ಶಿಗ್ಗಾಂವಿ: ಹುಲಗೂರಿನ ಭಾವೈಕ್ಯತೆಯ ಸ್ಥಳವಾದ ಹಜರೇಷಾ ಖಾದ್ರಿ ದರ್ಗಾಕ್ಕೆ ಉರೂಸ್ ವೇಳೆಯಲ್ಲಿ ಲಕ್ಷಾಂತರ ಭಕ್ತರು ಬರುವ ಉದ್ದೇಶದಿಂದ ವಿದ್ಯುತ್ ವೊಲ್ಟೇಜ್ ತೊಂದರೆ ಸಾಕಷ್ಟು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಹೆಸ್ಕಾಂ ಇಲಾಖೆಯಿಂದ ೧೨ ಲಕ್ಷ ವೆಚ್ಚದಲ್ಲಿ ನೂತನ ವಿದ್ಯುತ್ ದೀಪಗಳ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜ್ಜಂಪೀರ್ ಎಸ್. ಖಾದ್ರಿ ಹೇಳಿದರು.
ತಾಲೂಕಿನ ಹುಲಗೂರ ಗ್ರಾಮದ ಹಜರೇಷಾ ಖಾದ್ರಿ ದರ್ಗಾದಲ್ಲಿ ವಿದ್ಯುತ್ ದೀಪಗಳ ಸಂಪರ್ಕ ಕಾರ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಇಲ್ಲಿನ ಕೇಬಲ್‌ಗಳು ಹಾಗೂ ತಂತಿಗಳು ತೀವ್ರ ಶಿಥಿಲಾವಸ್ಥೆಗೆ ತಲುಪಿದ್ದವು. ಹೆಸ್ಕಾಂ ಅಧ್ಯಕ್ಷನಾದ ಮೇಲೆ ನಮ್ಮ ಇಲಾಖೆಯಿಂದ ೧೧ ಮೀಟರ್ ಕಂಬ, ತಂತಿ ಮತ್ತು ಕೇಬಲ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಜೊತೆಗೆ ಇಲ್ಲಿ ವಾರ ಮತ್ತು ತಿಂಗಳು ಗಟ್ಟಲೆ ಭಕ್ತರು ಇರುತ್ತಾರೆ. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರು ೬ ಲೈನ್ ರಸ್ತೆಯ ಸಲುವಾಗಿ ೫ ಕೋಟಿ ರು. ಮಂಜೂರಾತಿ ಮಾಡಿದ್ದು ಅದಕ್ಕೆ ಕೆಲವರು ಅಡತಡೆ ಮಾಡುತ್ತಿದ್ದಾರೆ. ನಮಗೆ ಯಾವುದೇ ಮುಚ್ಚಿಟ್ಟು ಅಭಿವೃದ್ಧಿ ಮಾಡುವ ಪ್ರಮೇಯವಿಲ್ಲ, ಭಾವೈಕ್ಯತೆಯ ಸ್ಥಳವಾಗಿರುವುದರಿಂದ ನಮ್ಮ ಮನೆತನದವರು ಕೂಡಿ ಮಾಡುತ್ತೇವೆ. ಕೆಲ ಜನಪ್ರತಿನಿಧಿಗಳು ಅಡ್ಡಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು ಹಣ ತಂದಿದ್ದೇವೆಂದು ತಿಳಿದು ರಾತ್ರೋರಾತ್ರಿ ಕಾರಡಗಿಗೆ ೫೦ ಲಕ್ಷಗಳನ್ನು ಬದಲಾಯಿಸಿ ಕಳಪೆ ಕಾಮಗಾರಿ ಮಾಡಿದ್ದಾರೆ, ನಮ್ಮ ಅಣ್ಣನವರನ್ನು ಕೋರ್ಟಿಗೆ ಎಳೆದಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದರು.
