ದಾವಣಗೆರೆ ಜಿಲ್ಲಾ ಹಾಗೂ ಹಾವೇರಿ ಜಿಲ್ಲೆಗಳ ತಾಲೂಕು ಕುಂಚಿಟಿಗರ ಒಕ್ಕೂಟಗಳ ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕುಂಚಿಟಿಗರ ಸಮಾಜ ಅಧ್ಯಕ್ಷ ರಂಗನಗೌಡ ಹೇಳಿದ್ದಾರೆ.

- ಅಧ್ಯಕ್ಷರಾಗಿ ಕುಳಗಟ್ಟಿ ಚನ್ನಬಸಪ್ಪ ಆಯ್ಕೆ: ಜಿಲ್ಲಾಧ್ಯಕ್ಷ ರಂಗನಗೌಡ ಮಾಹಿತಿ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದಾವಣಗೆರೆ ಜಿಲ್ಲಾ ಹಾಗೂ ಹಾವೇರಿ ಜಿಲ್ಲೆಗಳ ತಾಲೂಕು ಕುಂಚಿಟಿಗರ ಒಕ್ಕೂಟಗಳ ಟ್ರಸ್ಟ್‌ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕುಂಚಿಟಿಗರ ಸಮಾಜ ಅಧ್ಯಕ್ಷ ರಂಗನಗೌಡ ಹೇಳಿದರು.

ಭಾನುವಾರ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಈ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಕುಂಚಿಟಿಗ ಸಮಾಜದ ಸಂಘಟನೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಪರ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂದರು.

ನೂತನ ಪದಾಧಿಕಾರಿಗಳು:

ಗೌರವ ಅಧ್ಯಕ್ಷರಾಗಿ ಚಂದ್ರಪ್ಪ ಅರಕೆರೆ, ಅಧ್ಯಕ್ಷರಾಗಿ ಬಿ.ಟಿ. ಚನ್ನಬಸಪ್ಪ ಕುಳಗಟ್ಟಿ, ಉಪಾಧ್ಯಕ್ಷರಾಗಿ ದಿನೇಶ್ ಯರೇಹಳ್ಳಿ, ತೋಟಪ್ಪ ಕುಂಕುವ, ಮಂಜಪ್ಪ ಗುಡ್ಡದ ಕೊಮಾರನಹಳ್ಳಿ, ಚಂದ್ರಪ್ಪ ಹಿರೇಕಬ್ಬಾರ್, ಪ್ರಧಾನ ಕಾರ್ಯದರ್ಶಿಯಾಗಿ ಷಣ್ಮುಖ ಐನೂರು, ಖಜಾಂಚಿಯಾಗಿ ಎಂ.ಕೆ. ರಾಘವೇಂದ್ರ ಹಿರೇಬಾಸೂರು, ಕಾರ್ಯದರ್ಶಿಯಾಗಿ ರಾಜೇಶ್ ಹನಗವಾಡಿ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ಸುರೇಶ್ ಮಾಸಡಿ, ಶ್ರೀನಿವಾಸ್ ಹರಳಹಳ್ಳಿ (ಹರಿಹರ) ಅವರನ್ನು ಆಯ್ಕೆ ಮಾಡಿ ಘೋಷಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಮಿತಿಯನ್ನು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕುರುವ ಗಣೇಶ್ ಹಾಗೂ ಸಮಾಜದ ಹಿರಿಯ ಮುಖಂಡರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ. ಸಮಾಜದ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಕುಂಚಿಟಿಗ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದು, ಅಭಿನಂದಿಸಿದರು.

- - -

-18ಎಚ್.ಎಲ್.ಐ1ಃ:

ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿನ ತಾಲೂಕುಗಳ ಕುಂಚಿಟಿಗರ ಒಕ್ಕೂಟಗಳ ಟ್ರಸ್ಟ್‌ಗೆ ನೂತನ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.