ಧಾರವಾಡ ಹಬ್ಬಕ್ಕೆ ವಿಧ್ಯುಕ್ತ ಚಾಲನೆ

| Published : Feb 21 2025, 11:45 PM IST

ಸಾರಾಂಶ

ಕರ್ನಾಟಕ ಮಹಾವಿದ್ಯಾಲಯದ ಮೈದಾನದಲ್ಲಿ ವಿಜನ್ ಫೌಂಡೇಶನ್ ಹಾಗೂ ಹೆಗಡೆ ಗ್ರುಪ್ ಹಮ್ಮಿಕೊಂಡ ಧಾರವಾಡ ಹಬ್ಬಕ್ಕೆ ಶುಕ್ರವಾರ ವಿದ್ಯುಕ್ತ ಚಾಲನೆ ದೊರೆಯಿತು.

ಧಾರವಾಡ: ನಗರದ ಕರ್ನಾಟಕ ಮಹಾವಿದ್ಯಾಲಯದ ಮೈದಾನದಲ್ಲಿ ವಿಜನ್ ಫೌಂಡೇಶನ್ ಹಾಗೂ ಹೆಗಡೆ ಗ್ರುಪ್ ಹಮ್ಮಿಕೊಂಡ ಧಾರವಾಡ ಹಬ್ಬಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು.

ಹಬ್ಬಕ್ಕೆ ಚಾಲನೆ‌ ನೀಡಿದ ಚಿತ್ರಗೀತೆ ರಚನೆಕಾರ ವಿ.ನಾಗೇಂದ್ರ ಪ್ರಸಾದ,‌ ಧಾರವಾಡ ಗತ್ತು ನಮ್ಮನ್ನು ಪದೇ ಪದೇ ಇಲ್ಲಿಗೆ ಕರೆಯುತ್ತಿದೆ. ಹೆಗಡೆ ಗ್ರುಪ್ ಐದು ವರ್ಷಗಳಿಂದ ಮಾಡುತ್ತಿರುವ ಟ್ವಿನ್ ಸಿಟಿ ಐಡಲ್ ಕಾರ್ಯಕ್ರಮಕ್ಕೆ ತಾವು ಆಸ್ಥಾನದ ಕವಿ ಇದ್ದಂತೆ. ರಾಜ್ಯಾದ್ಯಂತ ನನಗೆ ಅಭಿಮಾನಿಗಳು ಹಾಗೂ ಸ್ನೇಹಿತರು ಇದ್ದಾರೆ. ಆದರೆ, ಧಾರವಾಡದಲ್ಲಿ ಅಣ್ಣ-ತಮ್ಮಂದಿರು ಹೆಚ್ಚಿದ್ದಾರೆ. ನಾನು ಬೇಂದ್ರೆ ಅಜ್ಜನ ದೊಡ್ಡ ಅಭಿಮಾನಿ. ಇಲ್ಲಿಗೆ ಬಂದಾಗ ಪೇಡಾ, ಸಾಹಿತ್ಯ, ಕಲೆ, ಸಂಗೀತ ಬದುಕಿಗೆ ಚೈತನ್ಯ ಕೂಡ ತುಂಬಲಿದೆ ಎಂದರು.

ಹು-ಧಾ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ, ಕೆಸಿಡಿ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ, ಎಸಿಪಿ ಪ್ರಶಾಂತ ಸಿದ್ದನಗೌಡರ, ಸಂಘಟಕರಾದ ಸತೀಶ ಹೆಗಡೆ, ಗಿರೀಶ ಹೆಗಡೆ, ವೈದ್ಯ ಡಾ. ರಾಘವೇಂದ್ರ ಅಮೋಘಿಮಠ ಮತ್ತಿತರರು ಇದ್ದರು.

ಹಬ್ಬದಲ್ಲಿ ಗಾಯಕಿ ಶ್ರೀರಕ್ಷಾ ಸೋಜುಗದ ಸೂಜು ಮಲ್ಲಿಗೆ ಮಹಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಗೀತೆ ಹಾಡಿದರೆ, ಗಾಯಕ ನವೀನ‌ ಸಜ್ಜು ಸೇರಿದಂತೆ ಅನೇಕ ಗಾಯಕರು ಹಾಗೂ ಕಲಾವಿದರು ಮನರಂಜನೆ ನೀಡಿದರು.

ನವೀನ ಸಜ್ಜು ಚಿತ್ರ ಗೀತೆಗಳ ಮೂಲಕ ಧಾರವಾಡ ಜನತೆಯನ್ನು ಮಂತ್ರ ಮುಗ್ದ ರನ್ನಾಗಿಸಿದರು‌.

ಯುವ ಡ್ಯಾನ್ಸ್ ಅಕ್ಯಾಡೆಮಿ, ಶಿವ ತಾಂಡವ ಡ್ಯಾನ್ಸ್ ತಂಡ ವಿವಿಧ ಗೀತೆಗಳಿಗೆ ನೇತ್ಯ ಪ್ರದರ್ಶಿಸುವ ಮೂಲಕ ನೆರದಿರುವ ಜನತೆಗೆ ರಂಜಿಸಿದರು. ಮೈದಾನದಲ್ಲಿ ಪಡ್ಡೆ ಹೈಕಳು ಹುಚ್ಚೆದ್ದು ಕುಣಿದು, ಕುಪ್ಪಳಿಸಿದರು.