ದರ್ಗಾ ಅಭಿವೃದ್ಧಿಯಲ್ಲಿ ಯಾವುದೇ ಪಕ್ಷಗಳ ಹಸ್ತಕ್ಷೇಪ ಇಲ್ಲ. ಆದರೆ ಈಗಿನ ಜನಪ್ರತಿನಿಧಿಯೋರ್ವ ಹಸ್ತಕ್ಷೇಪ ಮಾಡುತ್ತಿದ್ದಾನೆ, ದರ್ಗಾ ಬೆಳವಣಿಗೆಗೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ಹಿರಿಯರಿದ್ದಾರೆ ಅವರನ್ನು ಕೇಳಿ ಅಭಿವೃದ್ಧಿ ಮಾಡುವುದು ಮುಖ್ಯವಾಗಿದೆ ಎಂದರು.ಮಾಜಿ ಸಚಿವ ಎಚ್.ಕೆ. ಪಾಟೀಲ ಅವರು ನೀಡಿದ ೫೦ ಲಕ್ಷಗಳಲ್ಲಿ ಕಾಂಕ್ರಿಟ್ ರಸ್ತೆ ಮಾಡಲಾಗಿದೆ. ನನ್ನ ೩೦ ವರ್ಷದ ರಾಜಕಾರಣದಲ್ಲಿ ದರ್ಗಾದಲ್ಲಿ ಪಕ್ಷದ ಚಿಹ್ನೆ ಜಾತಿ ಬಳಸಿ ರಾಜಕಾರಣ ಮಾಡಿಲ್ಲ. ದರ್ಗಾಕ್ಕೆ ಎಲ್ಲ ಪಕ್ಷದ ಮುಖಂಡರೂ, ಎಲ್ಲಾ ಸಮುದಾಯದವರು ಬರುತ್ತಾರೆ, ಆದರೆ ಕೆಲವರು ದರ್ಗಾದ ಅಭಿವೃದ್ಧಿ ಭಾಗವಾದ ರಸ್ತೆ ಕಾಮಗಾರಿಗೆ ಅಡ್ಡಿ ಪಡಿಸುವುದು ಸರಿಯಲ್ಲ, ಅಂಜುಮನ್ ಅಧ್ಯಕ್ಷರೂ ಒಪ್ಪಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೈಯದ ಅಬ್ದುಲ್ ಹಸನ್ ಖಾದ್ರಿ, ಸೈಯದ್ ಯಾಸೀನಫೀರ್ ಖಾದ್ರಿ, ಸೈಯದ ವಲಿವಲ್ಲಾ ಖಾದ್ರಿ, ಸೈಯದ ಸುಲ್ತಾನಜೀರ್ ಖಾದ್ರಿ, ಸೈಯದ್ ಮೀರ್ ಭಾಷಾ ಖಾದ್ರಿ, ಶೇಖಣ್ಣಾ ಗಣಾಚಾರಿ, ಶಿವಪ್ಪ ಚಕ್ರಸಾಲಿ, ಮಲ್ಲಿಕಾರ್ಜುನ ದೇಸಾಯಿ, ವಿಜಯಗೌಡ ಪೊಲೀಸ್‌ಪಾಟೀಲ, ದಯಾನಂದ ಮೇಣಸಿನಕಾಯಿ, ಸೀರಾಜ ಅಹ್ಮದ ಗುಳೇದಗುಡ್ಡ, ಖಾದರಗೌಸ್ ನೇರ್ತಿ, ಶೇಖಣ್ಣಾ ಅತ್ತಿಗೇರಿ, ಹಜರೇಸಾಬ ಕಾರಡಗಿ, ಮೋಲಾಲಿ ಶಿರಕೋಳ, ಶಿವನಗೌಡ್ರ ರಾಮನಗೌಡ್ರ, ಮಹೇಶ ಹುಲಸೋಗ್ಗಿ, ಅಣ್ಣಪ್ಪ ನಡಹಟ್ಟಿ, ಗಾಳೆಪ್ಪ ಹಿತ್ತಲಮನಿ, ಸಲೀಮ್ ಫರೋಕಿ, ಹುಲಗೂರಿನ ಮುಖಂಡ ವಿಜಯಕುಮಾರ ಪಾಟೀಲ ಇದ್ದರು.