ಮುಸಲ್ಮಾನರ ಪವಿತ್ರ ಧರ್ಮಗಳಲ್ಲಿ ಒಂದಾದ ಈದುಉಲ್ ಫಿತರ್ ಹಬ್ಬವನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಶುಕ್ರವಾರ ಆಚರಿಸಲಾಯಿತು.

ಕನ್ನಡ್‍ಪ್ರಭ ವಾರ್ತೆ ಕುಶಾಲನಗರ

ಮುಸಲ್ಮಾನರ ಪವಿತ್ರ ಧರ್ಮಗಳಲ್ಲಿ ಒಂದಾದ ಈದುಉಲ್ ಫಿತರ್ ಹಬ್ಬವನ್ನು ಕುಶಾಲನಗರದ ಹಿಲಾಲ್ ಮಸೀದಿಯಲ್ಲಿ ಶುಕ್ರವಾರ ಆಚರಿಸಲಾಯಿತು. ಗುರುವಾರ ರಾತ್ರಿ ಚಂದ್ರ ದರ್ಶನ ಹಿನ್ನೆಲೆಯಲ್ಲಿ ನಿರಂತರ ೨೯ ದಿನಗಳ ವ್ರತಾಚರಣೆಯ ನಂತರ ಶಾಫಿ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಸಾಮೂಹಿಕ ಪ್ರಾರ್ಥನೆಯೊಂದಿಗೆ ಆಚರಿಸಿದರು.ಶಾಂತಿ, ಸೌಹಾರ್ದತೆ, ಕರುಣೆ, ಸಹನೆ ಬಗ್ಗೆ ಧರ್ಮಗುರುಗಳಾದ ಶಾಫಿ ಫೈಜ಼ಿ ಇರ್ಪಾನಿ ಅವರು ಧಾರ್ಮಿಕ ಸಂದೇಶ ನೀಡಿದರು. ಜೊತೆಗೆ ಈದುಲ್ ಫಿತರ್ ನ ಪ್ರಾಮುಖ್ಯತೆ ಬಗ್ಗೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ನೀಡಬೇಕಾದ ದಾನದ ಬಗ್ಗೆ ಭೋದನೆ ಮಾಡಿದರು. ನಮಾಜ಼್ ನಂತರ ಪರಸ್ಪರ ಈದ್ ಶುಭಾಶಯ ಹಂಚಿಕೊಂಡಿದರು. ಈ ಸಂದರ್ಭ ಮಾತನಾಡಿದ ಹಿಲಾಲ್ ಮಸೀದಿ ಅಧ್ಯಕ್ಷ ರಫೀಕ್ ಹಾಗೂ ಕಾರ್ಯದರ್ಶಿ ಕರೀಂ, ಹಿಲಾಲ್ ಮಸೀದಿ ಕಮಿಟಿ ಪ್ರಮುಖರು, ಸದಸ್ಯರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಸದಸ್ಯರು ಇದ್ದರು. ಕೂಡಿಗೆ, ನಂಜರಾಯಪಟ್ಟಣ, ಹೊಸಕೋಟೆ, ಶುಂಠಿಕೊಪ್ಪ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಈದುಲ್ ಫಿತರ್ ಹಬ್ಬವನ್ನು ಆಚರಿಸಲಾಯಿತು. ಶನಿವಾರ ಹನಫಿ ಸಮುದಾಯ ಬಾಂಧವರು ಈದುಲ್ ಫಿತರ್ ಹಬ್ಬವನ್ನು ಆಚರಿಸಲಿದ್ದಾರೆ. ಕುಶಾಲನಗರದ ಕುಶಾಲನಗರ ಮಡಿಕೇರಿ ರಸ್ತೆಯ ಗಂಧಕೋಟೆಯ ಈದ್ಗಾ ಮೈದಾನದಲ್ಲಿ ಈದುಲ್ ಫಿತರ್ ಹಬ್ಬದ ವಿಶೇಷ ಪ್ರಾರ್ಥನೆ ನಡೆಯಲಿದೆ.