ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನ

| Published : Mar 15 2024, 01:16 AM IST

ಸಾರಾಂಶ

ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ವಾರ್ಡ್‌ನಲ್ಲಿ 3 ಬೋರ್‌ವೇಲ್‌ಗಳನ್ನು ಕೋರಿಸಲಾಗಿದೆ. 2ರಲ್ಲಿ ನೀರು ಚೆನ್ನಾಗಿ ಬಂದಿರುವುದರಿಂದ ವಾರ್ಡ್ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ ಹಾಗೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು ಎಂದು ಕೆರೆಗೆ ನೀರು ಹರಿಸಲಾಗುತ್ತಿರುವುದರಿಂದ ಪಟ್ಟಣದಲ್ಲಿನ ನೀರಿನ ಸಮಸ್ಯೆ ನಿವಾರಣೆ ಸಾಧ್ಯ ಎಂದು ಪಟ್ಟಣ ಪಂಚಾಯತಿ ಸದಸ್ಯ ರಮೇಶ ಮಸಿಬಿನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪಟ್ಟಣದಲ್ಲಿ ಬುಧವಾರ 13ನೇ ವಾರ್ಡಿನಲ್ಲಿ ಬೋರ್‌ವೇಲ್‌ ಕೊರೆಸಿ ಮಾತನಾಡಿದ ಅವರು, ಪಟ್ಟಣದ ಹಾಗೂ 13ನೇ ವಾರ್ಡಿನ ಅಭಿವೃದ್ಧಿಗಾಗಿ ಪಟ್ಟಣ ಪಂಚಾಯಿತಿಯಿಂದ ಸಹಕಾರ ನೀಡುತ್ತಿದ್ದಾರೆ. ನಾನು ಸದಸ್ಯನಾದ ಮೇಲೆ ವಾರ್ಡಿನಲ್ಲಿ ಸುಮಾರು 7 ಸಿ.ಸಿ ರಸ್ತೆ ನಿರ್ಮಿಸಲಾಗಿದ್ದು, ಇನ್ನೂ 3 ರಸ್ತೆಗಳನ್ನು ಸಿ.ಸಿ ರಸ್ತೆ ಮಾಡಿದರೆ ಸಿ.ಸಿ ಮುಕ್ತ ವಾರ್ಡ್ ನಿರ್ಮಾಣಕ್ಕೆ ಶೀಘ್ರದಲ್ಲಿ ಪ್ರಯತ್ನಿಸಲಾಗುವುದು. ವಾರ್ಡಿನ ಕೆಲ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಹಾಗೂ ವಾರ್ಡಿನಲ್ಲಿ ಚರಂಡಿ ನಿರ್ಮಾಣ, ನಳಗಳ ಸಂಪರ್ಕ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳಲಾಗಿದ್ದು. ಬರುವಂತ ದಿನಗಳಲ್ಲಿ ಮಹಿಳೆಯರ ಶೌಚಾಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಲವಾರು ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದ್ದೇನೆ. ಸರ್ಕಾರದ ಆದೇಶದಂತೆ ಪಟ್ಟಣದ 13ನೇ ವಾರ್ಡಿನಲ್ಲಿ ಬಯಲು ಮಲವಿಸರ್ಜನೆ ಮುಕ್ತ ಪ್ರದೇಶವನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಈರಣ್ಣ ಒಂಟೆತ್ತಿನ, ಸದಯ್ಯ ಇಂಡಿ, ಸಲಬಯ್ಯ ಸದಯ್ಯನಮಠ, ಸುರೇಶ ಒಂಟೆತ್ತಿನ, ಮುತ್ತು ಜಾಲಗಾರ, ಬುಡ್ಡಾ ಬೇಪಾರಿ, ಮಂಜು ಒಂಟೆತ್ತಿನ, ಈರಯ್ಯ ಇಂಡಿಮಠ, ಯಾಸಿನ್ ಹಚ್ಚಾಳ, ಬಸವರಾಜ ಒಂಟೆತ್ತಿನ, ಶಂಕ್ರಪ್ಪ ಜಂಬಗಿ, ಅಪ್ಪಸಾಹೇಬ ವಾಡೆದಮನಿ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.