ಗದಗ: ಯಾವುದೇ ಒಂದು ಸಮಾಜ ಅಭಿವೃದ್ಧಿಯಾಗಬೇಕಾದರೆ, ಪರಿಪೂರ್ಣಗೊಳ್ಳಬೇಕಾದರೆ ಬ್ರಾಹ್ಮಣರ ಮಾರ್ಗದರ್ಶನ, ಸಹಕಾರವಿಲ್ಲದೆ ಸಾಧ್ಯವಾಗಲಾರದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಗದುಗಿನ ಶಂಕರ ಮಠದಲ್ಲಿ ನೆರವೇರಿದ ಪ್ರತಿಭಾ ಪುರಸ್ಕಾರ, ನಿವೃತ್ತರಿಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಯೂ ಬಲಿಷ್ಠವಾದ ಸಂಘಟನೆಗಳನ್ನು ಹೊಂದಲು ಅದಕ್ಕೆ ಅವಶ್ಯಕವಾದ ಬೈಲಾ ತಿದ್ದುಪಡಿಗಳನ್ನು ಮಾಡಿ ಗ್ರಾಮೀಣ ಮಟ್ಟದಿಂದಲೂ ಬ್ರಾಹ್ಮಣರ ಸಶಕ್ತ ಸಂಘಟನೆಯನ್ನು ಮಾಡಲಾಗುವುದು. ಒಟ್ಟು ₹100 ಕೋಟಿ ಮೊತ್ತವನ್ನು ಸಂಗ್ರಹಿಸಿ ಅದರ ಮೂಲಕ ಬ್ರಾಹ್ಮಣರಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ, ಆರೋಗ್ಯದಲ್ಲಿ ತೊಂದರೆ ಇದ್ದವರಿಗೆ ಸಹಾಯ ಹೀಗೆ ಅತ್ಯಂತ ಅವಶ್ಯಕತೆವುಳ್ಳ ಬಡ ಬ್ರಾಹ್ಮಣರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂಬ ಉದ್ದೇಶವನ್ನು ಬ್ರಾಹ್ಮಣ ಮಹಾಸಭಾ ಹೊಂದಿದೆ ಎಂದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯಾಧ್ಯಕ್ಷ ಆಸುಗೋಡ ಜಯಸಿಂಹ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ವೆಂಕಟೇಶ್ ಕುಲಕರ್ಣಿ ಮುಂತಾದವರು ಮಾತನಾಡಿದರು. ಗದಗ ಬೆಟಗೇರಿ ಬ್ರಹ್ಮವೃಂದ ಅಧ್ಯಕ್ಷ ದತ್ತಂಭಟ್ ತೆಂಬದಮನಿ ಹಾಗೂ ಬ್ರಾಹ್ಮಣ ವೃಂದದವರ ವೇದಘೋಷದೊಂದಿಗೆ ಪ್ರಾರಂಭಗೊಂಡಿತು. ಡಾ. ವೆಂಕಟೇಶ್ ಕುಲಕರ್ಣಿ ಪ್ರಾರ್ಥಿಸಿದರು. ಅನಿಲ ವೈದ್ಯ ಸ್ವಾಗತಿಸಿದರು. ರತ್ನಾಕರ್ ಭಟ್ ಜೋಷಿ ಸಾನಿಧ್ಯ ವಹಿಸಿದ್ದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ದತ್ತಣ್ಣ ಜೋಶಿ ವಂದಿಸಿದರು. ಕೋಶಾಧ್ಯಕ್ಷ ಕೃಷ್ಣಾಜಿ ನಾಡಿಗೇರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಸೇವಾ ನಿವೃತ್ತರನ್ನು ಸನ್ಮಾನಿಸಲಾಯಿತು.ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್.ಆರ್. ಕುಲಕರ್ಣಿ, ಕೃಷ್ಣಾ ಕುಲಕರ್ಣಿ, ಗುರುರಾಜ ಕುಲಕರ್ಣಿ, ರಾಮಚಂದ್ರ ಗಾಡಗೋಳಿ, ಮಹಾದೇವ ಹೊಸೂರ, ಹನುಮಂತರಾವ್ ದಫ್ತರದಾರ, ಡಾ. ನಾಗರಾಜ ಗ್ರಾಮಪುರೋಹಿತ, ಮಹಿಳಾ ಘಟಕದ ಸಂಚಾಲಕಿ ಕಲಾವತಿ ಅಲಬೂರ ಹಾಗೂ ಸುಮನ್ ಪಾಟೀಲ, ಮುರಳಿ, ಪ್ರಶಾಂತ ಕಿನ್ನಾಳ, ಶೇಷಾದ್ರಿ, ಕಿರಣಗೌಡ ಪಾಟೀಲ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಜಿಲ್ಲಾ ಘಟಕದ ಪದಾಧಿಕಾರಿ ಅನೀಲ ತೆಂಬದಮನಿ, ರವೀಂದ್ರ ಜೋಶಿ, ಆರ್.ಎಸ್. ಕುಲಕರ್ಣಿ, ಹೇಮಂತ ಕುಲಕರ್ಣಿ, ಸಂತೋಷ ಕುಲಕರ್ಣಿ, ಅಜಯಕುಮಾರ ದಫ್ತರದಾರ ಇತರರು ಪಾಲ್ಗೊಂಡಿದ್ದರು.
ಆಕಾಶವಾಣಿ ಕಲಾವಿದರಾದ ಡಾ. ವೆಂಕಟೇಶ ಕುಲಕರ್ಣಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಹಾಸ್ಯ ವಾಗ್ಮಿಗಳಾದ ಪ್ರೊ. ಅನೀಲ ವೈದ್ಯ ಹಾಗೂ ಅರುಣ ಕುಲಕರ್ಣಿ ಅವರಿಂದ ನಗೆಹಬ್ಬ ಕಾರ್ಯಕ್ರಮ ನೆರವೇರಿತು.