ಸಾರಾಂಶ
ಮೆಣಸೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಹವ್ಯಾಸಿ ಕಲಾವಿದ,ಚಿಂತಕ ಸುಬ್ರಮಣ್ಯ ಸ್ವಾಮಿ ವಿವೇಕನಂದರು ಜಗತ್ತು ಕಂಡ ಮಹಾನ್ ದಾರ್ಶನಿಕ. ದೇಶಭಕ್ತ. ವಿವೇಕನಂದರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ, ಶೃಂಗೇರಿ
ಸ್ವಾಮಿ ವಿವೇಕನಂದರು ಜಗತ್ತು ಕಂಡ ಮಹಾನ್ ದಾರ್ಶನಿಕ. ದೇಶಭಕ್ತ. ವಿವೇಕನಂದರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಹವ್ಯಾಸಿ ಕಲಾವಿದ,ಚಿಂತಕ ಸುಬ್ರಮಣ್ಯ ಹೇಳಿದರು.ಮೆಣಸೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಐಕ್ಯುಎಸಿ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚಾರಣೆ ಉದ್ಘಾಟಿಸಿ ಮಾತನಾಡಿದರು. ಏಳಿ ಯುವಕರೆ ಎದ್ದೇಳಿ ಎನ್ನುವ ಘೋಷಣೆ ಮೂಲಕ ಯುವಜನತೆಯನ್ನು ಬಡಿದೆಬ್ಬಿಸಿದರು.ಯುವಜನತೆಯಲ್ಲಿ ದೇಶಪ್ರೇಮ, ಧೇಶಾಭಿಮಾನದ ಸಂಚಲನ ಮೂಡಿಸಿದರು.
ದೇಶ,ಸಮಾಜದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಮಹತ್ತರ. ನಮ್ಮದೇಶ, ಸಂಸ್ಕೃತಿ, ಪರಂಪರೆ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಬೇಕು. ವಿವೇಕನಂದರಂತ ಮಹಾನ್ ವ್ಯಕ್ತಿಗಳು ನಮಗೆ ಆದರ್ಶಪ್ರಾಯರಾಗಿರಬೇಕು ಎಂದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಐಕ್ಯೂಎಸಿ ಸಂಚಾಲಕರಾದ ಡಾ.ಆಶಾ ಬಿ.ಜಿ, ಗ್ರಂಥಾಲಯ ವಿಭಾಗದ ರವಿಶಂಕರ್, ಮೇಘಾನಂದ್, ಚೇತನ್ , ಅಕ್ಷತಾ ಮತ್ತಿತರರು ಇದ್ದರು.12 ಶ್ರೀ ಚಿತ್ರ 1-ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚಾರಣೆ,ಸ್ವಾಮಿ ವಿವೇಕನಂದ ಜಯಂತಿ ಕಾರ್ಯಕ್ರಮವನ್ನು ಸುಬ್ರಮಣ್ಯ ಉದ್ಘಾಟಿಸಿದರು.ಆಶಾ,ರವಿಶಂಕರ್,ಡಾ.ಆಶಾ ಬಿ.ಜಿ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))