ರಾಜಕಾರಣ ವ್ಯಾಪಾರವಾಗಿದೆ, ಸೇವೆ ಮಾಯವಾಗಿದೆ

| Published : Apr 04 2024, 01:05 AM IST

ಸಾರಾಂಶ

ಕೇಂದ್ರ .ರಾಜ್ಯ ಸರ್ಕಾರಗಳು. ರೈತರ ಪಾಲಿಗೆ ಮರಳುಗಾಡಿನ ಓಯಸಿಸ್ ಇದ್ದಂತೆ ಎಂಬುದನ್ನು ಅರಿತುಕೊಳ್ಳಬೇಕು. ಬರಗಾಲದ ಬವಣೆಯಿಂದ ರೈತರಿಗೆ ಕುಡಿಯುವ ನೀರು ದನಕರುಗಳಿಗೆ ಮೇವು ಸಿಗುತ್ತಿಲ್ಲ ಕೊಳವೆ ಬಾವಿಗಳಲ್ಲಿ ನೀರು ಹಿಂಗಿ ಹೋಗಿ ಕಬ್ಬಿನ ಬೆಳೆ ತೆಂಗಿನ ಮರ ಒಣಗುತ್ತಿದೆ ಇಂಥಹ ರೈತರನ್ನ ಸಂಕಷ್ಟದಿಂದ ಪಾರು ಮಾಡಬೇಕು. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ತಲ್ಲಿನರಾಗಿದ್ದಾರೆ. ರೈತರ ಸಂಕಷ್ಟ ಅರಿತುಕೊಳ್ಳಲಿ ಎಂದು ಬರಗಾಲದ ಚುನಾವಣೆ ರೈತರ ದಿಕ್ಸೂಚಿ ಕಾರ್ಯಕ್ರಮ ಹಮಿಕೊಂಡಿದ್ದೇವೆ

ಕನ್ನಡಪ್ರಭ ವಾರ್ತೆ ಮೈಸೂರು

ಬರಗಾಲದಿಂದ ತತ್ತರಿಸಿರುವ ರೈತರ ಸಂಕಷ್ಟ ಆಲಿಸಲು ಯಾರು ಇಲ್ಲವಾಗಿದ್ದಾರೆ ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿದ್ದಾರೆ ವ್ಯಾಪಾರಕ್ಕಿಂತಲೂ ಹೆಚ್ಚು ಲಾಭಗಳಿಸುವ ಕ್ಷೇತ್ರವಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ.ರಾಜ್ಯ ಕಬ್ಬು ಬೆಳೆಗಾರ ಸಂಘ ಆಯೋಜಿಸಿದ ಬರಗಾಲದಲ್ಲಿ ಚುನಾವಣೆ- ರೈತರ ದಿಕ್ಸೂಚಿ ಚಿಂತನ ಮಂಥನ ಅಧ್ಯಕ್ಷತೆ ವಹಿಸಿದ್ದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಪ್ರಾಕೃತಿಕ ಬದಲಾವಣೆಯಿಂದ ಕೃಷಿ ಕ್ಷೇತ್ರ ದುರ್ಬಲವಾಗುತ್ತಿದೆ. ಬರಗಾಲದ ನೀರಿನ ಸಮಸ್ಯೆಯಿಂದ ರೈತರ ಬೆಳೆಗಳು ಒಣಗುತ್ತಿವೆ ಕೊಳವೆ ಬಾವಿಗಳು ಹಿಂಗುತ್ತಿವೆ. ರೈತರು ಈಗಲಾದರೂ ಹಳ್ಳಿಗಳಲ್ಲಿ ಗುಡಿಗೋಪುರ ಕಟ್ಟುವ ಚಿಂತನೆ ಕಡಿಮೆ ಮಾಡಿ ಕೆರೆ ಕಟ್ಟೆ ಹೂಳೆತುವ ಮೂಲಕ ಪುನರ್ಜೀವನ ಹಾಗೂ ಹೊಸದಾಗಿ ನಿರ್ಮಿಸುವ ಕೆಲಸದಲ್ಲಿ ರೈತರು ಶ್ರದ್ದೆ ವಹಿಸಿದ್ದರೆ ಮುಂದಿನ ವರ್ಷಗಳಲ್ಲಿ ಕೊಳವೆ ಬಾವಿಗಳು ಕೃಷಿ ಕ್ಷೇತ್ರ ಸಮೃದ್ಧಿಯಾಗಲು ಸಹಕಾರಿಯಾಗುತ್ತದೆ. ಇಂದಿನ ರಾಜಕಾರಣಿಗಳಿಗೆ ಇದೆಲ್ಲ ಕಾಣುವುದಿಲ ಅವರಿಗೆ ಬೇಕಾಗಿಲ್ಲ ಎಂದರು.

