ಸಾರಾಂಶ
ಹೊಳೆನರಸೀಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಚ್.ಬಿ.ವೆಂಕಟೇಶ್, ಕಾರ್ಯದರ್ಶಿಯಾಗಿ ಎ.ರಾಮಕೃಷ್ಣ, ಖಜಾಂಚಿಯಾಗಿ ಎಚ್.ವಿ. ರವಿಕುಮಾರ್, ಉಪಾಧ್ಯಕ್ಷರಾಗಿ ಡಿ.ಕೆ.ವಸಂತಯ್ಯ ಹಾಗೂ ಕೆ.ಎ.ರವಿಕುಮಾರ್, ಸಹ ಕಾರ್ಯದರ್ಶಿಯಾಗಿ ವೆಂಕಟೇಶ ಅವಿರೋಧವಾಗಿ ಆಯ್ಕೆಯಾದರು. ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಕುಮಾರ್, ಉಪಾಧ್ಯಕ್ಷರಾದ ವಿಶ್ವನಾಥ್, ಎಚ್.ಸಿ.ಎನ್.ಚಂದ್ರು, ಕೃಷ್ಣ, ಅಭಿಲಾಷ್, ಭಾನುಮತಿ, ರಂಗಸ್ವಾಮಿ, ಧನಂಜಯ, ಚಂದ್ರಶೇಖರ್, ನಾಜಿರ್ ನೂತನ ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಶುಭಕೋರಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಚ್.ಬಿ.ವೆಂಕಟೇಶ್, ಕಾರ್ಯದರ್ಶಿಯಾಗಿ ಎ.ರಾಮಕೃಷ್ಣ, ಖಜಾಂಚಿಯಾಗಿ ಎಚ್.ವಿ. ರವಿಕುಮಾರ್, ಉಪಾಧ್ಯಕ್ಷರಾಗಿ ಡಿ.ಕೆ.ವಸಂತಯ್ಯ ಹಾಗೂ ಕೆ.ಎ.ರವಿಕುಮಾರ್, ಸಹ ಕಾರ್ಯದರ್ಶಿಯಾಗಿ ವೆಂಕಟೇಶ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶಶಿಧರ್ ಬಿ.ಸಿ. ಹಾಗೂ ಎಚ್.ಟಿ.ಮೋಹನ್ ಕುಮಾರ್ ಚುನಾವಣಾಧಿಕಾರಿಗಳಾಗಿ ಸಂಘದ ಬೈಲಾದಂತೆ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ನಿಕಟಪೂರ್ವ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಹಾಗೂ ಉಪಾಧ್ಯಕ್ಷ ಎನ್.ಎಸ್. ರಾಧಾಕೃಷ್ಣ ಅವರು ಅವಿರೋಧ ಆಯ್ಕೆ ಸಹಕರಿಸುವಂತೆ ಸಲಹೆ ನೀಡಿದರು ಹಾಗೂ ಎಚ್.ಬಿ. ವೆಂಕಟೇಶ್ ಅವರು ಕಾರ್ಯಕಾರಿ ಮಂಡಳಿಯ ಸದಸ್ಯರ ಹೆಸರುಗಳನ್ನು ಸೂಚಿಸಿದರು. ನಂತರ ಚುನಾವಣಾ ಪ್ರಕ್ರಿಯೆ ಪ್ರಾರಂಭಗೊಂಡು ಸದಸ್ಯರು ನಾಮಪತ್ರ ಸಲ್ಲಿಸಿದರು ಹಾಗೂ ಎಲ್ಲಾ ಸ್ಥಾನಗಳಿಗೂ ಒಂದೊಂದೇ ಅರ್ಜಿ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿ ಎಲ್ಲರಿಗೂ ಶುಭ ಕೋರಿದರು.ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಕುಮಾರ್, ಉಪಾಧ್ಯಕ್ಷರಾದ ವಿಶ್ವನಾಥ್, ಎಚ್.ಸಿ.ಎನ್.ಚಂದ್ರು, ಕೃಷ್ಣ, ಅಭಿಲಾಷ್, ಭಾನುಮತಿ, ರಂಗಸ್ವಾಮಿ, ಧನಂಜಯ, ಚಂದ್ರಶೇಖರ್, ನಾಜಿರ್ ನೂತನ ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಶುಭಕೋರಿದರು.