ಮರಾಠ ಸಮಾಜದ ಅಭಿವೃದ್ಧಿಗೆ ಪ್ರಯತ್ನ ಅಗತ್ಯ

| Published : Aug 19 2024, 12:56 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಮರಾಠ ಸಮಾಜದ ಅಭ್ಯುದಯಕ್ಕೆ ಸಂಘಟಿತ ಪ್ರಯತ್ನ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಮರಾಠ ಸಮಾಜದ ಯುವ ಮುಖಂಡ ಕಿರಣ ಜಾಧವ ಹೇಳಿದರು. ನಗರದಲ್ಲಿ ಭಾನುವಾರ ನಡೆದ ಮರಾಠ ಸಮುದಾಯದ ಪ್ರತಿಬಿಂಬ ಸಭೆಯಲ್ಲಿ ಅವರು ಮಾತನಾಡಿದರು. ಮರಾಠರನ್ನು 3ಬಿ ನಲ್ಲಿ ಎಣಿಸಲಾಗುತ್ತದೆ. 2ಎಯಲ್ಲಿ ಲೆಕ್ಕ ಹಾಕಿದರೆ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮರಾಠ ಸಮಾಜದ ಅಭ್ಯುದಯಕ್ಕೆ ಸಂಘಟಿತ ಪ್ರಯತ್ನ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಮರಾಠ ಸಮಾಜದ ಯುವ ಮುಖಂಡ ಕಿರಣ ಜಾಧವ ಹೇಳಿದರು. ನಗರದಲ್ಲಿ ಭಾನುವಾರ ನಡೆದ ಮರಾಠ ಸಮುದಾಯದ ಪ್ರತಿಬಿಂಬ ಸಭೆಯಲ್ಲಿ ಅವರು ಮಾತನಾಡಿದರು. ಮರಾಠರನ್ನು 3ಬಿ ನಲ್ಲಿ ಎಣಿಸಲಾಗುತ್ತದೆ. 2ಎಯಲ್ಲಿ ಲೆಕ್ಕ ಹಾಕಿದರೆ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ. ಮೇಲಾಗಿ ಮರಾಠ ಸಮಾಜ ಬಾಂಧವರಿಗೆ ಇತರೆ ಸರ್ಕಾರಿ ಸೌಲಭ್ಯಗಳ ನೇಮಕಾತಿಗೆ ಅನುಕೂಲವಾಗಲಿದೆ. ಮರಾಠ ಸಮಾಜದವರೆಲ್ಲರೂ ಸಂಘಟಿತರಾಗಿ ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ಮರಾಠ ಸಮುದಾಯದ ಮೀಸಲಾತಿ ವಿಚಾರವನ್ನು ನಿರ್ಲಕ್ಷಿಸಲಾಗಿದೆ. ಇದಕ್ಕೆ ರಾಜಕೀಯ ನಿರಾಸಕ್ತಿಯೇ ಕಾರಣ. ಇದನ್ನು ಗಂಭೀರವಾಗಿ ಪರಿಗಣಿಸಿ ಮರಾಠ ಸಮುದಾಯವನ್ನು 3ಬಿಯಿಂದ 2ಎಗೆ ಇಳಿಸುವಂತೆ ಮರಾಠ ಸಮುದಾಯದವರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಈ ಚಿಂತನಾ ಸಭೆ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ವೀರ ಶಿವಾಜಿ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಕಮಲೇಶರಾವ್ ಫಡತಾರೆ ಮಾತನಾಡಿ, ಮರಾಠ ಬಾಂಧವರು ಒಗ್ಗಟ್ಟಿನಿಂದ ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುನೀಲ ಜಾಧವ, ರಾಹುಲ್ ಮುಚ್ಚಂಡಿ, ರಾಜನ್ ಜಾಧವ, ಸೀಮಾ ಪವಾರ, ಪ್ರಜ್ಞಾ ಶಿಂಧೆ, ಪ್ರವೀಣ ಪಾಟೀಲ ಸೇರಿದಂತೆ ಉತ್ತರ ಭಾಗದ ಮರಾಠ ಸಮಾಜದ ಬಾಂಧವರು ಉಪಸ್ಥಿತರಿದ್ದರು.