ಶಿರಹಟ್ಟಿಯಲ್ಲಿ ರಭಸದ ಮಳೆಗೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು

| Published : Apr 28 2025, 11:49 PM IST

ಶಿರಹಟ್ಟಿಯಲ್ಲಿ ರಭಸದ ಮಳೆಗೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಸಂಜೆ ೬ ಗಂಟೆಯಿಂದ ರಾತ್ರಿ ೯ ಗಂಟೆವರೆಗೂ ಬಿರುಸಿನ ಗಾಳಿ, ಮಿಂಚು, ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು.

ಶಿರಹಟ್ಟಿ:ಭಾನುವಾರ ಸಂಜೆ ೬ ಗಂಟೆಯಿಂದ ರಾತ್ರಿ ೯ ಗಂಟೆವರೆಗೂ ಬಿರುಸಿನ ಗಾಳಿ, ಮಿಂಚು, ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ಬೆಳಗ್ಗೆಯಿಂದಲೇ ಬಿಸಿಲಿನ ತಾಪದಿಂದ ಜನರು ಸುಸ್ತಾಗಿದ್ದರು. ಸಂಜೆ ವೇಳೆಗೆ ರಭಸವಾಗಿ ಗಾಳಿ ಬೀಸಲಾರಂಭಿಸಿ ರಭಸದ ಮಳೆ ಸುರಿದಿದ್ದರಿಂದ ಬೃಹತ್ ಮರಗಳು, ವರವಿ ರಸ್ತೆಯಲ್ಲಿ ಹತ್ತಾರು ವಿದ್ಯುತ್ ಕಂಬಗಳು ರಸ್ತೆ ಅಕ್ಕಪಕ್ಕದಲ್ಲಿ ಉರುಳಿ ಬಿದ್ದಿದ್ದು, ಆ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಚರಂಡಿಗಳು ತುಂಬಿ ರಸ್ತೆ ಮೇಲೆ ಮಳೆ ನೀರು ಹರಿದು ಗಠಾರಗಳಲ್ಲಿನ ಕೊಳಚೆ ರಸ್ತೆ ಮೇಲೆ ಹರಿದು ವಾಸನೆ ಬೀರುತ್ತಿತ್ತು.ಗುಡುಗು, ಸಿಡಿಲು, ಮಿಂಚಿನ ಆರ್ಭಟಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾಗಡಿ, ಬೆಳ್ಳಟ್ಟಿ, ವರವಿ, ಕಡಕೋಳ ಮಾರ್ಗದ ರಸ್ತೆ ಅಕ್ಕಪಕ್ಕದಲ್ಲಿ ಮರದ ಟೊಂಗೆಗಳು ಮುರಿದು ಧರೆಗುರುಳಿವೆ. ಸೋಮವಾರ ನಾಲ್ಕು ಗಂಟೆ ಹೊತ್ತಿಗೆ ಮೋಡಕವಿದ ವಾತಾವರಣವೂ ಇಲ್ಲ. ಗುಡುಗು, ಮಿಂಚು. ಸಿಡಿಲಬ್ಬರ ಇಲ್ಲದೇ ಒಮ್ಮೆಲೆ ರಭಸದ ಗಾಳಿಯೊಂದಿಗೆ ೨೦ ನಿಮಿಷ ಅಬ್ಬರದ ಮಳೆ ಸುರಿಯಿತು. ಪಟ್ಟಣದ ಎಫ್.ಎಂ. ಡಬಾಲಿ ಹೈಸ್ಕೂಲ್ ಎದುರಿಗೆ ಇರುವ ಬೃಹತ್ ಆಲದ ಮರವೊಂದು ರಭಸದ ಗಾಳಿಗೆ ಬೇರು ಸಮೇತ ನೆಲಕ್ಕುರುಳಿದ್ದರಿಂದ ವಿದ್ಯತ್ ಕಡಿತ ಮಾಡಲಾಗಿತ್ತು. ಸಂಜೆ ವೇಳೆ ದಟ್ಟನೆಯ ಮೋಡಕವಿದ ವಾತಾವರಣವಿತ್ತು.