ಮ್ಯಾನ್ ಕೈಂಡ್ ಫಾರ್ಮ ವತಿಯಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ 1500 ಬೇಯಿಸಿದ ಕೋಳಿ ಮೊಟ್ಟೆ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಹಲಗೂರು: ಕೋಳಿ ಮೊಟ್ಟೆಯು ಪ್ರೋಟೀನ್, ವಿಟಮಿನ್‌ಗಳು, ಖನಿಜಾಂಶಗಳು ಸೇರಿದಂತೆ ದೇಹಕ್ಕೆ ಅಗತ್ಯ ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಉತ್ತಮ ಆಹಾರವಾಗಿದೆ. ಮಕ್ಕಳ ದೈಹಿಕ ಬೆಳವಣಿಗೆ, ಸ್ನಾಯುಗಳ ಸದೃಢತೆ ಹಾಗೂ ಆರೋಗ್ಯಕರ ಜೀವನಕ್ಕೆ ಮೊಟ್ಟೆ ಸೇವನೆ ಸಹಕಾರಿಯಾಗಿದೆ ಎಂದು ಮ್ಯಾನ್ ಕೈಂಡ್ ಫಾರ್ಮ ಕರ್ನಾಟಕ ವಲಯ ವ್ಯವಸ್ಥಾಪಕ ಪ್ರಕಾಶ್ ತಿಳಿಸಿದರು.
ಬಿಕ್ಷು ಮಠದ ಆವರಣದಲ್ಲಿ ಶುಕ್ರವಾರ ''''''''ಮ್ಯಾನ್ ಕೈಂಡ್ ಫಾರ್ಮ ಮತ್ತು ಕಾಳೇಶ್ವರ ವೆಟ್ ಫಾರ್ಮ ವತಿಯಿಂದ ನಡೆದ ವಿಶ್ವ ಮೊಟ್ಟೆ ದಿನಾಚಾರಣೆಯಲ್ಲಿ ಮಾತನಾಡಿ, ಜನರಲ್ಲಿ ಮೊಟ್ಟೆಯ ಪೌಷ್ಟಿಕಾಂಶಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ ತಿಂಗಳ ಎರಡನೇ ಶುಕ್ರವಾರದಂದು ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ ಎಂದರು.ಮ್ಯಾನ್ ಕೈಂಡ್ ಫಾರ್ಮ ವತಿಯಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ 1500 ಬೇಯಿಸಿದ ಕೋಳಿ ಮೊಟ್ಟೆ ವಿತರಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎನ್.ಎಸ್.ಶಂಕರೇಗೌಡ ಮಾತನಾಡಿ, ಜನಸಾಮಾನ್ಯರ ಕೈಗೆಟುಕುವ ದರದಲ್ಲಿ ಉತ್ತಮ ಪೌಷ್ಟಿಕಾಂಶ ಒದಗಿಸುವ ಆಹಾರಗಳಲ್ಲಿ ಮೊಟ್ಟೆ ಪ್ರಮುಖವಾಗಿದೆ. ಆರೋಗ್ಯಕರ ಆಹಾರ ಪದ್ಧತಿಯ ಭಾಗವಾಗಿ ಮೊಟ್ಟೆ ಸೇವಿಸುವ ಮೂಲಕ ಪೌಷ್ಟಿಕಾಂಶದ ಅಗತ್ಯವನ್ನು ಪೂರೈಸಿಕೊಳ್ಳಬಹುದು. ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ ಎಂದರು.ಈ ವೇಳೆ ಕಾಳೇಶ್ವರ ವೆಟ್ ಫಾರ್ಮ ಮಾಲೀಕರಾದ ದರ್ಶನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್, ಉಪನ್ಯಾಸಕರಾದ ಬಿ.ಸಿ.ರವಿ, ಸೀಮಾ ಕೌಶರ್, ತಾರಾ ಜಯಲಕ್ಷ್ಮಿ, ಗುರುಪ್ರಸಾದ್, ಶ್ವೇತಾ ಕಲ್ಮಟ್, ಎಂ.ಎಚ್.ಮೂರ್ತಿ, ಉಮೇಶ್, ಪ್ರಶಾಂತ್, ರಂಜಾನಾ, ಕಚೇರಿ ಅಧೀಕ್ಷಕ ಕುಮಾರಸ್ವಾಮಿ ಸೇರಿದಂತೆ ಹಲವರು ಇದ್ದರು.