ಕೇಂದ್ರ .ರಾಜ್ಯ ಸರ್ಕಾರಗಳು. ರೈತರ ಪಾಲಿಗೆ ಮರಳುಗಾಡಿನ ಓಯಸಿಸ್ ಇದ್ದಂತೆ ಎಂಬುದನ್ನು ಅರಿತುಕೊಳ್ಳಬೇಕು. ಬರಗಾಲದ ಬವಣೆಯಿಂದ ರೈತರಿಗೆ ಕುಡಿಯುವ ನೀರು ದನಕರುಗಳಿಗೆ ಮೇವು ಸಿಗುತ್ತಿಲ್ಲ ಕೊಳವೆ ಬಾವಿಗಳಲ್ಲಿ ನೀರು ಹಿಂಗಿ ಹೋಗಿ ಕಬ್ಬಿನ ಬೆಳೆ ತೆಂಗಿನ ಮರ ಒಣಗುತ್ತಿದೆ ಇಂಥಹ ರೈತರನ್ನ ಸಂಕಷ್ಟದಿಂದ ಪಾರು ಮಾಡಬೇಕು. ಅಧಿಕಾರಿಗಳು ಚುನಾವಣಾ ಗುಂಗಿನಲ್ಲಿ ತಲ್ಲಿನರಾಗಿದ್ದಾರೆ. ರೈತರ ಸಂಕಷ್ಟ ಅರಿತುಕೊಳ್ಳಲಿ ಎಂದು ಬರಗಾಲದ ಚುನಾವಣೆ ರೈತರ ದಿಕ್ಸೂಚಿ ಕಾರ್ಯಕ್ರಮ ಹಮಿಕೊಂಡಿದ್ದೇವೆ ಎಂದರು

ಚುನಾವಣಾ ಪ್ರಣಾಳಿಕೆಯಲ್ಲಿ ರಾಜಕೀಯ ಪಕ್ಷಗಳು ಬರನಿವಾರಣೆ. ಕೃಷಿ ಕ್ಷೇತ್ರದ ರಕ್ಷಣೆ. ಕೆರೆಕಟ್ಟೆ ನದಿ ರಕ್ಷಣೆ. ಅರಣ್ಯ ಬೆಳೆಸುವ ಸಂರಕ್ಷಿಸುವ. ಯೋಜನೆಗಳ ಪ್ರಣಾಳಿಕೆಗಳಿಗೆ ಒತ್ತು ನೀಡಲಿ. ಚುನಾವಣಾ ಆಯೋಗ ನೋಟ ಮತದಾನಕ್ಕೆ ಗೌರವ ತರುವಂತಹ ಮಾನದಂಡ ನಿರ್ಮಿಸಲಿ ಎಂದು ಅವರು ಹೇಳಿದರು.

