ಸಾರಾಂಶ
ಜೂ. 19ರಂದು ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಚೆನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪ ನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಕನಕಪ್ಪ ಕನಕಗಿರಿ ಮತ್ತು ನಾಗರಾಜ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಕೋರಂ ಭರ್ತಿಯಾಗದ ಕಾರಣ ಚುನಾವಣೆ ಮುಂದೂಡಲಾಗಿತ್ತು. ಪುನಃ ಚುನಾವಣೆಯನ್ನು ಸೆ. 12ರಂದು ನಿಗದಿ ಮಾಡಿದ್ದರೂ ಕೋರಂ ಇಲ್ಲವೆಂದು ಎರಡನೇ ಬಾರಿಗೆ ಮುಂದೂಡಲಾಯಿತು.
ಗಂಗಾವತಿ:
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ಸಮಿತಿಯ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಕೋರಂ ಭರ್ತಿಯಾಗಿದ್ದರೂ ಚುನಾವಣೆ ಮುಂದೂಡಿದ ಘಟನೆ ಶುಕ್ರವಾರ ನಡೆದಿದೆ. ಈ ವೇಳೆ ನಿರ್ದೇಶಕರು ಚುನಾವಣಾಧಿಕಾರಿ ವಿರುದ್ಧ ವಾಗ್ವಾದ ನಡೆಸಿದ ಘಟನೆಯೂ ನಡೆಯಿತುಜೂ. 19ರಂದು ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಚೆನ್ನಪ್ಪ ಮಳಗಿ ಮತ್ತು ಜೋಗದ ನಾರಾಯಣಪ್ಪ ನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಕನಕಪ್ಪ ಕನಕಗಿರಿ ಮತ್ತು ನಾಗರಾಜ ನಾಮಪತ್ರ ಸಲ್ಲಿಸಿದ್ದರು. ಈ ವೇಳೆ ಕೋರಂ ಭರ್ತಿಯಾಗದ ಕಾರಣ ಚುನಾವಣೆ ಮುಂದೂಡಲಾಗಿತ್ತು. ಪುನಃ ಚುನಾವಣೆಯನ್ನು ಸೆ. 12ರಂದು ನಿಗದಿ ಮಾಡಿದ್ದರೂ ಕೋರಂ ಇಲ್ಲವೆಂದು ಎರಡನೇ ಬಾರಿಗೆ ಮುಂದೂಡಲಾಯಿತು.ಚಕಮಕಿ:
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಗೆ ಒಟ್ಟು 14 ನಿರ್ದೇಶಕರಲ್ಲಿ ಇಬ್ಬರು ಅನುರ್ಜಿತಗೊಂಡಿದ್ದರು. ಆದರೆ, ಇವರಿಗೆ ರಾಜ್ಯ ಚುನಾವಣಾ ಪ್ರಾಧಿಕಾರ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಹೀಗಾಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಸಿಇಒ ಸಹ 14 ಸದಸ್ಯರ ಪಟ್ಟಿ ಕಳಿಸಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನಪ್ಪ ಮಳಗಿ ಬೆಂಬಲಿಗರು 8 ನಿರ್ದೇಶಕರಲ್ಲಿ ಇಬ್ಬರು ಅನುರ್ಜಿತರಾಗಿದ್ದಾರೆ. ಇದನ್ನು ಪರಿಶೀಲಿಸಿದ ಚುನಾವಣಾಧಿಕಾರಿಗಳು ಕೇವಲ 4 ನಿರ್ದೇಶಕರನ್ನು ಗಮನಿಸಿ ಕೋರಂ ಇಲ್ಲವೆಂದು ಹೇಳಿದ್ದೇ ವಿವಾದಕ್ಕೆ ಕಾರಣವಾಯಿತು.ಪೊಲೀಸರೊಂದಿಗೆ ವಾಗ್ವಾದ:
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಚೆನ್ನಪ್ಪ ಮಳಗಿ ಚುನಾವಣಾಧಿಕಾರಿ ಶಿವಾಜಿ ಜತೆ ಚರ್ಚಿಸುತ್ತಿದ್ದ ವೇಳೆ ಪೊಲೀಸರು ಆಗಮಿಸಿ ಹೊರ ಹೋಗುವಂತೆ ಹೇಳಿದ್ದರಿಂದ ವಾಗ್ವಾದ ನಡೆಯಿತು. ನಂತರ ಚುನಾವಾಣಾಧಿಕಾರಿ ಶಿವಾಜಿ ಹಿಂಬರಹ ನೀಡಿ ಚುನಾವಣೆ ಮುಂದೂಡಿದ ಬಗ್ಗೆ ಪ್ರಕಟಿಸಿದರು.ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ 8 ನಿರ್ದೇಶಕರ ಬಹುಮತ ಇದ್ದರು ಸಹ ಉದ್ದೇಶ ಪೂರ್ವಕವಾಗಿ ಚುನಾವಾಣಾಧಿಕಾರಿಗಳು ಚುನಾವಣೆ ಮುಂದೂಡಿದ್ದಾರೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮತ್ತು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ ಕೈವಾಡವೇ ಕಾರಣ.
ಚೆನ್ನಪ್ಪ ಮಳಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಇಬ್ಬರು ನಿರ್ದೇಶಕರು ಅನರ್ಹರಾಗಿದ್ದರು. ಇವರಿಗೆ ಮತ ಹಾಕಲು ಅವಕಾಶ ನೀಡಿರುವುದು ತಪ್ಪು. ನಮ್ಮಲ್ಲಿ ಬಹುಮತ ಇದ್ದರೂ ಸಹ ಚುನಾವಣೆಗೆ ಭಾಗವಹಿಸಿಲ್ಲ.ಜೋಗದ ನಾರಾಯಣಪ್ಪ ನಾಯಕ, ಅಧ್ಯಕ್ಷ ಸ್ಥಾನದ ಆಕಾಂಕ್ಷಿ