ಡಾ.ಪ್ರಭಾ ಅವರನ್ನು ಸಂಸದರಾಗಿ ಆಯ್ಕೆಗೊಳಿಸಿ

| Published : Apr 25 2024, 01:02 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ವಿದ್ಯಾವಂತೆ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿ, ಲೋಕಸಭೆಗೆ ಕಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜನತೆಗೆ ಮನವಿ ಮಾಡಿದರು.

- ವಿದ್ಯಾವಂತೆ, ಸರಳ ಸಜ್ಜನಿಕ ವ್ಯಕ್ತಿತ್ವದ ಅಭ್ಯರ್ಥಿ: ಎಸ್ಸೆಸ್ಸೆಂ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ವಿದ್ಯಾವಂತೆ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನು ಗೆಲ್ಲಿಸಿ, ಲೋಕಸಭೆಗೆ ಕಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಜನತೆಗೆ ಮನವಿ ಮಾಡಿದರು.

ನಗರದ ಭಾರತ ಕಾಲನಿಯ ಜಗಳೂರು ಮಹಲಿಂಗಪ್ಪ ಮಿಲ್ ಆವರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಮತಯಾಚಿಸಿ, ಪಕ್ಷ ಸಂಘಟನೆ ಕುರಿತು ಮಾತನಾಡಿದ ಅವರು, ಬಡವರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಪಣ ತೊಟ್ಟಿದ್ದು, ಕಾಂಗ್ರೆಸ್ಸಿನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಮ್ಮ ಸರ್ಕಾರದ ಯೋಜನೆಗಳು ಯಶಸ್ವಿ ಆಗಿರುವುದೇ ಇದಕ್ಕೆ ಸಾಕ್ಷಿ. ಗೃಹಲಕ್ಷ್ಮಿ ಯೋಜನೆಯಿಂದ ಬಡ ಮಹಿಳೆಯರ ಖಾತೆಗೆ ಹಣ ಉಳಿತಾಯಕ್ಕೆ ನೆರವಾಗಿದೆ. ಇನ್ನೂ ಹೆಚ್ಚಿನ ಜನಪರ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ದಾವಣಗೆರೆಯಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸಿ ಎಂದು ತಿಳಿಸಿದರು.

ಸ್ಥಳೀಯ ಮುಖಂಡರಲ್ಲಿ ವೈಮನಸ್ಸುಗಳಿದ್ದರೆ ದೂರವಿಟ್ಟು, ಜಿಲ್ಲೆ ಅಭಿವೃದ್ಧಿಗೆ ಪಣ ತೊಡಿ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾರಿಗೆ ಕುಟುಂಬ ಸದಸ್ಯರ ಸಮೇತ ತೆರಳಿ, ಮತಗಟ್ಟೆಗೆ ತೆರಳಿ, ಮತ ನೀಡಬೇಕು. ಈ ಮೂಲಕ ದಾಖಲೆಯ ಮತಗಳ ಅಂತರದಲ್ಲಿ ಡಾ.ಪ್ರಭಾರನ್ನು ಗೆಲ್ಲಿಸುವಂತೆ ಅವರು ಕೋರಿದರು.

ಮುಖಂಡರಾದ ಹರಪನಹಳ್ಳಿ ಮಲ್ಲಿಕಾರ್ಜುನ ಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ಕೆ.ಜಿ.ಚಿದಾನಂದ,ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್‌, ಮೀನಾಕ್ಷಿ ಜಗದೀಶ, ಹರಿಹರದ ಬಿ.ಎಂ.ವಾಗೀಶ ಸ್ವಾಮಿ, ಉದ್ಯಮಿ ಕಿರುವಾಡಿ ಸೋಮಣ್ಣ ಇತರರು ಇದ್ದರು. ಇದೇ ವೇಳೆ ಅನೇಕ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

- - - -24ಕೆಡಿವಿಜಿ12, 13, 14:

ದಾವಣಗೆರೆ ಭಾರತ್ ಕಾಲನಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಪರ ಮತಯಾಚಿಸಿ, ಮಾತನಾಡಿದರು.