ಮತದಾನ ಜಾಗೃತಿ ಜಾಥಾ: ಕ್ಯಾಂಡಲ್ ಲೈಟಿಂಗ್, ಮಾನವ ಸರಪಳಿ

| Published : Apr 30 2024, 02:02 AM IST

ಸಾರಾಂಶ

ದಾವಣಗೆರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೋಮವಾರ ನಗರದ ಬೀರಲಿಂಗೇಶ್ವರ ದೇವಸ್ಥಾನ ಬಳಿಯಿಂದ ಮತದಾನ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲನಾಯಕ್ ಚಾಲನೆ ನೀಡಿದರು.

- ಬೀರಲಿಂಗೇಶ್ವರ ದೇವಸ್ಥಾನ ಬಳಿ ಜಾಥಾಗೆ ಮಲ್ಲನಾಯಕ್‌ ಚಾಲನೆ - - - ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೋಮವಾರ ನಗರದ ಬೀರಲಿಂಗೇಶ್ವರ ದೇವಸ್ಥಾನ ಬಳಿಯಿಂದ ಮತದಾನ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲನಾಯಕ್ ಚಾಲನೆ ನೀಡಿದರು.

ಜಾಥಾದಲ್ಲಿ 250 ರಿಂದ 300 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿ ಘೋಷವಾಕ್ಯಗಳೊಂದಿಗೆ ನಿಮ್ಮ ಮತದ ಮೂಲಕ ನಿಮ್ಮ ಧ್ವನಿಯನ್ನು ಕೇಳಬಹುದು, ಒಂದು ಬಟನ್ ಒತ್ತುವ ಮೂಲಕ ಇಡೀ ರಾಷ್ಟ್ರವನ್ನು ಬದಲಾಯಿಸಬಹುದು, ಯಾವುದೇ ಭಯ ಬೇಡ, ಚುನಾವಣೆಯ ದಿನ ಬಂದಿದೆ, ಬಟನ್ ಅನ್ನು ಬುದ್ಧಿವಂತಿಕೆಯಿಂದ ಒತ್ತಿರಿ, ಒಂದು ತಪ್ಪು ಒತ್ತಿ ಮುಂದಿನ ಐದು ವರ್ಷಗಳವರೆಗೆ ಪಾವತಿಸಲಿದ್ದೀರಿ, ಮತದಾನವು ನಿಮ್ಮ ಸ್ವಂತ ನಾಯಕನನ್ನು ಆಯ್ಕೆ ಮಾಡುವ ಶಕ್ತಿಯನ್ನು ನೀಡುತ್ತದೆ, ಮತದಾರರು ಜಾಗೃತರಾಗಿ ಮತದಾನ ಮಾಡಿರಿ ಎಂಬ ಘೋಷಣೆಗಳು ಮೊಳಗಿದವು.

ಒಬ್ಬ ಮತದಾರನಿಗೆ ಮಾತ್ರ ಅಧಿಕಾರವನ್ನು ತರಲು ಅಥವಾ ಬೀಳಿಸಲು ಅಧಿಕಾರವಿದೆ ಎಂಬ ಘೋಷ ವಾಕ್ಯಗಳೊಂದಿಗೆ ಹೈಸ್ಕೂಲ್ ಮೈದಾನದ ಬೀರಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡು ಪಿ.ಬಿ.ರಸ್ತೆ, ಹಳೇ ಬಸ್ ನಿಲ್ದಾಣ, ಗಾಂಧಿ ಸರ್ಕಲ್, ಅಶೋಕ ರಸ್ತೆಯ ಮೂಲಕ ಜಯದೇವ ಸರ್ಕಲ್ ಬಳಿ ಬಂದು ಕ್ಯಾಂಡಲ್ ಹಚ್ಚಿ, ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಮೂಡಿಸಲಾಯಿತು.

ಜಿಪಂ ಉಪನಿರ್ದೇಶಕಿ ಶಾರದಾ ದೊಡ್ಡಗೌಡ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶನಿ, ಯೋಜನಾಧಿಕಾರಿ ನೇತ್ರಾವತಿ ಜಿ., ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಸಹಾಯಕಿಯರು ಇನ್ನಿತರರು ಉಪಸ್ಥಿತರಿದ್ದರು.

- - - -29ಕೆಡಿವಿಜಿ43, 44ಃ: