ಸಾರಾಂಶ
ಹಾನಗಲ್ಲ: ಪ್ರತಿಭೆಗೆ ಸಕಾಲಿಕವಾಗಿ ಪ್ರೋತ್ಸಾಹ ದೊರೆತರೆ ಮಾತ್ರ ಮಕ್ಕಳು ಭವಿಷ್ಯದಲ್ಲಿ ಬೆಳೆಯಲು ಸಹಕಾರಿ. ಶಿಕ್ಷಕ, ಪಾಲಕರ ಪ್ರಾಂಜಲ ಮನಸ್ಸು ಜವಾಬ್ದಾರಿಯಿಂದ ಶೈಕ್ಷಣಿಕ ಉನ್ನತಿ ಸಾಧ್ಯ ಎಂದು ಪುರಸಭೆ ಆಧ್ಯಕ್ಷ ಪರಶುರಾಮ ಖಂಡೂನವರ ತಿಳಿಸಿದರು.ಸೋಮವಾರ ಇಲ್ಲಿನ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಆಯೋಜಿಸಿದ್ದ ಎಫ್‌ಎಲ್‌ಎನ್ ಕಲಿಕಾ ಹಬ್ಬವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಇದು ತಳಹದಿ ಶಿಕ್ಷಣವಾಗಬೇಕು. ಆಟದ ಮೂಲಕ ಪ್ರತಿಭಾ ಪ್ರೌಢಿಮೆಗೆ ಅವಕಾಶ ನೀಡುವ ಮೂಲಕ ಮಕ್ಕಳನ್ನು ಹರ್ಷಚಿತ್ತರಾಗಿ ಕಲಿಕೆಗೆ ಪ್ರೋತ್ಸಾಹಿಸುವ ಯೋಜನೆಗಳು ಯಶಸ್ವಿಯಾಗಬಲ್ಲವು. ಇಂಥ ಅವಕಾಶಗಳನ್ನು ಮಕ್ಕಳಿಗೆ ನಿರಂತರ ನೀಡುವ ಮೂಲಕ ಸಾರ್ಥಕ ಶಿಕ್ಷಣಕ್ಕೆ ಕೈಜೋಡಿಸೋಣ ಎಂದರು. ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಸರ್ಕಾರಿ ಶಾಲೆಗಳು ಗುಣಮಟ್ಟದಲ್ಲಿ ಏನೂ ಕಡಿಮೆ ಇಲ್ಲ. ಅತ್ಯಂತ ಪ್ರತಿಭಾವಂತ ಶಿಕ್ಷಕರ ಆಯ್ಕೆ ಇಲ್ಲಿ ನಡೆಯುತ್ತದೆ. ಸರ್ಕಾರಿ ಶಾಲೆಗಳ ಮಕ್ಕಳ ಬುದ್ಧಿವಂತಿಕೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಕಾಲಿಕವಾಗಿ ಸೌಲಭ್ಯ ಒದಗಿಸಿದರೆ ಶಿಕ್ಷಕರು ಮಕ್ಕಳನ್ನು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಹಿರಿಯ ಮಟ್ಟ ತಲುಪಿಸಬಲ್ಲರು. ಸರ್ಕಾರಿ ಶಾಲೆಯ ಶಿಕ್ಷಕರಿಗೆ ಇರುವ ಬದ್ಧತೆಯಿಂದಾಗಿ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಸಮನ್ವಯಾಧಿಕಾರಿ ಡಿ. ನಾಗೇಂದ್ರಪ್ಪ ಅವರು, ಶಿಕ್ಷಣಕ್ಕಾಗಿ ರೂಪಿಸುವ ಯೋಜನೆಗಳು ಮಕ್ಕಳ ಹಿತಕ್ಕಾಗಿ ವಿಳಂಬವಿಲ್ಲದೆ ತಲುಪಿಸುವ ಕಾರ್ಯ ಮಾಡೋಣ ಎಂದರು.ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಎಸ್. ಹಿರೇಮಠ, ಸಿದ್ದು ಗೌರಣ್ಣನವರ, ಗೀತಾ ಚಕ್ರಸಾಲಿ, ನೋಡಲ್ ಅಧಿಕಾರಿ ಎಸ್.ಆರ್. ಎಡಚಿ, ಬಿ.ವಿ. ಗಂಗಾಧರ, ಶಿಕ್ಷಣ ಸಂಯೋಜಕರಾದ ಬಿ.ಎನ್. ಸಂಗೂರ, ವಿ.ಟಿ. ಪಾಟೀಲ, ವಿವಿಧ ಅಧಿಕಾರಿಗಳಾದ ಜಿ.ಎಂ. ಪಂಚಾಳ, ಎಸ್. ಚಂದ್ರಕಾಂತಗೌಡ, ಎಸ್.ಜಿ. ಬಾರ್ಕಿ, ಬಿ.ಎನ್. ಹರಿಜನ, ಕಲಾ ಶಿಕ್ಷಕರಾದ ಪ್ರಕಾಶ ಚೌಹಾಣ, ಗಿರೀಶ ಬೆಳಗಾವ, ಎಸ್‌ಡಿಎಂಸಿ ಅಧ್ಯಕ್ಷ ಸತೀಶ ಭೋಸಲೆ, ಎಸ್.ಎ., ಮುಲ್ಲಾ, ಮೊಹಿದ್ದೀನ ಮುಂಡರಗಿ, ನಿಯಾಜಅಹಮ್ಮದ್ ಮುಂಡರಗಿ, ಜಾಹಿರ ಕೋಟಿ, ಸಿದ್ದಲಿಂಗೇಶ ಕಾಯಕದ ಮೊದಲಾದವರಿದ್ದರು. ಶಿಕ್ಷಕಿಯರಾದ ಪಲ್ಲವಿ ಮಿರ್ಜಿ, ಮಂಜುಳಾ ಹಿರೇಮಠ ಪ್ರಾರ್ಥನೆ ಹಾಡಿದರು. ಬಿ.ವಿ. ಗಂಗಾಧರ ಸ್ವಾಗತಿಸಿದರು. ಸಿದ್ದು ಗೌರಣ್ಣನವರ ನಿರೂಪಿಸಿದರು.