ಸರ್ಕಾರಿ ನೌಕರರ ಸಂಘದ 3 ಸ್ಥಾನಕ್ಕೆ ಚುನಾವಣೆ

| Published : Oct 25 2024, 12:51 AM IST

ಸಾರಾಂಶ

ಇಲ್ಲಿಯ ಸರ್ಕಾರಿ ನೌಕರರ ಸಂಘದ ಮೂರು ಸ್ಥಾನಗಳಿಗೆ ಅ. 28ರಂದು ಚುನಾವಣೆ ನಡೆಯಲಿದ್ದು, 7 ಜನರು ಸ್ಪರ್ಧೆಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ಚುನಾವಣಾ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ಇಲ್ಲಿಯ ಸರ್ಕಾರಿ ನೌಕರರ ಸಂಘದ ಮೂರು ಸ್ಥಾನಗಳಿಗೆ ಅ. 28ರಂದು ಚುನಾವಣೆ ನಡೆಯಲಿದ್ದು, 7 ಜನರು ಸ್ಪರ್ಧೆಯಲ್ಲಿದ್ದಾರೆ. ಕಳೆದ ಒಂದು ವಾರದಿಂದ ಚುನಾವಣಾ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.

ಒಟ್ಟು 34 ಸ್ಥಾನಗಳಲ್ಲಿ 31 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನು ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ 7 ಸದಸ್ಯರು ಕಣದಲ್ಲಿದ್ದಾರೆ. ಇದರಿಂದ ಚುನಾವಣೆ ಪ್ರತಿಷ್ಠೆಯಾಗಿದೆ.

ಚುನಾವಣೆಯಲ್ಲಿ ಬಹುಮತ ಪಡೆಯುವುದಕ್ಕೆ ಒಂದು ಗುಂಪು ಸಜ್ಜಾಗಿದ್ದು. ಉಳಿದ ಮೂರು ಸ್ಥಾನಗಳಿಗಾಗಿ ಅಬ್ಬರ ಪ್ರಚಾರ ಕೈಗೊಂಡಿದ್ದಾರೆ. ಕೃಷಿ ಇಲಾಖೆಯಿಂದ ಒಂದು ಸ್ಥಾನ ಇದ್ದು, ಪ್ರಶಾಂತ, ಯಲಮಟ್ಟಿ ಸುಧಾಕರ ಕಣದಲ್ಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯಿಂದ ಒಂದು ಸ್ಥಾನ ಇದ್ದು, ಮಲ್ಲಿಕಾರ್ಜುನ ಮತ್ತು ಶ್ರೀನಿವಾಸ ನಾಯಕ ಇದ್ದಾರೆ. ಅದರಂತೆ ಉಪನ್ಯಾಸಕರ ಕ್ಷೇತ್ರದ ಒಂದು ಸ್ಥಾನಕ್ಕಾಗಿ ಎಂಎನ್ ಎಂ ಬಾಲಕಿಯರ ಪಿಯು ಕಾಲೇಜಿನ ಉಪನ್ಯಾಸಕ ಡಿ.ಎಸ್. ಮಾಲನಗೌಡ, ಸರ್ಕಾರಿ ಪ್ರೌಢಶಾಲೆಯ ಗ್ರಂಥ ಪಾಲಕ ರಮೇಶ ಗಬ್ಬೂರು ಮತ್ತು ಕೇಸರಹಟ್ಟಿ ಗ್ರಾಮದ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ರಮೇಶ ರೆಡ್ಡಿ ಸ್ಪರ್ಧೆಯಲ್ಲಿದ್ದಾರೆ.ಮಾಲನಗೌಡ ನಾಮಪತ್ರ ವಾಪಸ್‌ ಪಡೆದಿದ್ದಾರೆ. ರಮೇಶ ರೆಡ್ಡಿಗೆ ಬೆಂಬಲ ಸೂಚಿಸಿರುವುದಾಗಿ ಲಿಖಿತವಾಗಿ ಚುನಾವಣಾಧಿಕಾರಿಗಳಿಗೆ ತಿಳಿಸಿದ್ದಾರೆ.

ಮೂರು ಸ್ಥಾನಗಳಿಗೆ 7 ಜನರು ಕಣದಲ್ಲಿದ್ದಾರೆ. ಉಪನ್ಯಾಸಕ ಡಿ.ಎಸ್, ಮಾಲನಗೌಡ ಹಿಂಪಡೆಯುವ ನಾಮಪತ್ರ ತಪ್ಪಾಗಿ, ಕ್ರಮ ಸಂಖ್ಯೆ ಇಲ್ಲದೇ ಲಿಖಿತವಾಗಿ ನೀಡಿದ್ದರಿಂದ ಅವರ ನಾಮಪತ್ರ ಹಿಂದುರಿಗಿಸದೆ ಕಣದಲ್ಲಿ ಉಳಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಚಂದ್ರಶೇಖರ ಅಡವಿಹಾಳ ತಿಳಿಸಿದ್ದಾರೆ.