ಬುಡಕಟ್ಟು ಜನರ ಜೀವನಶೈಲಿ, ಸಂಸ್ಕೃತಿ, ಪರಂಪರೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿಯ ವಿಶೇಷತೆ ಎಂದರೆ ಕಚೇರಿಯಲ್ಲಿ ಕಾರ್ಯಕ್ರಮ ಮಾಡದೆ, ನೇರವಾಗಿ ಬುಡಕಟ್ಟು ಜನರ ವಾಸಸ್ಥಳವಾದ ಕಂಚುಗಳ್ಳಿ ಹಾಡಿಗೆ ಅಧಿಕಾರಿಗಳು ಭೇಟಿ ನೀಡಿ ಅವರೊಂದಿಗೆ ಬೆರೆಯುವುದು. ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಇಲ್ಲಿ ಅವರ ಹಕ್ಕು, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದರು.
ಕನ್ನಡಪ್ರಭ ವಾರ್ತೆ ಹನೂರು
ಬುಡಕಟ್ಟು ಜನರ ಜೀವನ ಶೈಲಿ ಅರ್ಥ ಮಾಡಿಕೊಂಡು ಅವರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಲಾಗುತ್ತಿದೆ ಎಂದು ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಗಿರಿಜಾಂಬ ಅವರು ತಿಳಿಸಿದರು.ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ತಾಲೂಕಿನ ಕಂಚುಗಳ್ಳಿ ಹಾಡಿಯಲ್ಲಿ ಆಯೋಜಿಲಾಗಿದ್ದ 32ನೇ ಅಂತಾರಾಷ್ಟ್ರೀಯ ಆದಿವಾಸಿ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬುಡಕಟ್ಟು ಜನರ ಜೀವನಶೈಲಿ, ಸಂಸ್ಕೃತಿ, ಪರಂಪರೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿಯ ವಿಶೇಷತೆ ಎಂದರೆ ಕಚೇರಿಯಲ್ಲಿ ಕಾರ್ಯಕ್ರಮ ಮಾಡದೆ, ನೇರವಾಗಿ ಬುಡಕಟ್ಟು ಜನರ ವಾಸಸ್ಥಳವಾದ ಕಂಚುಗಳ್ಳಿ ಹಾಡಿಗೆ ಅಧಿಕಾರಿಗಳು ಭೇಟಿ ನೀಡಿ ಅವರೊಂದಿಗೆ ಬೆರೆಯುವುದು. ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಇಲ್ಲಿ ಅವರ ಹಕ್ಕು, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮೂಲ ಆದಿವಾಸಿ ಅಧ್ಯಯನ ಕೇಂದ್ರದ ಡಾ. ಕೃಷ್ಣಮೂರ್ತಿ, ಕೊಳ್ಳೇಗಾಲ ತಾಲೂಕು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿ ಸುಬ್ಬರಾಯ, ಹನೂರಿನ ಸೋಲಿಗ ಸಮುದಾಯದ ಮುಖಂಡ ಮುತ್ತಯ್ಯ ವಿ., ಸೋಲಿಗ ಅಭಿವೃದ್ಧಿ ಸಂಘದ ಕಾರ್ಯದರ್ಶಿ ರಂಗೇಗೌಡ, ಲೆಕ್ಕಾಧಿಕಾರಿ ಭವ್ಯ, ಮ್ಯಾನೇಜರ್ ಭಾರತಿ ಹಾಗೂ ಮುಖಂಡ ನಂಜಪ್ಪ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾಜಕ್ಕೆ ಮಾದರಿಯಾಗಿರುವ ಹಾಡಿಯ 5 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಸೊಲಗಿತ್ತಿ ಈರಮ್ಮ, ನಾಟಿ ಔಷಧ ತಜ್ಞೆ ವೀರಮ್ಮ, ಕುಲದ ಮುಖ್ಯಸ್ಥ ನಂಜಪ್ಪ, ಎಲ್ ಎಲ್ ಬಿ ವಿದ್ಯಾರ್ಥಿ ಅಭಿಷೇಕ್ ಮತ್ತು ಮಹಿಳಾ ಸಂಘದ ಪ್ರತಿನಿಧಿ ನಂಜಮ್ಮ ಅವರನ್ನುಸನ್ಮಾನಿಸಿ ಗೌರವಿಸಲಾಯಿತು.----
10ಸಿಎಚ್ಎನ್11 ಹನೂರು ತಾಲೂಕಿನ ಕಂಚುಗಳ್ಳಿ ಸೋಲಿಗರ ಹಾಡಿಯಲ್ಲಿ 32ನೇ ಅಂತಾರಾಷ್ಟ್ರೀಯ ಆದಿವಾಸಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.