ಸರ್ಕಾರಿ ಗೋದಾಮುಗಳ ಬಾಡಿಗೆ ಇಳಿಸಲು ಪ್ರಯತ್ನ-ಶಾಸಕ ಬಣಕಾರ

| Published : Nov 22 2025, 02:45 AM IST

ಸರ್ಕಾರಿ ಗೋದಾಮುಗಳ ಬಾಡಿಗೆ ಇಳಿಸಲು ಪ್ರಯತ್ನ-ಶಾಸಕ ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ ಸರ್ಕಾರ ಗೋದಾಮುಗಳ ಬಾಡಿಗೆ ಹೆಚ್ಚಿನ ದರ ನಿಗದಿ ಮಾಡಿದ್ದರಿಂದ ಅವು ಖಾಲಿ ಇದ್ದು, ಕೂಡಲೇ ಸರ್ಕಾರದ ಜತೆಗೆ ಮಾತನಾಡಿ, ಬಾಡಿಗೆ ಕಡಿಮೆ ಮಾಡಿ ಗ್ರಾಹಕರಿಗೆ, ಖರೀದಿದಾರರಿಗೆ ಮತ್ತು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಹಿರೇಕೆರೂರು: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ ಸರ್ಕಾರ ಗೋದಾಮುಗಳ ಬಾಡಿಗೆ ಹೆಚ್ಚಿನ ದರ ನಿಗದಿ ಮಾಡಿದ್ದರಿಂದ ಅವು ಖಾಲಿ ಇದ್ದು, ಕೂಡಲೇ ಸರ್ಕಾರದ ಜತೆಗೆ ಮಾತನಾಡಿ, ಬಾಡಿಗೆ ಕಡಿಮೆ ಮಾಡಿ ಗ್ರಾಹಕರಿಗೆ, ಖರೀದಿದಾರರಿಗೆ ಮತ್ತು ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ 2024-25ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಡಿಯಲ್ಲಿ 88 ಲಕ್ಷ ರು. ವೆಚ್ಚದಲ್ಲಿ ಮಂಜೂರಾದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ಹಾಗೂ ರಟ್ಟೀಹಳ್ಳಿ ತಾಲೂಕಿನ ಮಾಸೂರು ಉಪ ಮಾರುಕಟ್ಟೆಯಲ್ಲಿ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಮತ್ತು ಒಳಚರಂಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೈತರಿಗೆ ಅತಿ ಹತ್ತಿರವಾಗುವ ಎಪಿಎಂಸಿ ಅನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದರು.ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಗೋದಾಮು ಮತ್ತು ಎಪಿಎಂಸಿ ಪ್ರಾಂಗಣದಲ್ಲಿ ಏನೇ ಸಮಸ್ಯೆ ಇದ್ದರು. ಅದನ್ನು ತ್ವರಿತಗತಿಯಲ್ಲಿ ಸರಿಪಡಿಸಬೇಕು ಹಾಗೂ ಕೆಲವು ಗೋದಾಮುಗಳು ಸೋರುತ್ತಿದ್ದು, ಅವುಗಳ ಕುರಿತು ಕೂಡಲೇ ಸ್ಥಳಕ್ಕೆ ತೆರಳಿ ಪರೀಶೀಲನೆ ನಡೆಸಿ, ನಮಗೆ ಮಾಹಿತಿ ನೀಡಬೇಕು ಎಂದರು.ಎಪಿಎಂಸಿ ಕಾರ್ಯದರ್ಶಿ ಮನೋಹರ ಬಾರ್ಕಿ, ಎಡಬ್ಲೂಇ ಸುಭಾಶಚಂದ್ರ, ಗಜೇಂದ್ರ ಮಾಸ್ಟಿ, ರವಿ ಚಿಂದಿ, ರಾಮು ಚಿಗಮೊರಬದ, ಕೊಟ್ರೇಶ ಕುಬಸದ, ಕೊಟ್ರೇಶ ಎಚ್.ಎಂ., ಕೃಷ್ಣಪ್ಪ ಉಪ್ಪಾರ, ಭೀಮಣ್ಣ ಗಂಟಿ ಹಾಗೂ ಎಪಿಎಂಸಿ ಸಿಬ್ಬಂದಿಯವರು, ರೈತರು ಇದ್ದರು.