ಸಾರಾಂಶ
ಜಿಲ್ಲೆಯಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಲೋಕಾಪುರ ಪಟ್ಟಣವನ್ನು ರಾಜ್ಯದಲ್ಲಿಯೇ ಸುಂದರ ಹಾಗೂ ಮಾದರಿ ಪಟ್ಟಣವಾಗಿ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಲೋಕಾಪುರ
ಜಿಲ್ಲೆಯಲ್ಲಿಯೇ ಅತೀ ವೇಗವಾಗಿ ಬೆಳೆಯುತ್ತಿರುವ ಲೋಕಾಪುರ ಪಟ್ಟಣವನ್ನು ರಾಜ್ಯದಲ್ಲಿಯೇ ಸುಂದರ ಹಾಗೂ ಮಾದರಿ ಪಟ್ಟಣವಾಗಿ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.ಪಟ್ಟಣ ಪಂಚಾಯತಿ ಅಂದಾಜು ₹೧ ಕೋಟಿ ಅನುದಾನದಲ್ಲಿ ನಗರೋತ್ಥಾನ ಹಂತ-೪, ಸ್ಥಳೀಯ ನಿಧಿ, ಎಸ್.ಎಫ್.ಸಿ ಯೋಜನೆಯಡಿ ಫಲಾನುಭಾವಿಗಳಿಗೆ ಕಿಟ್ ವಿತರಣೆ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಧೋಳ ತಾಲೂಕಿನ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ, ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಾದರೆ ಕೆಲವೊಂದು ಸಮಸ್ಯೆಗಳು ಬರುವುದು ಸಹಜ. ಅವುಗಳನ್ನು ಪರಿಹರಿಸಿ ಸಾರ್ವಜನಿಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ನಾನು ಬದ್ಧನಾಗಿದ್ದೇನೆ. ಲೋಕಾಪುರ ಪಟ್ಟಣ ಅಭಿವೃದ್ಧಿಗಾಗಿ ನೀಲನಕ್ಷೆ ತಯಾರಿಸಲಾಗುತ್ತಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು. ಈಗ ಚಾಲನೆ ನೀಡಿರುವ ಎಲ್ಲ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೆನೆಂದು ಹೇಳಿದರು.
ಮುಧೋಳ ತಾಲೂಕಿನಲ್ಲಿ ಸುಮಾರ ೩೦ ವರ್ಷಗಳ ಕಾಲ ರಾಜಕಿಯ ಮಾಡಿ ಅಧಿಕಾರ ಅನುಭವಿಸಿದವರು ಮಹಿಳೆಯರಿಗೆ ಸುಸಜ್ಜಿತವಾದ ಶೌಚಾಲಯ ನಿರ್ಮಿಸಿಲ್ಲ, ಮಹಿಳೆಯರು ಶೌಚಾಲಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈಗ ನಮ್ಮ ಸರಕಾರ ಪಟ್ಟಣದಲ್ಲಿ ಸುಮಾರು ೪ ಸಾಮೊಹಿಕ ಶೌಚಾಲಯ ನಿರ್ಮಿಸಲು ಪ್ರಾರಂಭಿಸಿದೆ. ಆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಮಸ್ಯೆಯಿಂದಾಗಿ ಕಾಮಗಾರಿ ಮುಗಿಯುವುದು ತಡವಾಗಿದೆ. ಆದಷ್ಟು ಬೇಗನೆ ನಿರ್ಮಿಸಿಕೊಡುವುದಾಗಿ ಹೇಳಿದರು.ವಿವಿಧ ಯೋಜನೆ ಅಡಿ ಫಲಾನುಭಾವಿಗಳಿಗೆ ಸೋಲಾರ್ ಲೈಟ್, ಹೊಲಿಗೆ ಯಂತ್ರ, ಪೌರಕಾರ್ಮಿಕರಿಗೆ ಸುರಕ್ಷಾ ಉಡುಪು ಹಾಗೂ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ಅಶೋಕ ಕಿವಡಿ, ಗುರುರಾಜ ಉದಪುಡಿ, ರಫೀಕ್ ಬೈರಕದಾರ, ಹೊಳಬಸು ದಂಡಿನ, ಭೀರಪ್ಪ ಮಾಯನ್ನವರ, ಗೋವಿಂದ ಕೌಲಗಿ, ಸಂಗಪ್ಪ ಇಮ್ಮನ್ನವರ, ಲೋಕಣ್ಣ ಕೊಪ್ಪದ, ಅಬ್ದುಲರೆಹಮಾನ ತೋರಗಲ್ಲ, ಕುಮಾರ ಕಾಳಮನ್ನವರ, ಸಿದ್ದು ಕಿಲಾರಿ, ಮುತ್ತಪ್ಪ ಗಡದವರ, ಸುರೇಶ ಸಿದ್ದಾಪೂರ, ಬೀರಪ್ಪ ಮಾಯಣ್ಣವರ, ಗಣಪತಿ ಗಸ್ತಿ, ಸುಲ್ತಾನ ಕಲಾದಗಿ, ತಹಸೀಲ್ದಾರ ಮಹಾದೇವ ಸನಮೂರಿ, ಪಪಂ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ, ಪಪಂ ಆರೋಗ್ಯಾಧಿಕಾರಿ ಭಾಗ್ಯಾಶ್ರೀ ಪಾಟೀಲ ಗ್ರಾಮಸ್ಥರು ಹಾಗೂ ಪಪಂ ಸಿಬ್ಬಂದಿ ಇದ್ದರು.