ಸಾರಾಂಶ
ಡಾ. ಶಾಮಪ್ರಕಾಶ ಮುಖರ್ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ
ಕನ್ನಡಪ್ರಭ ವಾರ್ತೆ ಹರಪನಹಳ್ಳಿಜನ ಸಂಘದ ಸಂಸ್ಥಾಪಕ ಶಾಮಪ್ರಕಾಶ ಮುಖರ್ಜಿಯವರ ಆದರ್ಶ ಮೈಗೂಡಿಸಿಕೊಂಡು ಬಿಜೆಪಿಯನ್ನು ಕಟ್ಟೋಣ ಎಂದು ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದಗೌಡ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ತೆಲುಗರ ಬೀದಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾನುವಾರ ಡಾ. ಶಾಮಪ್ರಕಾಶ ಮುಖರ್ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಜನಸಂಘದ ಸಂಸ್ಥಾಪಕ ಡಾ.ಶಾಮಪ್ರಕಾಶ ಮುಖರ್ಜಿ ಅವರು ದೇಶದಲ್ಲಿ ಒಂದು ಸಂವಿಧಾನ ಒಂದು ಬಾವುಟ ಇರಬೇಕು ಹೊರತು ಎರಡು ಬಾವುಟ ಹಾಗೂ ಎರಡು ಸಂವಿಧಾನ ಇರಬಾರದು ಎನ್ನುವ ಧ್ಯೇಯೋದ್ದೇಶದೊಂದಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು ಎಂದು ಹೇಳಿದರು.
ಮುಂಬರುವ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು, ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ಅಭ್ಯರ್ಥಿ ಒಂದು ವೇಳೆ ಚುನಾವಣೆಯಲ್ಲಿ ಪರಾಭವಗೊಂಡರೂ ಸಾರ್ವಜನಿಕರ ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸಲು ಜನಸಾಮಾನ್ಯರ ಕೈಗೆ ಸ್ಥಳೀಯವಾಗಿ ಸಿಗುತ್ತಾರೆ. ಹೊರಗಿನವರಿಗೆ ಟಿಕೆಟ್ ನೀಡಿದರೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ತಮ್ಮ ಪೆಟ್ಟಿಗೆ ಮುಚ್ಚಿಕೊಂಡು ಹೋಗುತ್ತಾರೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ, ರಾಜ್ಯ ಸೌಹಾರ್ದ ಬ್ಯಾಂಕಿನ ಅಧ್ಯಕ್ಷ ಜಿ.ನಂಜನಗೌಡ, ಬಿಜೆಪಿ ಮುಖಂಡ ಆರುಂಡಿ ನಾಗರಾಜ, ಬಾಗಳಿ ಕೊಟ್ರೇಶಪ್ಪ, ಕಣವಿಹಳ್ಳಿ ಮಂಜುನಾಥ, ರಾಜ್ಯ ಸಹಕಾರ ಪ್ರಕೋಷ್ಠ ಸಮಿತಿ ಸಂಚಾಲಕ ಒಂಕಾರಗೌಡ, ಎಂ.ಪಿ. ನಾಯ್ಕ, ತಾಪಂ ಮಾಜಿ ಉಪಾಧ್ಯಕ್ಷ ಮಂಜನಾಯಕ, ಸಣ್ಣ ಹಾಲಪ್ಪ, ವಕೀಲ ಲಿಂಗಾನಂದ, ಶ್ರೀಪತಿ, ಕಡೆಮನಿ ಸಂಗಮೇಶ, ಜವಳಿ ಮಹೇಶ, ಬೂದಿ ನವೀನ, ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಪ್ನ ಮಲ್ಲಿಕಾರ್ಜುನ, ಜಾನಕಮ್ಮ, ಪದ್ಮಾವತಿ, ಮಂಜುಳಾ, ಕಡಕೋಳ ಸಿದ್ದನಗೌಡ, ರೇವನಗೌಡ, ಉಟೇರ ರವಿ, ನಂದಿಬೇವೂರು ಚಾರಪ್ಪ ಮತ್ತಿತರರಿದ್ದರು.