ಸಾರಾಂಶ
ಕರ್ನಾಟಕದಲ್ಲಿ ಇದುವರೆಗೆ ಚುನಾವಣೆಗೆ ಸಂಬಂಧಿಸಿದಂತೆ 357 ಕೋಟಿ ರು. ಮೌಲ್ಯದ ಹಣ-ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಕ್ರಮ ತಡೆಯಲು ನಿಯೋಜನೆಗೊಂಡಿರುವ ವಿವಿಧ ತನಿಖಾ ತಂಡಗಳು ಕರ್ನಾಟಕದಲ್ಲಿ ಈವರೆಗೆ ಒಟ್ಟು 48.97 ಕೋಟಿ ರು. ನಗದನ್ನು ಜಪ್ತಿ ಮಾಡಿವೆ.
ಒಟ್ಟಾರೆ 357 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿವೆ. ಅದರಲ್ಲಿ 160 ಕೋಟಿ ರು. ಮೌಲ್ಯದ 142 ಲಕ್ಷ ಲೀ. ಮದ್ಯ, 10.28 ಕೋಟಿ ರು. ಮೌಲ್ಯದ 459 ಕೆಜಿ ಮಾದಕ ವಸ್ತು, 56.86 ಕೋಟಿ ರು. ಮೌಲ್ಯದ 197 ಕೆಜಿ ಚಿನ್ನ, 1.13 ಕೋಟಿ ರು. ಮೌಲ್ಯದ 296 ಕೆಜಿ ಬೆಳ್ಳಿ ಸೇರಿದೆ.