ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ತಾಲೂಕಿನ ಕೋಟೆಕಲ್ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ಜರುಗಿದ ಚುನಾವಣೆಯಲ್ಲಿ ಮಹಾಲಿಂಗವ್ವ ಎಮ್ಮಿ ಅಧ್ಯಕ್ಷರಾಗಿ, ಮೈಲಾರಲಿಂಗಪ್ಪ ಆಲೂರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಬೆಳಗ್ಗೆ 11 ರಿಂದ 12 ಗಂಟೆಗೆ ನಾಮಪತ್ರ ಸಲ್ಲಿಕೆ, 12 ರಿಂದ 12- 15 ನಿಮಿಷದವರೆಗೆ ನಾಮಪತ್ರ ಪರಿಶೀಲನೆ, 12- 15 ರಿಂದ 12-30 ರವರೆಗೆ ನಾಮಪತ್ರ ವಾಪಸ್ ಪಡೆಯುವ ಸಮಯ ನಿಗದಿಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಮಹಾಲಿಂಗವ್ವ ಎಮ್ಮಿ, ಉಪಾಧ್ಯಕ್ಷ ಸ್ಥಾನಕ್ಕೆ ಮೈಲಾರಲಿಂಗಪ್ಪ ಆಲೂರ ಅವರು ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಾಪಂ ಇಓ ಮಲ್ಲಿಕಾರ್ಜುನ ಬಡಿಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಒಟ್ಟು 12 ಜನ ಸದಸ್ಯರಲ್ಲಿ ಇಬ್ಬರು ಸದಸ್ಯರು ಗೈರಾಗಿದ್ದರು. ಈ ಸಂದರ್ಭದಲ್ಲಿ ಅಧ್ಯಕ್ಷ ಉಪಾಧ್ಯಕ್ಷರನ್ನು ಪಿಡಿಒ ಆರತಿ ಕ್ಷತ್ರಿ, ಇಓ ಮಲ್ಲಿಕಾರ್ಜುನ್ ಬಡಿಗೇರ್ ಪಂಚಾಯತಿ ಪರವಾಗಿ ಸನ್ಮಾನಿಸಿ ಗೌರವಿಸಿದರು.
ವಿಜಯೋತ್ಸವ:ಮಹಾಲಿಂಗವ್ವ ಎಮ್ಮಿ ಅಧ್ಯಕ್ಷರಾಗಿ, ಮೈಲಾರಲಿಂಗಪ್ಪ ಆಲೂರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ, ಶಶಿಧರ ದೇಸಾಯಿ ಅವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷ , ಉಪಾಧ್ಯಕ್ಷರಿಗೆ ಗುಳೇದಗುಡ್ಡ ಹೊದಿಸಿ ಖಣದಿಂದ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಗಪ್ಪ ಹಡಪದ, ಬಸವರಾಜ ಚಿಲ್ಲಾಪೂರ, ಶಿವಾನಂದ ವಾಲಿಕಾರ, ಮಾಗುಂಡಪ್ಪ ಸುಂಕದ, ಸದಸ್ಯರಾದ ಕಾಶಿನಾಥ ಪುರಾಣಿಕಮಠ, ಹನಮಂತ ಕಡ್ಲಿಮಟ್ಟಿ, ಹುಚ್ಚೇಶ ಪೂಜಾರ, ಶೋಭಾ ವಾಲಿಕಾರ, ಮಲ್ಲಕಾಜಪ್ಪ ಜಾಲಿಹಾಳ, ಶೃತಿ ಪತ್ತಾರ, ಎಂ.ಜಿ.ಭಗವತಿ, ಯಲಗುರದಪ್ಪ ತೊಗಲಂಗಿ, ವೈ.ಜಿ.ತಳವಾರ, ಕರಿಯಪ್ಪ ಸೀತಿಮನಿ, ಮೌನೇಶ ಪತ್ತಾರ, ಮಹದೇವಪ್ಪ ಕೋಟಿ, ಮಲ್ಲಪ್ಪ ತಳವಾರ, ಭೂಸರಾತ, ಹಾದಿಮನಿ,ರಮೇಶ ಅಬಕಾರಿ, ಸಿದ್ದು ಅಬಕಾರಿ, ಬೇವಿನಮಟ್ಟಿ ಸೇರಿದಂತೆ ಇತರರು ಇದ್ದರು.