶಂಕರಗೌಡ ಪಾಟೀಲ, ನಿರ್ದೇಶಕ ಶಶಿಧರ ಯಲಿಗಾರ, ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಎಸ್.ಎಂ., ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಗ್ಯಾರಂಟಿ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಗುಡ್ಡಪ್ಪ ಜಲದಿ, ಗ್ಯಾರಂಟಿ ಸಮಿತಿಯ ತಾಲೂಕಾದ್ಯಕ್ಷ ಎಸ್.ಎಫ್. ಮಣಕಟ್ಟಿ, ಮುಖಂಡರಾದ ಶಿವಾನಂದ ಬಿಳೆಕುದರಿ, ಮಾಲತೇಶ ಸಾಲಿ ಇತರರು ಇದ್ದರು.ಹೆಪಟೈಟಿಸ್ ಮುಕ್ತ ದೇಶವಾಗಿಸಲು ಕೈಜೋಡಿಸಿಸವಣೂರು: ಹೆಪಟೈಟಿಸ್ ಮುಕ್ತ ದೇಶವನ್ನಾಗಿಸುವ ಕಾರ್ಯಕ್ಕೆ ಪ್ರತಿಯೊಬ್ಬ ನಾಗರಿಕರು ಸಾರ್ವಜನಿಕ ಅಸ್ಪತ್ರೆ ಹಾಗೂ ತಾಲೂಕಾ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಿಂದ ಲಸಿಕೆ ಹಾಕಿಸಿಕೊಂಡು ಸಹಕರಿಸಿದಾಗ ಮಾತ್ರ ಹೆಪಟೈಟಿಸ್ ಎಂಬ ರೋಗವನ್ನು ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾಲೂಕು ಸಾರ್ವಜನಿಕ ಆಡಳಿತ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೆಗೌಡ್ರ ತಿಳಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿದ ವಿಶ್ವ ಹೆಪಟೈಟಿಸ್ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯ ಕಾರ್ಯಕರ್ತೆಯರು ಪ್ರಥಮದಲ್ಲಿ ತಪ್ಪದೆ ಲಸಿಕೆ ಪಡೆದುಕೊಂಡು ನಂತರ ಸಾರ್ವಜನಿಕರಿಗೆ ಮಾಹಿತಿ ನೀಡಿ ಲಸಿಕೆಗೆ ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ಟಿಎಚ್‌ಒ ಚಂದ್ರಕಲಾ ಜೆ., ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಾದ ವ್ಯವಸ್ಥಾಪಕಿ ಸುಷ್ಮಾ ನೀರಲಗಿ, ನಾರಾಯಣ ದಾಯಿಪಲ್ಲೆ, ನಾಗರಾಜ ಹಾವೇರಿ, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಪ್ರಭು ಕಟ್ಟಿ, ಶುಶ್ರೂಷಾಧಿಕಾರಿಗಳಾದ ಅನಿತಾ ಬೆಳವಲಕೊಪ್ಪ, ಸಮೀನಾ, ಮಾಲಿ, ಯಲ್ಲಮ್ಮ ನವಲಿ, ಫಾರ್ಮಸಿ ಅಧಿಕಾರಿಗಳಾದ ರಾಮಕೃಷ್ಣ ಘಾಟಗೆ, ಶಾಂತವೀರೇಶ ಯಳಮಲಿ, ಆಪ್ತ ಸಮಾಲೋಚಕ ಜಿಲಾನಿ ನವಲಗುಂದ, ಮಹಾಂತೇಶ ಹೊಳೆಮ್ಮನವರ, ಮಂಜುನಾಥ ಸವಣೂರ ಆಶಾ ಕಾರ್ಯಕರ್ತೆಯರು ಇತರರು ಇದ್ದರು.