ರಾಗಿ ಖರೀದಿ ಕೇಂದ್ರದಲ್ಲಿ ತಾರತಮ್ಯ ತೊಲಗಿಸಿ

| Published : Mar 29 2024, 12:53 AM IST

ಸಾರಾಂಶ

ರಾಗಿ ಖರೀದಿ ಕೇಂದ್ರವನ್ನು ಇಲ್ಲಿನ ಎಪಿಎಂಸಿ ಆವರಣದಲ್ಲಿ ಪ್ರಾರಂಭಿಸಿದ್ದು ಮುಂಗಾರು ವಿನಲ್ಲಿ ರೈತರು ಬೆಳೆದ ರಾಗಿಯನ್ನು ಮಾತ್ರ ಖರೀದಿಸುತ್ತಿದ್ದಾರೆ. ಹಿಂಗಾರು ರಾಗಿಯನ್ನು ಖರೀದಿಸದೇ ರೈತರನ್ನು ವಾಪಸ್ ಕಳುಹಿಸಲಾಗುತ್ತಿದೆ.

ಕೊಟ್ಟೂರು: ಪಟ್ಟಣದಲ್ಲಿ ಸರ್ಕಾರದಿಂದ ಪ್ರಾರಂಭಿಸಿದ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ತಾರತಮ್ಮ ಎಸಗಲಾಗುತ್ತಿದ್ದು, ಜಿಲ್ಲಾಡಳಿತ ಕೂಡಲೇ ಗಮನಿಸಿ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಎನ್. ಭರಮಣ್ಣ ಒತ್ತಾಯಿಸಿದ್ದಾರೆ.

ಈ ಸಂಬಂಧ ತಹಶೀಲ್ದಾರ್‌ ಅಮರೇಶ್‌ ಜಿ.ಕೆ. ಅವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.ರಾಗಿ ಖರೀದಿ ಕೇಂದ್ರವನ್ನು ಇಲ್ಲಿನ ಎಪಿಎಂಸಿ ಆವರಣದಲ್ಲಿ ಪ್ರಾರಂಭಿಸಿದ್ದು ಮುಂಗಾರು ವಿನಲ್ಲಿ ರೈತರು ಬೆಳೆದ ರಾಗಿಯನ್ನು ಮಾತ್ರ ಖರೀದಿಸುತ್ತಿದ್ದಾರೆ. ಹಿಂಗಾರು ರಾಗಿಯನ್ನು ಖರೀದಿಸದೇ ರೈತರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಅವರು ದೂರಿದ್ದಾರೆ.ಈ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು ನೀರಾವರಿ ಸೌಲಭ್ಯ ಹೊಂದಿದ ಕೆಲ ರೈತರು ಮಾತ್ರ ಹಿಂಗಾರು ರಾಗಿ ಬೆಳೆ ಬೆಳೆದಿದ್ದಾರೆ. ಮಾರಾಟ ಮಾಡಲು ಖರೀದಿ ಕೇಂದ್ರಕ್ಕೆ ತೆರಳಿದರೆ ಹಿಂಗಾರು ಬೆಳೆಯನ್ನು ಖರೀದಿಸುವುದಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದರು.ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ರೀತಿಯಲ್ಲಿ ಬೆಲೆ ಸಿಗಬೇಕೆಂಬ ಕಾರಣಕ್ಕಾಗಿ ರಾಗಿ ಖರೀದಿ ಕೇಂದ್ರ ಸ್ಥಾಪಿಸಿದ್ದು ಅಧಿಕಾರಿಗಳ ಈ ಬಗೆಯ ತಾರತಮ್ಯದಿಂದಾಗಿ ರೈತರು ಮತ್ತೊಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅವರು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.ಈ ವೇಳೆ ಎನ್.ಭರಮಣ್ಣ, ಕೊಟ್ಟೂರು ತಾಲೂಕು ಅಧ್ಯಕ್ಷ ಶ್ರೀಧರ್‌ ಎಸ್‌ ಒಡೆಯರ್‌, ಬಿ.ವೆಂಕಟೇಶ್, ರಾಮಣ್ಣ ಇದ್ದರು.