ಚುನಾವಣೆ ನೀತಿ ಸಂಹಿತೆ ಬಿಸಿ: ಬ್ಯಾನರ್‌, ಪ್ಲೆಕ್ಸ್ ಗಳ ತೆರವು

| Published : Mar 19 2024, 12:47 AM IST

ಚುನಾವಣೆ ನೀತಿ ಸಂಹಿತೆ ಬಿಸಿ: ಬ್ಯಾನರ್‌, ಪ್ಲೆಕ್ಸ್ ಗಳ ತೆರವು
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬ್ಯಾನರ್‌, ಫ್ಲೆಕ್ಸ್‌,ಬಂಟಿಂಕ್ಸ್ ನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿ ತೆರವು ಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬ್ಯಾನರ್‌, ಫ್ಲೆಕ್ಸ್‌,ಬಂಟಿಂಕ್ಸ್ ನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿ ತೆರವು ಗೊಳಿಸಿದ್ದಾರೆ.

ಪಟ್ಟಣದ ಮುಖ್ಯ ರಸ್ತೆ ಹಾಗೂ 11 ವಾರ್ಡ್‌ಗಳಲ್ಲೂ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿ, ಪೌರ ಕಾರ್ಮಿಕರು ಕೆಲವು ಗೋಡೆ ಬರಹಗಳಿಗೆ ಬಣ್ಣ ಬಳಿದಿದ್ದಾರೆ. ಕೆಲವು ಬ್ಯಾನರ್ ಗಳಿಗೆ ಬಿಳಿ ಬಟ್ಟೆ ಮುಚ್ಚಿದ್ದಾರೆ. ಎಚ್ಚರದ ಜಾಗದಲ್ಲಿದ್ದ ಬ್ಯಾನರ್ ಗಳಿಗೆ ಟ್ರಾಕ್ಟರ್ ಮೇಲೆ ಹತ್ತಿ ನಿಂತು ಬೋರ್ಡುಗಳು, ಬ್ಯಾನರ್ ಕಾಣದಂತೆ ಬಟ್ಟೆ ಮುಚ್ಚಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್‌, ರೆವಿನ್ಯೂ ಇನ್ಸಪೆಕ್ಟರ್ ವಿಜಯಕುಮಾರ್‌ ಮಾರ್ಗದರ್ಶನ ಮಾಡಿದರು. ಚೆಕ್‌ ಪೋಸ್ಟ್‌: ತಾಲೂಕಿನ ಮುತ್ತಿನಕೊಪ್ಪ ಸಮೀಪದ ಚಿಬ್ಬಳ್ಳಿ ಚೆಕ್‌ ಪೋಸ್ಟ್‌ ಪ್ರಾರಂಭವಾಗಿದ್ದು ತಾಲೂಕಿಗೆ ಪ್ರವೇಶ ಮಾಡುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಪೊಲೀಸ್‌, ಅರಣ್ಯ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಿ.ಆರ್‌.ಪಿ.ಎಫ್ ಸಿಬ್ಬಂದಿ ಹಗಲು ಹಾಗೂ ರಾತ್ರಿ ಹೊತ್ತಿನಲ್ಲಿ ಸರದಿಯಂತೆ ಕಾವಲು ಕಾಯುತ್ತಿದ್ದಾರೆ.