ಜೀತಪದ್ಧತಿ ತಳಮಟ್ಟದಲ್ಲೇ ನಿವಾರಿಸಿ: ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಮಿನಿ

| Published : Feb 10 2024, 01:46 AM IST

ಜೀತಪದ್ಧತಿ ತಳಮಟ್ಟದಲ್ಲೇ ನಿವಾರಿಸಿ: ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಮಿನಿ
Share this Article
  • FB
  • TW
  • Linkdin
  • Email

ಸಾರಾಂಶ

ಐಟಿ-ಬಿಟಿ ಇನ್ನಿತರ ಕಂಪನಿಗಳು ಉದ್ಯೋಗ ನೀಡುವಾಗ ಉದ್ಯೋಗಾರ್ಥಿಯಿಂದ ಇಂತಿಷು ವರ್ಷ ಕಡ್ಡಾಯ ಕೆಲಸ ಮಾಡುವ ಬಗ್ಗೆ ಬಾಂಡ್‌ ಪೇಪರ್ ಮೇಲೆ ಕರಾರು ಬರೆಸುತ್ತಿದ್ದು ಇದು ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ಜೀತಪದ್ಧತಿಯ ಆರಂಭವಲ್ಲವೇ.

ಕುಮಟಾ:

ಇತಿಹಾಸವಾಗಬೇಕಿದ್ದ ಜೀತ ಪದ್ಧತಿ ಇಂದಿಗೂ ಜೀವಂತ ಇರುವುದು ಆತಂಕದ ವಿಷಯವಾಗಿದ್ದು ಇದನ್ನು ತಳಮಟ್ಟದಿಂದಲೇ ನಿವಾರಿಸಬೇಕಿದೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಭಾಮಿನಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ಜೀತ ಮುಕ್ತ ದಿನಾಚರಣೆ ಮತ್ತು ಕಾನೂನು ಸಾಕ್ಷರತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ದೇಶಕ್ಕೆ ಒಳಿತಾಗಬೇಕು, ಇಲ್ಲಿ ಮಾನವ ಹಕ್ಕುಗಳಿಗೆ ಚ್ಯುತಿಯಾಗಬಾರದು ಎಂದು ಹಾರೈಸಿದರು.ವಕೀಲರ ಸಂಘದ ಅಧ್ಯಕ್ಷ ಆರ್.ಜಿ. ನಾಯ್ಕ ಮಾತನಾಡಿ, ಸುಶಿಕ್ಷಿತ ಸಮಾಜದಲ್ಲಿ ಜೀತಪದ್ಧತಿ ವ್ಯವಸ್ಥಿತ ರೂಪದಲ್ಲಿ ಚಾಲ್ತಿಯಲ್ಲಿದೆ ಎನ್ನಬಹುದು. ಹಲವು ಐಟಿ-ಬಿಟಿ ಇನ್ನಿತರ ಕಂಪನಿಗಳು ಉದ್ಯೋಗ ನೀಡುವಾಗ ಉದ್ಯೋಗಾರ್ಥಿಯಿಂದ ಇಂತಿಷು ವರ್ಷ ಕಡ್ಡಾಯ ಕೆಲಸ ಮಾಡುವ ಬಗ್ಗೆ ಬಾಂಡ್‌ ಪೇಪರ್ ಮೇಲೆ ಕರಾರು ಬರೆಸುತ್ತಿದ್ದು ಇದು ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ಜೀತಪದ್ಧತಿಯ ಆರಂಭವಲ್ಲವೇ ಎಂದು ಪ್ರಶ್ನಿಸಿದರು.ತಹಸೀಲ್ದಾರ್‌ ಪ್ರವೀಣ ಕರಾಂಡೆ, ಉಪಾಧ್ಯಕ್ಷ ಎಂ.ಎಸ್. ಹೆಗಡೆ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ತಾಪಂ ಇಒ ರಾಜೇಂದ್ರ ಭಟ್, ಸಿಡಿಪಿಒ ನಾಗರತ್ನ ನಾಯಕ, ಗ್ರೇಡ್‌-೨ ತಹಸೀಲ್ದಾರ್ ಸತೀಶ ಗೌಡ ಇದ್ದರು

ಜೀತ ಪದ್ಧತಿ ನಿರ್ಮೂಲನೆ ಜಾಗೃತಿಗಾಗಿ ಗಿಬ್ ಸರ್ಕಲ್‌ನಿಂದ ಮೆರವಣಿಗೆ ಮೂಲಕ ತಾಲೂಕು ಪಂಚಾಯಿತಿ ಸಭಾಭವನಕ್ಕೆ ಆಗಮಿಸಲಾಯಿತು. ಜೀತ ಪದ್ಧತಿ ನಿವಾರಣೆಗಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.