ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಶ್ರಮ: ಚಿದಾನಂದ್ ಗೌಡ

| Published : Feb 15 2024, 01:36 AM IST

ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಸಂಸ್ಥೆಗಳ ಶ್ರಮ: ಚಿದಾನಂದ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಗಡಿಯಲ್ಲಿ ಯೋಧರು ಹೇಗೆ ಕೆಲಸ ಮಾಡುತ್ತಾರೋ, ಹಾಗೆ ನಮ್ಮ ಶಿಕ್ಷಣ ಸಂಸ್ಥೆಗಳೂ ಕೆಲಸ ಮಾಡುತ್ತಿವೆ. ಹಣ ನೀಡಿದರೆ ಶಿಕ್ಷಣ ದೊರೆಯುತ್ತದೆ ಎಂಬುದು ಸುಳ್ಳು, ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ಅವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ನಗರದ ಜಾಜಿಕಟ್ಟೆಯ ಹತ್ತಿರದ ಶಾಂತಿನಿಕೇತನ ವಿದ್ಯಾಸಂಸ್ಥೆಯಲ್ಲಿ ನಡೆದ ‘ಶಾಂತಿನಿಕೇತನ ಸಂಭ್ರಮ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು, ಖಾಸಗಿ ಶಿಕ್ಷಣ ಸಂಸ್ಥೆಗಳ ಮಧ್ಯೆ ಒಂದು ಅರೋಗ್ಯಕರವಾದ ಸ್ಪರ್ಧೆ ಇರಬೇಕು, ಆ ಮೂಲಕ ದೇಶ ಕಟ್ಟುವ ಕೆಲಸವಾಗಬೇಕು. ಶಿರಾ ನಗರ ಜಿಲ್ಲಾ ಕೇಂದ್ರವಾಗಿ, ಶೈಕ್ಷಣಿಕ ನಗರಿಯಾಗಿ ಮುಂದಿನ ದಿನಗಳಲ್ಲಿ ಬೆಳೆಯಲಿದೆ, ಭವಿಷ್ಯದಲ್ಲಿ ನಮ್ಮ ಮಕ್ಕಳು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗದೆ ಇಲ್ಲಿಯೇ ಜೀವನ ರೂಪಿಸಿಕೊಳ್ಳಬೇಕು ಎಂದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಿಂತ ಅವರ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ಮಕ್ಕಳಿಗೆ ಆಸ್ತಿ ಮಾಡುವ ಬಗ್ಗೆ ಚಿಂತಿಸುವ ಬದಲು ಅವರ ನೆಮ್ಮದಿಯ ಜೀವನಕ್ಕೆ ಬೇಕಾದ ಸಂಸ್ಕಾರ ನೀಡಲು ಗಮನ ಹರಿಸಿ ಎಂದರು.

ಬರಗೂರಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಿ.ಎನ್.ಪರಮೇಶ್ ಗೌಡ ಮಾತನಾಡಿ, ಶಾಂತಿನಿಕೇತನ ಸಂಸ್ಥೆಯು ತಾಲೂಕಿನ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅಗ್ರಸ್ಥಾನ ಪಡೆದಿದೆ. ಇಲ್ಲಿನ ಶಿಕ್ಷಕರು ಉತ್ತಮ ವಿದ್ಯಾರ್ಹತೆಯೊಂದಿಗೆ ಬೋಧನಾ ಕೌಶಲ್ಯ ಹೊಂದಿದ್ದಾರೆ, ಪೋಷಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಾಂತಿನಿಕೇತನ ಸಂಸ್ಥೆ ಉತ್ತಮ ಆಯ್ಕೆ ಎಂದರು.

ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಪಿ. ಪಾಂಡುರಂಗಯ್ಯ, ಕಾರ್ಯದರ್ಶಿ ರೇಣುಕಾ, ಮುಖ್ಯ ಶಿಕ್ಷಕಿ ಪ್ರಿಯಾಂಕ ಕೃಷ್ಣಮೂರ್ತಿ, ಪ್ರತಿಭಾ ಸತೀಶಕುಮಾರ್, ಪ್ರಜ್ವಲ್, ಶಿಕ್ಷಕಿಯರಾದ ಲಕ್ಷ್ಮೀ, ಚಂದನ, ಶೋಭಾ, ದಿವ್ಯ, ಸಹನಾ ಸೇರಿ ಹಲವರು ಹಾಜರಿದ್ದರು.