ಸಹಕಾರ ಸಂಘದ ನಿರ್ದೇಶಕರ ಚುನಾವಣೆ: ಸೂನಗಹಳ್ಳಿ ಪುಟ್ಟಸ್ವಾಮಿ ತಂಡಕ್ಕೆ ಜಯ

| Published : Nov 28 2024, 12:31 AM IST

ಸಹಕಾರ ಸಂಘದ ನಿರ್ದೇಶಕರ ಚುನಾವಣೆ: ಸೂನಗಹಳ್ಳಿ ಪುಟ್ಟಸ್ವಾಮಿ ತಂಡಕ್ಕೆ ಜಯ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀಗಂಗಾಪರಮೇಶ್ವರಿ ಪತ್ತಿನ ಸಹಕಾರ ಸಂಘದ 16 ನಿರ್ದೇಶಕ ಸ್ಥಾನಗಳಲ್ಲಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 13 ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಸೂನಗಹಳ್ಳಿ ಪುಟ್ಟಸ್ವಾಮಿ ತಂಡ 13 ಸ್ಥಾನಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಕೇಂದ್ರದಲ್ಲಿ ನಡೆದ ಶ್ರೀಗಂಗಾಪರಮೇಶ್ವರಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಸೂನಗಹಳ್ಳಿ ಪುಟ್ಟಸ್ವಾಮಿ ತಂಡ ಗೆಲುವು ಸಾಧಿಸಿದೆ.

ಸಂಘದ 16 ನಿರ್ದೇಶಕ ಸ್ಥಾನಗಳಲ್ಲಿ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 13 ನಿರ್ದೇಶಕರ ಸ್ಥಾನದ ಚುನಾವಣೆಯಲ್ಲಿ ಸೂನಗಹಳ್ಳಿ ಪುಟ್ಟಸ್ವಾಮಿ ತಂಡ 13 ಸ್ಥಾನಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು.

ಅಶ್ವಿನಿ, ಶಿಲ್ಪಾ ಹಾಗೂ ಎಚ್.ಡಿ.ಶಂಕರತ್ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ಕೆ.ಅನಂತ್ ಕುಮಾರ್ (ಕೆ.ಆರ್.ಪೇಟೆ), ಸಿ.ಎಂ. ಕುಮಾರ್ (ಚಿಕ್ಕರಸಿನಕೆರೆ), ಗಂಗರಾಜು (ಹಲಗೂರು), ಕೆ.ಚಿನ್ನಸ್ವಾಮಿ (ಮಂಡ್ಯ), ಸಿ.ನಾಗೇಶ್ (ಮಂಡ್ಯ), ನಂದಿನಿ ಕೆ.ಎಸ್ (ಮಂಡ್ಯ), ಟಿ.ಪುಟ್ಟಸ್ವಾಮಿ (ಹಂಪಾಪುರ), ರಮೇಶ್ (ಕೆಂಚಬೋಯಿದೊಡ್ಡಿ), ಶಿವರಾಜು (ಹೊಳಲು), ಬಿ.ಎಸ್.ಸಿದ್ದಯ್ಯ (ಗಾಮನಹಳ್ಳಿ), ಸೂನಗಹಳ್ಳಿ ಪುಟ್ಟಸ್ವಾಮಿ (ಸೂನಗಹಳ್ಳಿ), ಸೋಮಶೇಖರ್ ಬಿ.ಜೆ. (ಮಂಡ್ಯ), ಹಾಗೂ ಸಿ.ಎಚ್. ಹುಚ್ಚಯ್ಯ (ಚೀರನಹಳ್ಳಿ) ಚುನಾಯಿತರಾದರು.

ತಂಡದ ಗೆಲುವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಸದಸ್ಯರಿಗೆ ಸೂನಗಹಳ್ಳಿ ಪುಟ್ಟಸ್ವಾಮಿ ಅಭಿನಂದನೆ ಸಲ್ಲಿಸಿದರು.

ಗ್ರಾಪಂ ಉಪಚುನಾವಣೆ ಜೆಡಿಎಸ್ ಬೆಂಬಲಿತ ಸುಧಾಮಣಿ ಗೆಲುವು

ಶ್ರೀರಂಗಪಟ್ಟಣ:

ತಾಲೂಕಿನ ಗಾಮನಹಳ್ಳಿ ಗ್ರಾಪಂ 2ನೇ ವಾರ್ಡ್‌ಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸುಧಾಮಣಿ ಎಸ್ ಕೋಂ ನಿಂಗರಾಜು ಕೆ.ಅವರು ಗೆಲುವು ಸಾಧಿಸಿದರು.

ಈ ಹಿಂದಿನ ಸದಸ್ಯೆ ಮಲ್ಲಮ್ಮ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆಯಿತು. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಸುಧಾಮಣಿ ಎಸ್. ಅವರು 353 ಮತ ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ನಂದಿನಿ 244 ಮತ ಪಡೆದು ಪರಾಭವಗೊಂಡರು.

ಈ ವೇಳೆ ಗುತ್ತಿಗೆದಾರ ಶಿವಮಂಜು, ಅಗ್ರಿಮೆಡಿಕಲ್ ಶಿವಲಿಂಗಯ್ಯ ಕೆ.ಬ್ಯಾಟಯ್ಯ, ಮಹದೇವಯ್ಯ,ನಿಂಗರಾಜು, ಜೋಗಯ್ಯ, ಅಂದಾನಿ, ರಾಘವೇಂದ್ರ, ಪ್ರಕಾಶ್ ಚುನವಾಣಾಧಿಕಾರಿಗಳು ಹಾಜರಿದ್ದರು.