ಸಾರಾಂಶ
ಕನ್ನಡ ನಾಡಿನ ಸ್ವಾಭಿಮಾನ ಎತ್ತಿ ಹಿಡಿದ ಒನಕೆ ಓಬವ್ವಳ ಧೈರ್ಯ ಮತ್ತು ಸಾಹಸ ಎಲ್ಲರೂ ಮೆಚ್ಚಬೇಕು.
ಯಲಬುರ್ಗಾ: ಪ್ರತಿಯೊಬ್ಬ ಮಹಿಳೆಯರು ವೀರವನಿತೆ ಓಬವ್ವಳ ಆದರ್ಶ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ಪಟ್ಟಣದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ವೀರವನಿತೆ ಒನಕೆ ಓಬವ್ವಳ ಜಯಂತಿ ನಿಮಿತ್ತ ವೃತ್ತಕ್ಕೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.ಕನ್ನಡ ನಾಡಿನ ಸ್ವಾಭಿಮಾನ ಎತ್ತಿ ಹಿಡಿದ ಒನಕೆ ಓಬವ್ವಳ ಧೈರ್ಯ ಮತ್ತು ಸಾಹಸ ಎಲ್ಲರೂ ಮೆಚ್ಚಬೇಕು. ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ಸೈನ್ಯವು ಆಕ್ರಮಣ ನಡೆಸಿದಾಗ ವೈರಿ ಪಡೆ ಮಟ್ಟ ಹಾಕಿದ ಧೀರ ಮಹಿಳೆಯಾಗಿದ್ದಾಳೆ. ಶತ್ರುಗಳ ವಿರುದ್ಧ ತನ್ನ ಪ್ರಾಣ ಲೆಕ್ಕಿಸದೇ ಹೋರಾಡಿ ಧೈರ್ಯ ಮತ್ತು ರಾಜನಿಷ್ಠೆ ಮೆರೆದಿದ್ದಾಳೆ. ಸರ್ಕಾರ ನಾಡಿನ ಒಳಿತಿಗೆ ಶ್ರಮಿಸಿದ ಮಹಾತ್ಮರ ಜಯಂತಿ ಆಚರಿಸುತ್ತಿದ್ದು, ಇತಿಹಾಸ ಯಾರೂ ಮರೆಯಬಾರದು ಎಂದರು.
ಸ್ತ್ರೀ ಸಬಲೀಕರಣದ ಶಕ್ತಿ ಒನಕೆ ಓಬವ್ವ. ಅವರ ಚರಿತ್ರೆ ತಿಳಿಯಲು ನಾವು ಪ್ರಯತ್ನಿಸಬೇಕು. ಗಂಡಿನ ಪ್ರತಿ ಸಾಧನೆಯ ಹಿಂದೆ ಹೆಣ್ಣಿನ ಶಕ್ತಿ ಇರುತ್ತದೆ ಎಂಬುವುದಕ್ಕೆ ಉದಾಹರಣೆ ಒನಕೆ ಓಬವ್ವ. ಮಹಿಳೆಯರು ಸ್ವಾವಲಂಬಿಗಳಾಗಬೇಕು. ಸರ್ಕಾರದ ಹಲವು ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಈ ಸಂದರ್ಭ ತಾಪಂ ಇಒ ನೀಲಗಂಗಾ ಬಬಲಾದ, ಸಮಾಜ ಕಲ್ಯಾಣ ಇಲಾಖೆ ಎಡಿ ಶಶಿಧರ ಸಕ್ರಿ, ಶಿರಸ್ತೇದಾರ ದೇವರಡ್ಡಿ, ಛಲವಾದಿ ಸಮಾಜದ ತಾಲೂಕಾಧ್ಯಕ್ಷ ಅಂದಪ್ಪ ಹಾಲಕೆರೆ, ಛತ್ರಪ್ಪ ಛಲವಾದಿ, ಶಂಕರ ಜಕ್ಕಲಿ, ಎಂ.ಎಫ್. ನಧಾಪ್, ಬಸವರಾಜ ಗುಳಗುಳಿ, ಈರಮ್ಮ ಛಲವಾದಿ, ಮಲ್ಲು ಜಕ್ಕಲಿ, ವಿಜಯ ಜಕ್ಕಲಿ, ಸುರೇಶ ನಡುಲಮನಿ ಸೇರಿದಂತೆ ಇನ್ನಿತರರು ಇದ್ದರು.
;Resize=(128,128))
;Resize=(128,128))
;Resize=(128,128))