ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಶ್ರಮಿಸಬೇಕು: ಶ್ರೀಗಳು
KannadaprabhaNewsNetwork | Published : Oct 21 2023, 12:30 AM IST
ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಶ್ರಮಿಸಬೇಕು: ಶ್ರೀಗಳು
ಸಾರಾಂಶ
ಕೂಡಲಿ ಶೃಂಗೇರಿ ಪೀಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು
ಹೊಳೆಹೊನ್ನೂರು: ಶಿಕ್ಷಣ ವ್ಯವಸ್ಥೆಯನ್ನು ದೂರುವ ವ್ಯರ್ಥ ಪ್ರಯತ್ನ ಕೈ ಬಿಟ್ಟು, ವ್ಯವಸ್ಥೆ ಸರಿಪಡಿಸುವುದಕ್ಕೆ ನಮ್ಮ ಕೊಡುಗೆ ಏನು ಎಂಬುದನ್ನು ಅರಿಯಬೇಕು ಎಂದು ಕೂಡಲಿ ಶೃಂಗೇರಿ ಪೀಠದ ಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು ನುಡಿದರು. ಇಲ್ಲಿಗೆ ಸಮೀಪದ ಕೂಡ್ಲಿಯ ಶೃಂಗೇರಿ ಮಹಾ ಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾಂಬ ಪೀಠದಲ್ಲಿ ಶುಕ್ರವಾರ ಶರವನ್ನರಾತ್ರಿ ಪ್ರಯುಕ್ತ ಧರ್ಮ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಪ್ರಜ್ಞಾಪೂರ್ವಕ ಕರ್ಮಗಳನ್ನು ನೆರವೇರಿಸುವತ್ತ ಚಿತ್ತ ಹರಿಸಬೇಕಾಗಿದೆ. ವ್ಯರ್ಥವಿಚಾರಗಳು ನಮ್ಮ ಕ್ಷೇತ್ರದಲ್ಲಿ ಆಸ್ಪದ ನೀಡಬಾರದು. ಇಂದ್ರಿಯಗಳ ಮೇಲೆ ಹಿಡಿತ ಸಾಧಿಸಬೇಕು. ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ರೂಢಿಗೆ ತರಬೇಕು. ಶಿಕ್ಷಣದ ಸಾಮರ್ಥ್ಯ ವೃದ್ಧಿ ಆದಾಗ ವ್ಯರ್ಥ ವಿಚಾರಗಳನ್ನು ತಡೆಯಬಹುದು ಎಂದರು. ಸರಸ್ವತಿಯ ಪೂಜೆ ನೆರವೇರಿಸಿದ ಕೂಡಲೆ ಜ್ಞಾನಾರ್ಜನೆ ಲಭಿಸುವುದಿಲ್ಲ. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಪಾಲಕರು ಕಾರ್ಯ ಪ್ರವೃತರಾಗಿಬೇಕಿದೆ. ಪೂಜೆ ನಂತರ ದಿನಪೂರ್ತಿ ಮಕ್ಕಳು ಏನು ಮಾಡುತ್ತಾರೆ ಎಂಬುದನ್ನು ಗಮನಿಸಬೇಕು ಎಂದರು. ಹೆಬ್ಬಳಿ ಚೈತನ್ಯಾಶ್ರಮದ ದತ್ತಾವಧೂತ ಅಭಿನವ ಶ್ರೀಗಳು, ಗಣೇಶ ಪ್ರಸಾದ್, ರಾಜೇಶ್ ಶಾಸ್ತ್ರಿ, ಅನಂತದತ್ತ, ಕೇಶವ ಮೂರ್ತಿ, ಶ್ರೀನಿವಾಸ್ ಐಯ್ಯರ್, ಕುಮಾರ್, ಚಂದ್ರಶೇಖರ್, ರಘು ಭಟ್ ಇತರರಿದ್ದರು. - - - -20ಎಚ್‍ಎಚ್‍ಆರ್‌ಪಿ06: