ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುವ ನರೇಂದ್ರ ಮೋದಿ ಚುನಾವಣಾ ಬಾಂಡ್‌ನಲ್ಲಿ ನರೇಂದ್ರ ಮೋದಿ ಅವರ ಮುಖವಾಡ ಬಯಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು.ತಾಲೂಕಿನ ಕುದರಿಸಾಲವಾಡಗಿ ಗ್ರಾಮದ ಶಾದಿಮಹಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುದರಿಸಾಲವಾಡಗಿ ಜಿಪಂ ವ್ಯಾಪ್ತಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರಕ್ಕೆ ಜನರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ೨೦೧೮ರಲ್ಲಿ ಬಿಜೆಪಿ ನೀಡಿದ ಭರವಸೆಗಳಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸಿಲ್ಲ. ಅಚ್ಛೇ ದಿನ ಬರುತ್ತದೆ ಎಂದು ನರೇಂದ್ರಿ ಮೋದಿ ಹೇಳುತ್ತಾ ಪೆಟ್ರೋಲ್, ಡಿಸೇಲ್, ಗ್ಯಾಸ್, ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದರು.
ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಈ ಸಲ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ವರ್ಷಕ್ಕೆ ₹1.25 ಲಕ್ಷದ ಆರೋಗ್ಯ ವಿಮೆ ಸೇರಿದಂತೆ ೨೫ ಗ್ಯಾರಂಟಿಗಳನ್ನು ಜಾರಿಗೆ ತರಲಿದೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಜಾರಿಗೆ ತಂದಿರುವ ೫ ಗ್ಯಾರಂಟಿ ಯೋಜನೆಯಲ್ಲಿ ಶೇ. ೮೫ ರಷ್ಟು ಜನರು ಲಾಭ ಪಡೆಯುತ್ತಿದ್ದಾರೆ. ಗ್ಯಾರಂಟಿ ಫಲಾನುಭವಿಗಳಿಗೆ ಸೇರಿದಂತೆ ಎಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಅವರಿಗೆ ಮತ ನೀಡಲಿದ್ದಾರೆ. ಇದರಿಂದಾಗಿ ಅವರು ಆಯ್ಕೆಯಾಗುವುದು ನಿಶ್ಚಿತ ಎಂದರು.ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಮಾತನಾಡಿದರು. ಮಾಜಿ ಶಾಸಕ ಶರಣಪ್ಪ ಸುಣಗಾರ,ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಬಾಪುಗೌಡ ಪಾಟೀಲ, ಪರಶುರಾಮ ದಿಂಡವಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಂಎಲ್ಸಿ ಸುನೀಲಗೌಡ ಪಾಟೀಲ, ಆನಂದಗೌಡ ದೊಡ್ಡಮನಿ, ಬಿ.ಎಸ್.ಪಾಟೀಲ, ಅಶೋಕಗೌಡ ಪಾಟೀಲ, ಬಾಳಾಸಾಹೇಬಗೌಡ ಪಾಟೀಲ, ಗೌರಮ್ಮ ಮುತ್ತತ್ತಿ, ಬಿ.ಎಸ್.ಛಾಯಾಗೋಳ, ಬಸವರಾಜ ದೇಸಾಯಿ, ಶಬ್ಬೀರ ಢವಳಗಿ, ಸರಿತಾ ನಾಯಕ, ರಮಿಜಾ ನದಾಫ, ರಮಜಾನ ಮುಜಾವರ, ಗುರು ಗುಡಿಮನಿ, ಅಶೋಕ ಚಲವಾದಿ, ನಜೀರ ಬೀಳಗಿ, ಸಂಗನಗೌಡ ಹರನಾಳ ಇತರರು ಇದ್ದರು.ಡಾ.ಪ್ರಭಗೌಡ ಪಾಟೀಲ ಲಿಂಗದಳ್ಳಿ ಸ್ವಾಗತಿಸಿದರು.ಪ್ರಕಾಶ ಪಾಟೀಲ ನಿರೂಪಿಸಿದರು. ಪ್ರಚಾರ ಸಭೆಗೆ ಜಿಪಂ ಮತಕ್ಷೇತ್ರದ ವಿವಿಧೆಡೆಗಳಿಂದ ಕಾರ್ಯಕರ್ತರು ಆಗಮಿಸಿದ್ದರು.