ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡ ನಾಡು ನುಡಿ ಶ್ರೇಯೋಭಿವೃದ್ಧಿ, ಸಾರಸ್ವತ ಲೋಕದ ಹಲವಾರು ಕಾರ್ಯಕ್ರಮ, ಬಸವಾದಿ ಶರಣರ ತತ್ವ ಪ್ರಸಾರದಲ್ಲಿ ಕಸಾಪ ನೀಡುತ್ತಿರುವ ಕೊಡುಗೆ ಅನನ್ಯವಾಗಿದೆ ಎಂದು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಅಪ್ಪು ಇಟ್ಟಂಗಿ ಹೇಳಿದರು.ನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಯಡಿಯೂರ ಶ್ರೀ ಸಿದ್ಧಲಿಂಗೇಶ್ವರರ ಚಿಂತನೆ ಕುರಿತು ನಡೆದ ಉಪನ್ಯಾಸ ಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಸವಾದಿ ಶರಣರು ಈ ನಾಡಿಗೆ ನೀಡಿದ ಕೊಡುಗೆ ಅನನ್ಯ. ಅವರ ಕಾಯಕ, ದಾಸೋಹ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.ಶ್ರೀ ಯಡಿಯೂರು ಸಿದ್ಧಲಿಂಗೇಶ್ವರರ ಚಿಂತನೆ ಕುರಿತು ಉಪನ್ಯಾಸ ನೀಡಿದ ಸಾಹಿತಿ ವಿದ್ಯಾ ಕಲಶೆಟ್ಟಿ, ೧೬ನೇ ಶತಮಾನದಲ್ಲಿ ಕನ್ನಡ ನಾಡು ಕಂಡ ಶ್ರೇಷ್ಠ ಸಂತರಲ್ಲಿ ಯಡಿಯೂರು ಸಿದ್ಧಲಿಂಗೇಶ್ವರರು ಒಬ್ಬ ಅನುಭಾವಿ ಶರಣ ಚಿಂತಕರಾಗಿ ೭೭೦ಕ್ಕೂ ಅಧಿಕ ವಚನಗಳನ್ನು ರಚಿಸುವ ಮೂಲಕ ಲೋಕ ಸಂಚಾರ ನಡೆಸಿ ಅನೇಕ ಪವಾಡಗಳನ್ನು ಮಾಡಿದ್ದಾರೆ ಎಂದರು.ಬಸವಾದಿ ಶರಣರ ಕುರಿತು ಉಪನ್ಯಾಸ ನೀಡಿದ ವಿಜಯಪುರ ಡಯಟ್ ಕಾಲೇಜಿನ ದೈಹಿಕ ನಿರ್ದೇಶಕ ಪಿ.ಎಂ. ಮಠಪತಿ, ೧೨ನೇ ಶತಮಾನದ ಬಸವಾದಿ ಶಿವಶರಣರ ವಚನಗಳು ವೈಚಾರಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಆದರ್ಶ ಸಮಾಜ ನಿರ್ಮಾಣಕ್ಕೆ ಮಾಡಿಕೊಟ್ಟ ಶ್ರೇಯಸ್ಸು ಬಸವಾದಿ ಶಿವಶರಣರಿಗೆ ಸಲ್ಲುತ್ತದೆ. ಹಾಗಾಗಿ ಅವರ ಚಿಂತನೆಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿವೆ ಎಂದರು. ಈ ವೇಳೆ ಸಾವಿತ್ರಿಬಾಯಿ ಫುಲೆ ಜಿಲ್ಲಾ ಸಂಘದ ಅಧ್ಯಕ್ಷೆ ಅಕ್ಕಮ್ಮ ನಾಯಕ, ಸಂಗಮೇಶ ಮುರಗೋಡ, ಸದಾಶಿವ ಅಂಗಡಿ, ಮಂಜುಳಾ ಅಂಗಡಿ ಮಾತನಾಡಿದರು. ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಜಂಟಿ ಕಾರ್ಯದರ್ಶಿಗಳಾಗಿ ನೇಮಕಗೊಂಡ ಉಸ್ಮಾನ್ ಭಾಷಾ ಆಲಗೂರ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಬಾಬುರಾವ ಮಹಾರಾಜ, ಎಸ್.ಎಂ.ಕಣಬೂರ, ಕಮಲಾ ಮುರಾಳ, ಆಶಾ ಬಿರಾದಾರ, ವಿಜಯಲಕ್ಷ್ಮಿ ಹಳಕಟ್ಟಿ, ರಾಜೇಸಾಬ ಶಿವನಗುತ್ತಿ, ಅರ್ಜುನ ಶಿರೂರ, ಕೆ.ಎಸ್.ಹಣಮಾಣಿ, ಲತಾ ಗುಂಡಿ, ಗಂಗಮ್ಮ ರಡ್ಡಿ, ಅಬ್ದುಲರಜಾಕ ಮುಲ್ಲಾ, ಜಿ.ಎಸ್.ಬಳ್ಳೂರ, ಎಲ್.ಬಿ.ಶೇಖ ಮಾಸ್ಟರ್, ರೂಪಾ ರಜಪೂತ, ಅಹಮ್ಮದ ವಾಲಿಕಾರ, ಕೆ.ಎಫ್.ಅಂಕಲಗಿ, ಎಸ್.ಎ.ಕೊಪ್ಪಾ, ವಿದ್ಯಾವತಿ ಅಂಕಲಗಿ, ಜಯಶ್ರೀ ಹಿರೇಮಠ, ದೇವಣ್ಣ ಹಾವಗೊಂಡ, ರವಿ ಸಿಂಹಾಸನ, ಎಸ್.ಎಂ.ಕಂಠಿ, ಎಸ್.ಬಿ.ಹತ್ತಳ್ಳಿ, ಕೀರ್ತಿ ಬಜಂತ್ರಿ, ಗಣಪತಿ ಗಳವೆ, ಶ್ರೀಕಾಂತ ನಾಡಗೌಡ, ಭೀಮಣ್ಣ ಚಲುವಾದಿ, ಎಸ್.ಎಸ್. ಹೋನಮೋರೆ, ಮಹಮ್ಮದ್ ಇಕ್ಬಾಲ ಅವಟಿ, ಎಂ.ಡಿ.ಬಿಳಿಜಾಡರ, ಆರ್.ಡಿ.ಖ್ಯಾಡಿ ಮುಂತಾದವರು ಉಪಸ್ಥಿತರಿದ್ದರು.
ಸಾಹಿತಿ ಸುನಂದಾ ಕೋರಿ ಪ್ರಾರ್ಥಿಸಿದರು. ಪ್ರೊ.ಸಿದ್ರಾಮಯ್ಯ ಲಕ್ಕುಂಡಿಮಠ ಸ್ವಾಗತಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪರವೀನ ಶೇಖ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು. ಮೆಹತಾಬ ಕಾಗವಾಡ ತತ್ವಗೀತೆಯನ್ನು ಪ್ರಸ್ತುತಪಡಿಸಿದರು.