ಲಾರಿ ಮೇಲೆ ಬಿದ್ದ ವಿದ್ಯುತ್‌ ಕಂಬ: ಮೂವರು ಪಾರು

| Published : Jul 25 2024, 01:23 AM IST

ಲಾರಿ ಮೇಲೆ ಬಿದ್ದ ವಿದ್ಯುತ್‌ ಕಂಬ: ಮೂವರು ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಕುವೆಟ್ಟು ಗ್ರಾಮದ ವರಕಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಮದಡ್ಕ ಕಡೆಯಿಂದ ಗುರುವಾಯನಕೆರೆ ಕಡೆ ಬರುತ್ತಿದ್ದ ಲಾರಿ ಮೇಲೆ ವಿದ್ಯುತ್ ಕಂಬ ಏಕಾಏಕಿ ಮುರಿದು ಬಿದ್ದಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಗುರುವಾಯನಕೆರೆ ಬಳಿಯ ವರಕಬೆ ಎಂಬಲ್ಲಿ ಬುಧವಾರ ಮರದ ಗೆಲ್ಲೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮವಾಗಿ ಚಲಿಸುತ್ತಿದ್ದ ಲಾರಿ ಮೇಲೆ ವಿದ್ಯುತ್‌ ಕಂಬ ಬಿದ್ದಿದೆ. ಅದೇ ವಿದ್ಯುತ್‌ ತಂತಿ ರಸ್ತೆ ಮೇಲೆ ಇದ್ದುದರಿಂದ ಚಲಿಸುತ್ತಿದ್ದ ಬೈಕ್‌ ಸವಾರರಿಬ್ಬರು ಸ್ಕಿಡ್‌ ಆಗಿ ಬಿದ್ದಿದ್ದಾರೆ. ಘಟನೆ ವೇಳೆ ಬೈಕ್‌ ಸವಾರರಿಬ್ಬರು ಮತ್ತು ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುವೆಟ್ಟು ಗ್ರಾಮದ ವರಕಬೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ಮದಡ್ಕ ಕಡೆಯಿಂದ ಗುರುವಾಯನಕೆರೆ ಕಡೆ ಬರುತ್ತಿದ್ದ ಲಾರಿ ಮೇಲೆ ವಿದ್ಯುತ್ ಕಂಬ ಏಕಾಏಕಿ ಮುರಿದು ಬಿದ್ದಿದೆ.ವಿದ್ಯುತ್ ತಂತಿ ಮೇಲೆ ಮರದ ಗೆಲ್ಲು ಬಿದ್ದು ವಿದ್ಯುತ್‌ ಕಂಬ ಲಾರಿ ಮೇಲೆ ಬೀಳುವ ವೇಳೆ ವಿದ್ಯುತ್‌ ತಂತಿ ರಸ್ತೆಗೆ ಬಿದ್ದಿದ್ದರಿಂದ ಎರಡು ಬೈಕ್‌ಗಳ ಸವಾರರು ಸ್ಕಿಡ್‌ ಆಗಿ ರಸ್ತೆಗೆ ಬಿದ್ದಿದ್ದು. ಘಟನೆಯಲ್ಲಿ ಬೈಕ್ ಸವಾರರಿಗೆ ಯಾವುದೇ ಗಾಯವಾಗಿಲ್ಲ. ಲಾರಿ ಮೇಲೆ ವಿದ್ಯುತ್‌ ಕಂಬ ಬಿದ್ದಿದ್ದರಿಂದ ಒಂದು ಗಂಟೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯ ವೇಳೆ ವಿದ್ಯುತ್‌ ತಂತಿಯಲ್ಲಿ ವಿದ್ಯುತ್‌ ಹರಿವು ಸ್ಥಗಿತವಾಗಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

ಬಳಿಕ ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ತಂತಿಗಳನ್ನು ತೆರವುಗೊಳಿಸಿದ್ದಾರೆ.