ಸಾರಾಂಶ
ಸ್ಥಳೀಯವಾಗಿ ಬರೂರು ಟಿಸಿಯಿಂದ ಬೆಳಖಂಡ ಭಾಗದಲ್ಲಿ ವಿದ್ಯುತ್ ಲೈನ್ ಬಂದಿದ್ದು, ಅದರಿಂದ ಲೋಡ್ ಹೆಚ್ಚಾಗಿ ವೋಲ್ಟೇಜ್ ಡ್ರಾಪ್ ಆಗುತ್ತಿದೆ
ಶಿರಸಿ: ತಾಲೂಕಿನ ಕುಳವೆ ಗ್ರಾಪಂ ವ್ಯಾಪ್ತಿಯ ಬೆಳಖಂಡ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾದ ಪರಿಣಾಮ ಸ್ಥಳಕ್ಕೆ ಹೆಸ್ಕಾಂ ಎಇಇ ನಾಗರಾಜ ಪಾಟೀಲ್ ಬೆಳಖಂಡ ಗ್ರಾಮಕ್ಕೆ ಇತ್ತೀಚೆಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು. ಗ್ರಾಪಂ ಸದಸ್ಯ ಸಂದೇಶ ಭಟ್ಟ ಜತೆಯಲ್ಲಿ ಬೆಳಖಂಡ, ಶೇಡಿಕುಳಿ, ಸೊಪ್ಪಿನ ಮನೆ, ಶಷ್ಣನೆ, ಕಟ್ಟೆಮಕ್ಕಿ ಭಾಗದಲ್ಲಿನ ವಿದ್ಯುತ್ ವೋಲ್ಟೇಜ್ ಡ್ರಾಪ್ ಸಮಸ್ಯೆ ಆಲಿಸಿದ ನಾಗರಾಜ್ ಪಾಟೀಲ್, ನೂತನ ಟಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸ್ಥಳೀಯವಾಗಿ ಬರೂರು ಟಿಸಿಯಿಂದ ಬೆಳಖಂಡ ಭಾಗದಲ್ಲಿ ವಿದ್ಯುತ್ ಲೈನ್ ಬಂದಿದ್ದು, ಅದರಿಂದ ಲೋಡ್ ಹೆಚ್ಚಾಗಿ ವೋಲ್ಟೇಜ್ ಡ್ರಾಪ್ ಆಗುತ್ತಿದೆ. ಇದರಿಂದ ಹೊಸ ಟಿಸಿ ಹಾಕಿದಲ್ಲಿ ಸಮಸ್ಯೆ ಬಗೆಹರಿಯಲಿದ್ದು, ಬರೂರು ಅಥವಾ ಬೆಟ್ಟಕೊಪ್ಪ ಭಾಗದಿಂದ ಎಚ್‌ಟಿ ಲೈನ್ ತಂದು ಟಿಸಿ ಅಳವಹಿಸಬಹುದು ಎಂದು ಸಂದೇಶ ಭಟ್ಟ ವಿನಂತಿಸಿದರು.ಹೊಸ ಟಿಸಿಗಾಗಿ ಅಂದಾಜು ₹೧೫ ಲಕ್ಷ ಅಗತ್ಯವಿದ್ದು, ಅಗತ್ಯ ಪ್ರಸ್ತಾವನೆ ಕಳಿಸುವುದಾಗಿ ಎಇಇ ಭರವಸೆ ನೀಡಿದರು.
ಈ ವೇಳೆ ತಾಪಂ ಮಾಜಿ ಸದಸ್ಯ ನಾಗರಾಜ ಶೆಟ್ಟಿ, ಸ್ಥಳೀಯರಾದ ಎಂ.ಜಿ. ಭಟ್ಟ ಬೆಳಖಂಡ, ಅಶೋಕ ಶೇಟ್, ಮಂಜುನಾಥ ಶೇಟ್, ಗಿರೀಶ ಗೌಡ, ವಿನಾಯಕ ಗೌಡ ಮತ್ತಿತರರು ಇದ್ದರು.