ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ತರಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು.ಸಾಲಗಾರರ ಕ್ಷೇತ್ರದ 11 ಸ್ಥಾನಗಳ ಪೈಕಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 8 ಸ್ಥಾನಗಳಿಗೆ ಹಾಗೂ ಸಾಲಗಾರರ ಕ್ಷೇತ್ರದ 1 ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. 8 ಸ್ಥಾನಗಳ ಪೈಕಿ 5 ಸಾಮಾನ್ಯ ಕ್ಷೇತ್ರ, 2 ಮಹಿಳಾ ಮೀಸಲು ಕ್ಷೇತ್ರ, ಬ ವರ್ಗ 1 ಸ್ಥಾನಕ್ಕೆ ಒಟ್ಟು 14 ಜನ ಸ್ಪರ್ಧೆ ಮಾಡಿದ್ದರು.
ವಿಜೇತರು:ಭಾನುವಾರ ತಡರಾತ್ರಿವರೆಗೂ ಮತ ಎಣಿಕೆ ನಡೆಯಿತು. ಟಿ. ಜಿ. ರಮೇಶ್ ಗೌಡ, ಎಸ್.ಜಿ. ಬಸವನಗೌಡ, ಎಸ್.ಜಿ. ವೀರಪ್ಪ ಗೌಡ, ಎನ್.ಈಶ್ವರಪ್ಪ, ವಿಶ್ವಾರಾಧ್ಯ ಅವರು ಸಾಮಾನ್ಯ ಕ್ಷೇತ್ರದಿಂದ ವಿಜೇತರಾದರು. ಮಹಿಳಾ ಮೀಸಲು ಕ್ಷೇತ್ರದಿಂದ ಮಂಜುಳಮ್ಮ ಚಿದಾನಂದಪ್ಪ, ಯಶೋಧಮ್ಮ ಸಿದ್ದಪ್ಪ ಚುನಾಯಿತರಾದರು. ಪ್ರವರ್ಗ ಬ ದಿಂದ ವಿಜಯ ಚುನಾಯಿತರಾದರು.
ಅವಿರೋಧ ಆಯ್ಕೆಯಾದವರು:ಹಿಂದುಳಿದ ಅ ವರ್ಗದಿಂದ ಎಸ್.ಆರ್. ಲೋಕಪ್ಪ, ಪರಿಶಿಷ್ಟ ಜಾತಿಯಿಂದ ಶಾಂತನಾಯ್ಕ, ಪರಿಶಿಷ್ಟ ಪಂಗಡದಿಂದ ಟಿ. ರಾಜಪ್ಪ ಅವಿರೋಧವಾಗಿ ಆಯ್ಕೆಯಾದರು. ಸಾಲಗಾರರಲ್ಲದ ಕ್ಷೇತ್ರದಿಂದ ಇಬ್ಬರು ಸ್ಪರ್ಧೆ ಮಾಡಿದ್ದು, ಅವರ ಪೈಕಿ ಬಸವನಗೌಡ (ಸಾ) ಅವರು ಚುನಾಯಿತರಾದರು.
ಚುನಾವಣಾಧಿಕಾರಿಯಾಗಿ ವಾಸಪ್ಪ ವಾಲ್ಮೀಕಿ ಕರ್ತವ್ಯ ನಿರ್ವಹಿಸಿದರು. ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್‌ಕುಮಾರ್, ಸಿಬ್ಬಂದಿ ಧರ್ಮಪ್ಪ ಹಾಜರಿದ್ದರು.- - -
-4ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿ ತಾಲೂಕು ತರಗನಹಳ್ಳಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಜನ ನಿರ್ದೇಶಕರು ಆಯ್ಕೆಯಾದರು.