ಮಾವಿನಕೆರೆಯ ವೆಂಕಟರಮಣಸ್ವಾಮಿಗೆ ಏಕಾದಶಿ ಪೂಜೆ

| Published : Jan 11 2025, 12:46 AM IST

ಸಾರಾಂಶ

ಮಾವಿನಕೆರೆ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ, ಪಟ್ಟಣದ ಶ್ರೀ ದೇವಾಂಗ ಶ್ರೀ ರಾಮಮಂದಿರ, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ, ದಾಸಗೌಡರ ಬೀದಿಯ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಹಾಗೂ ರಾಯರಾವುತ್ತರ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು. ಪ್ರಾಕಾರೋತ್ಸವ ನಂತರ ದೇವಾಲಯ ಪ್ರಾಂಗಣದಲ್ಲಿ ನಿರ್ಮಿಸಿರುವ ವೈಕುಂಠದ್ವಾರದ ಮೇಲೆ ಶ್ರೀಸ್ವಾಮಿ ಉತ್ಸವ ಮೂರ್ತಿಯನ್ನಿಟ್ಟು, ವಿಶೇಷವಾಗಿ ಅಲಂಕರಿಸಿ, ಮಹಾ ಮಂಗಳಾರತಿ ನೆರವೇರಿಸಿ, ಭಕ್ತರು ವೈಕುಂಠದ್ವಾರದಲ್ಲಿ ಸಾಗಲು ಅವಕಾಶ ಕಲ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಮಾವಿನಕೆರೆ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ, ಪಟ್ಟಣದ ಶ್ರೀ ದೇವಾಂಗ ಶ್ರೀ ರಾಮಮಂದಿರ, ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ, ದಾಸಗೌಡರ ಬೀದಿಯ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಹಾಗೂ ರಾಯರಾವುತ್ತರ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.

ಶ್ರೀಮನ್ ನಾರಾಯಣಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಶುಕ್ರವಾರದಂದು ದೇವಾಲಯಗಳಲ್ಲಿ ಇರುವ ಶ್ರೀಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಹಾಗೂ ಪಂಚಫಲ ಅಭಿಷೇಕ, ಅಲಂಕಾರ, ಸಹಸ್ರ ನಾಮಾರ್ಚನೆ ನೆರವೇರಿಸಲಾಯಿತು. ಶ್ರೀ ಸ್ವಾಮಿಯ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ, ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿ, ಪ್ರಾಕಾರೋತ್ಸವ ನಂತರ ದೇವಾಲಯ ಪ್ರಾಂಗಣದಲ್ಲಿ ನಿರ್ಮಿಸಿರುವ ವೈಕುಂಠದ್ವಾರದ ಮೇಲೆ ಶ್ರೀಸ್ವಾಮಿ ಉತ್ಸವ ಮೂರ್ತಿಯನ್ನಿಟ್ಟು, ವಿಶೇಷವಾಗಿ ಅಲಂಕರಿಸಿ, ಮಹಾ ಮಂಗಳಾರತಿ ನೆರವೇರಿಸಿ, ಭಕ್ತರು ವೈಕುಂಠದ್ವಾರದಲ್ಲಿ ಸಾಗಲು ಅವಕಾಶ ಕಲ್ಪಿಸಲಾಯಿತು.

ದೇವಾಂಗ ಶ್ರೀ ರಾಮಮಂದಿರದಲ್ಲಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗದ ಜತೆಗೆ ಭಕ್ತರಿಗೆ ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿತ್ತು.