ಮುಖಂಡ ಅತ್ತಳ್ಳಿ ದೇವರಾಜ್ ಮಾತನಾಡಿ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಮೇಕೆದಾಟು ನಿರ್ಮಾಣ ಮಾಡುವ ಪಾದಯಾತ್ರೆ ಮಾಡಿ ಹುಸಿಗೊಳಿಸಿದ್ದಾರೆ.ಕಾವೇರಿ ನೀರು ತಮಿಳುನಾಡಿಗೆ ಹರಿಸಿ ಕಾವೇರಿ ಅಚ್ಚುಕಟ್ಟು ರೈತರನ್ನ ಬಲಿಕೊಟ್ಟಿದಾರೆ. ಬರಗಾಲದಿಂದ ನರಳುತ್ತಿರುವ ರೈತರಿಗೆ ಭಿಕ್ಷಾ ರೂಪದ ಪರಿಹಾರ ನೀಡಿದ್ದಾರೆ

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು ವರ್ಷವಾದರೂ ಜಾರಿಯಾಗಲಿಲ್ಲ. ಈಗಾದರೆ ರೈತರ ಗತಿ ಏನು ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ ಕೇಂದ್ರ ಸರ್ಕಾರ ದೆಹಲಿ ರೈತ ಚಳುವಳಿಯ ಮೇಲೆ ಗೋಲಿಬಾರ್ ಮಾಡುತ್ತದೆ ರೈತರನ್ನು ಕೊಲ್ಲುತ್ತದೆ ಎಮ್ ಎಸ್ ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿ ಹುಷಿಗೊಳಿಸಿದ್ದೆ. ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ ಹುಷಿಗೂಳಿಸಿದೆ. ಬಂಡವಾಳ ಶಾಹಿಗಳ 14 ಲಕ್ಷ ಕೋಟಿ ಸಾಲ ಮನ್ನಾ ಮಾಡಿ. ಸಂಕಷ್ಟದಲ್ಲಿರುವ ದೇಶದ ರೈತರ ಸಾಲ ಮನ್ನ ಮಾಡದೆ ನಿರ್ಲಕ್ಷತನ ತೋರುತ್ತಿದೆ ಪ್ರವಾಹ ಹಾನಿ ಅತಿವೃಷ್ಟಿ. ಮಳೆಹಾನಿ. ಬರಗಾಲ ನಷ್ಟ ಪರಿಹಾರದ ಬಗ್ಗೆ ಯಾವುದೇ ಗಂಭೀರ ಗಮನ ಹರಿಸುತ್ತಿಲ್ಲ ಈ ರೀತಿಯಲ್ಲಿ ಸರ್ಕಾರಗಳು ರೈತರನ್ನು ಶೋಷಣೆ ಮಾಡುತ್ತಿವೆ ಎಂದರು

ಅರಸಿನ ಬೆಳೆಗಾರರ ಸಂಘದ ನಾಗಾರ್ಜುನ ಮಾತನಾಡಿ ರೈತರು ಬೆಳೆಯುವ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚವನ್ನೇ ಕಡಿಮೆ ತೋರಿಸಿ ರೈತರನ್ನ ಸರ್ಕಾರ ವಂಚಿಸುತ್ತಿದೆ ರೈತರು ಜಾಗೃತಿಯಾಗದಿದ್ದರೆ ನಮ್ಮ ಸಮಾಧಿಯನ್ನು ನಾವೇ ಕಟ್ಟಿಕೊಳ್ಳಬೇಕಾಗುತ್ತದೆ ಎಂದರು

ಪಿ. ಸೋಮಶೇಖರ್, ಎನ್.ಎಚ್. ದೇವಕುಮಾರ್. ಧರ್ಮರಾಜ್, ಕಮಲಮ್ಮ. ರೇವಣ್ಣ .ಶಿವಮೂರ್ತಿ. ಮಾದೇವಸ್ವಾಮಿ ಮಾತನಾಡಿದರು ಕುರುಬೂರು ಸಿದ್ದೇಶ್. ವೆಂಕಟೇಶ್. ಪರಶಿವಮೂರ್ತಿ.ರಾಜೇಶ. ರಾಜು. ಕೆಂಡಗಣ್ಣಸ್ವಾಮಿ ಇದ್ದರು.

ಕಿರಗಸೂರು ಶಂಕರ್ ಸ್ವಾಗತಿಸಿದರು. ಬರಡನಪುರ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು