ವಿದ್ಯುತ್‌ ಅವಘಡ, ಗಾಯಾಳುಗಳಿಗೆ ಯಶ್‌ ₹ 1 ಲಕ್ಷ ನೆರವು

| Published : Feb 04 2024, 01:34 AM IST

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಇತ್ತೀಚೆಗೆ ಚಿತ್ರ ನಟ ಯಶ್‌ ಹುಟ್ಟು ಹಬ್ಬದಂದು ಅವರ ಕಟೌಟ್‌ ಕಟ್ಟುವಾಗ ಗಂಭೀರವಾಗಿ ಗಾಯಗೊಂಡವರ ಕುಟುಂಬದವರ ಖಾತೆಗೆ ಯಶ್‌ ತಲಾ ₹1 ಲಕ್ಷ ಜಮಾ ಮಾಡಿದ್ದಾರೆ.

ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮದಲ್ಲಿ ಇತ್ತೀಚೆಗೆ ಚಿತ್ರ ನಟ ಯಶ್‌ ಹುಟ್ಟು ಹಬ್ಬದಂದು ಅವರ ಕಟೌಟ್‌ ಕಟ್ಟುವಾಗ ಗಂಭೀರವಾಗಿ ಗಾಯಗೊಂಡವರ ಕುಟುಂಬದವರ ಖಾತೆಗೆ ಯಶ್‌ ತಲಾ ₹1 ಲಕ್ಷ ಜಮಾ ಮಾಡಿದ್ದಾರೆ.ಸೂರಣಗಿ ಗ್ರಾಮದಲ್ಲಿ ಜ.7ರ ಮಧ್ಯ ರಾತ್ರಿ ಜ.8ರಂದು ಚಿತ್ರ ನಟ ಯಶ್ ಹುಟ್ಟು ಹಬ್ಬ ಹಿನ್ನೆಲೆ ರಾತ್ರಿ ಕಟೌಟ್ ನಿಲ್ಲಿಸುವ ವೇಳೆ ವಿದ್ಯುತ್‌ ಅವಘಡ ಸಂಭವಿಸಿ ಕಟೌಟ್‌ಗೆ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಹನುಮಂತ‌ ಹರಿಜನ(21) ಮುರಳಿ ನಡುವಿನಮನಿ (20) ನವೀನ್ ಗಾಜಿ (19) ಮೂವರು ಸಾವನ್ನಪ್ಪಿದ್ದರು. ಆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ, ಪ್ರಕಾಶ, ಹನುಮಂತ‌ ಹಾಗೂ ನಾಗರಾಜ ಅವರಿಗೆ ಯಶ್‌ ಆರ್ಥಿಕ ಸಹಾಯ ಮಾಡಿದ್ದಾರೆ.ಘಟ‌ನೆ ನಡೆದ ದಿನವೇ ಸೂರಣಗಿ ಗ್ರಾಮಕ್ಕೆ ಚಿತ್ರ ನಟ ಯಶ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ತೆರಳಿದ್ದರು.ಜ.17ರಂದು ಯಶ್ ಆಪ್ತರಿಂದ ಮೃತ ಯುವಕರ ಕುಟುಂಬಸ್ಥರಿಗೆ ತಲಾ 5 ಲಕ್ಷ ರುಪಾಯಿ ಚೆಕ್ ವಿತರಣೆ ಮಾಡಿದ್ದರು. ಅದೇ ವೇಳೆ ಗಾಯಾಳುಗಳ ಬ್ಯಾಂಕ್ ಮಾಹಿತಿ ಪಡೆದು ಪರಿಹಾರದ ಭರವಸೆ ನೀಡಿದ್ದರು. ಭರವಸೆಯಂತೆ ಗಾಯಾಳುಗಳ ಕುಟುಂಬಕ್ಕೆ ತಲಾ ₹1 ಲಕ್ಷ ಗಾಯಾಳುಗಳ ಕುಟುಂಬಸ್ಥರ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ್ದಾರೆ.