ಸಾರಾಂಶ
ಉದ್ಯಮಿ ಯು.ಟಿ. ಫಯಾಝ್ ತನ್ನ ಸಂಗಡಿಗರ ಜೊತೆಗೂಡಿ ಸೇತುವೆಯಲ್ಲಿ ತುಂಬಿದ್ದ ಮಣ್ಣು, ಮರಳನ್ನು ತೆರವು ಮಾಡಿ ನೀರು ಹರಿಯುವಂತೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಉಪ್ಪಿನಂಗಡಿ: ಶನಿವಾರ ಸಂಜೆ ಉಪ್ಪಿನಂಗಡಿಯಲ್ಲಿ ಸಾಧಾರಣ ಮಳೆ ಸುರಿದು ನೇತ್ರಾವತಿ ಸೇತುವೆಯಲ್ಲಿ ನೀರು ನಿಂತು ಪಾದಚಾರಿಗಳಿಗೆ ಸಂಕಷ್ಟ ಎದುರಾಗಿತ್ತು. ಆಗ ಇಳಂತಿಲ ಗ್ರಾಪಂ ಮಾಜಿ ಸದಸ್ಯ, ಉದ್ಯಮಿ ಯು.ಟಿ. ಫಯಾಝ್ ಮತ್ತವರ ತಂಡ ಸ್ವಯಂ ಪ್ರೇರಿತ ಶ್ರಮದಾನದ ಮೂಲಕ ಸೇತುವೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ನಾಗರಿಕರಿಗೆ ಅನುಕೂಲತೆಯನ್ನು ಕಲ್ಪಿಸಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ಶ್ಲಾಘನೆ ವ್ಯಕ್ತವಾಗಿದೆ.
ಸೇತುವೆಯ ಇಕ್ಕೆಲಗಳಲ್ಲಿ ಮಣ್ಣು, ಮರಳು ತುಂಬಿ ಮಳೆ ನೀರು ಸರಾಗವಾಗಿ ಹರಿಯಲು ತೊಡಕಾಗಿತ್ತು. ಇದರಿಂದಾಗಿ ಮಳೆ ನೀರು ಸೇತುವೆಯಲೇ ನಿಂತು ವಾಹನ ಸಂಚಾರದ ವೇಳೆ ಪಾದಚಾರಿಗಳಿಗೆ ನಡೆದುಹೋಗಲು ಸಮಸ್ಯೆ ಎದುರಾಗಿತ್ತು. ಸಮಸ್ಯೆಯನ್ನು ಮನಗಂಡ ಉದ್ಯಮಿ ಯು.ಟಿ. ಫಯಾಝ್ ತನ್ನ ಸಂಗಡಿಗರ ಜೊತೆಗೂಡಿ ಸೇತುವೆಯಲ್ಲಿ ತುಂಬಿದ್ದ ಮಣ್ಣು, ಮರಳನ್ನು ತೆರವು ಮಾಡಿ ನೀರು ಹರಿಯುವಂತೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಇವರ ಈ ಕಾರ್ಯಕ್ಕೆ ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಶ್ಲಾಘಿಸಿದ್ದಾರೆ.