ಸಾರಾಂಶ
ಮಕ್ಕಳು ಗುರುಗಳು ಹೇಳಿದ ಪ್ರತಿಯೊಬ್ಬ ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಂಡು ತಮ್ಮ ಜೀವನ ರೂಪಿಸಕೊಳ್ಳಬೇಕು ಎಂದು ಪ್ರಧಾನ ಗುರುಮಾತೆ ತನುಜಾ ನಾಗರಾಳೆ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಮಕ್ಕಳು ಗುರುಗಳು ಹೇಳಿದ ಪ್ರತಿಯೊಬ್ಬ ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಂಡು ತಮ್ಮ ಜೀವನ ರೂಪಿಸಕೊಳ್ಳಬೇಕು ಎಂದು ಪ್ರಧಾನ ಗುರುಮಾತೆ ತನುಜಾ ನಾಗರಾಳೆ ಹೇಳಿದರು.ನಗರದ ನಾಗರಾಳೆ ಪಬ್ಲಿಕ್ ಶಾಲೆಯಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೆ ಗುರು, ಮುಂದೆ ಗುರಿ ಎನ್ನುವ ನಾನ್ನುಡಿಯಂತೆ ಪ್ರತಿಯೊಬ್ಬರಿಗೂ ಗುರು ಇರಲೇಬೇಕು. ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಮಕ್ಕಳ ಬೆನ್ನು ಹಿಂದೆ ಇದ್ದು ಅವರಿಗೆ ಆಚಾರ, ವಿಚಾರ, ಸಂಸ್ಕೃತಿ ಕಲಿಸುವ ನಿಟ್ಟಿನಲ್ಲಿ ಗುರುಗಳ ಸೇವೆ ಅನನ್ಯವಾಗಿದೆ ಎಂದರು.ಮಕ್ಕಳು ಗುರುವಿನ ಬಗ್ಗೆ ಭಾಷಣ ಮತ್ತು ಕಿರು ನಾಟಕಗಳನ್ನು ಪ್ರದರ್ಶಿಸಿಸುವ ಮೂಲಕ ಗುರು ಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ವಿಜಯಲಕ್ಷ್ಮಿ ಬಿರಾದಾರ, ಗೀತಾ ಹಂದರಗಲ್ಲ, ವರ್ಷಾ ಬಳ್ಳಾರಿ, ಸುಮಿತ್ರಾ ಕಾಡದೇವರಮಠ, ವಿದ್ಯಾ ಪೂಜಾರಿ, ಭುವನೇಶ್ವರಿ ಚಲವಾದಿ, ಸಂಗೀತಾ ಆಲಮೇಲ, ಶೋಭಾ ಕನ್ನೂರ, ಅಕ್ಷತಾ ಪಾಟೀಲ, ಶಕುಂತಲಾ ವರನಾಳ, ರಾಜು ನಿಕ್ಕಂ, ಧರೇಶ ಮಸಳಿ ಮತ್ತು ಶಾಲೆಯ ಮಕ್ಕಳು ಹಾಜರಿದ್ದರು.ಗುರು ಪೂರ್ಣಿಮೆಯು ಹಿಂದೂ ಧರ್ಮದ ಸಂಕೇತವಾಗಿದೆ. ಬೌದ್ಧ ಮತ್ತು ಜೈನ್ ಧರ್ಮದಲ್ಲಿ ಈ ಗುರು ಪೂರ್ಣಿಮೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ನಮ್ಮ ಹಿಂದೆ ಗುರು ಇದ್ದರೇ ಗುರಿ ಮುಟ್ಟುವುದು ಸಹಜವಾಗುತ್ತದೆ.
- ತನುಜಾ ನಾಗರಾಳೆ, ಪ್ರಧಾನ ಗುರುಮಾತೆ.