ಮಹಾನ್ ವ್ಯಕ್ತಿಗಳ ತತ್ವಾದರ್ಶ ಮೈಗೂಡಿಸಿಕೊಳ್ಳಿ

| Published : Jul 27 2025, 12:00 AM IST

ಮಹಾನ್ ವ್ಯಕ್ತಿಗಳ ತತ್ವಾದರ್ಶ ಮೈಗೂಡಿಸಿಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಬಿ. ಆರ್‌. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಅಡಿಯಲ್ಲಿ ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗ ಪಡೆದ ವ್ಯಕ್ತಿ ತಾನು ತನ್ನ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದಿದ್ದಲ್ಲಿ ಅದು ಅಪ್ರಯೋಜಕ ಎಂದು ಸಂಪನ್ಮೂಲ ವ್ಯಕ್ತಿ ಮಹದೇವ್ ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಹನೂರು

ಡಾ. ಬಿ. ಆರ್‌. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದ ಅಡಿಯಲ್ಲಿ ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗ ಪಡೆದ ವ್ಯಕ್ತಿ ತಾನು ತನ್ನ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದಿದ್ದಲ್ಲಿ ಅದು ಅಪ್ರಯೋಜಕ ಎಂದು ಸಂಪನ್ಮೂಲ ವ್ಯಕ್ತಿ ಮಹದೇವ್ ಕುಮಾರ್ ಹೇಳಿದರು.

ತಾಲೂಕಿನ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಜ್ಯೋತಿ ಭಾಪುಲೆ ಸಮಾಜಮುಖಿ ನೌಕರರ ಒಕ್ಕೂಟದಿಂದ ಶಾಹು ಮಹಾರಾಜ್ 151ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ಕೊಟ್ಟಂತಹ ಮಹಾನ್ ಚೇತನ ಬಾಬಾ ಸಾಹೇಬ್ ಅಂಬೇಡ್ಕರ್ ಸಹಿತವಾಗಿ ಇದಕ್ಕಿಂತ ಮುಂಚಿತವಾಗಿ ಮಹಾತ್ಮ ಜ್ಯೋತಿ ಭಾಪುಲೆ, ಸಾವಿತ್ರಿ ಬಾಯಿ ಪುಲೆ ಅವರನ್ನು ಮನದಲ್ಲಿ ನೆನೆಯಬೇಕು. ಯಾಕೆಂದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟಂತಹ ಮಹಾನ್ ಚೇತನ. ಹಾಗಾಗಿ ಅವರ ನೆನೆದು ನಾವು ದಿನನಿತ್ಯದ ಜೀವನ ಆರಂಭ ಮಾಡಬೇಕಿದೆ. ಆ ನಿಟ್ಟಿನಲ್ಲಿ ಮಕ್ಕಳು ಅಂತಹ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ತಮ್ಮ ಜೀವನದಲ್ಲಿ ಇಂತಹ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಬೆಳೆಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು. ಒಳ್ಳೆಯ ವ್ಯಕ್ತಿಗಳಾಗಿ ಉತ್ತಮ ಸಮಾಜದ ನಿರ್ಮಾತೃಗಳಾಗಬೇಕು ಎಂದರು.

ವಾಣಿಜ್ಯ ಇಲಾಖೆಯ ಆಯುಕ್ತ ಶಿವಣ್ಣ ಮಾತನಾಡಿ, ಅಶೋಕ ಮಹಾರಾಜರು ಶಿಕ್ಷಣದ ಮಹತ್ವ ಅರಿತು ಅಂದೇ ಶಪಥ ಮಾಡಿ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಟ್ಟರು. ಸಮಾಜದ ಪರಿವರ್ತನೆಗೆ ಪಣ ತೊಟ್ಟಿ ಸಮಾಜದಲ್ಲಿ ನೆಲೆ ನಿಂತ ಪರಿಣಾಮವೆ ನಾವೆಲ್ಲರೂ ಇಂದು ಇಷ್ಟರ ಮಟ್ಟಿಗೆ ಸಮಾನತೆಯಿಂದ ಜೀವನ ನಡೆಸುತ್ತಿದ್ದೇವೆ. ಒಳ್ಳೆಯ ಉದ್ಯೋಗದಲ್ಲಿದ್ದೇವೆ. ಉದ್ಯೋಗ ಪಡೆದ ನಾವು ಸಮಾಜದ ಒಳಿತಿಗಾಗಿ ಸಮಾಜದ ಉದ್ದಾರಕ್ಕಾಗಿ ದುಡಿಯಬೇಕಿದೆ. ಇದರ ಜೊತೆಗೆ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಶಾಹು ಮಹಾರಾಜ್ ಜಯಂತಿ ಪ್ರಯುಕ್ತ ಮಣಗಳ್ಳಿ ಸರ್ಕಾರಿ ಪ್ರೌಢ ಶಾಲೆಯ ಕಳೆದ ಬಾರಿಯ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತೀರ್ಣರಾದ ಎಲ್ಲ ಮಕ್ಕಳಿಗೂ ಸಹ ಸಂಘಟನೆ ವತಿಯಿಂದ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಲಾಯಿತು.

ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಶಿವಣ್ಣ ,ಉಪನ್ಯಾಸಕ ಮಹಾದೇವ, ಗ್ರಾಮದ ಮುಖಂಡರಾದ ಚೆನ್ನಯ್ಯ, ನಿವೃತ್ತ ಅಧಿಕಾರಿ ಚಿಕ್ಕ ಬಸವಯ್ಯ, ರಮೇಶ್, ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು, ಮಾಲಿಂಗ, ಮುಖ್ಯ ಶಿಕ್ಷಕ ಶಿವಶಂಕರ, ಶಿಕ್ಷಕರಾದ ಜಯಶಂಕರ್, ಮೌನ ಶ್ರೀ ಉಪಸ್ಥಿತರಿದ್ದರು.