ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೂರ್ಗ್ ಜಂಇಯ್ಯತುಲ್ ಉಲಾಮ 50 ಸಂವತ್ಸರಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಇತಿಹಾಸಪ್ರಸಿದ್ಧ ಎಮ್ಮೆಮಾಡುವಿನಲ್ಲಿ ವೈವಿಧ್ಯ ಕಾರ್ಯಕ್ರಮಗಳ ಮೂಲಕ ಸುವರ್ಣ ಮಹೋತ್ಸವ ಆಚರಣೆ ನಡೆಯಲಿದೆ ಎಂದು ಕೂರ್ಗ್ ಜಂಇಯ್ಯಯತುಲ್ ಉಲಾಮ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು ಹೇಳಿದ್ದಾರೆ.ಎಮ್ಮೆಮಾಡಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಗೆ ಸೈಯದ್ ಹಸನ್ ಸಖಾಫ್ ದರ್ಗಾ ಸನ್ನಿಧಿಯಲ್ಲಿ ಝಿಯಾರತ್ ನಡೆಯಲಿದೆ. 8.30 ಕ್ಕೆ ಕೂರ್ಗ್ ಜಂಇಯ್ಯಯತುಲ್ ಉಲಾಮ ಅಧ್ಯಕ್ಷ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದರುಸಿ ಸಖಾಫಿ ಎಮ್ಮೆಮಾಡು ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು.
ಬೆಳಗ್ಗೆ 10 ಗಂಟೆಗೆ ನಡೆಯುವ ಉಲಾಮ ಸಂಗಮವನ್ನು ಜoಇಯ್ಯಯತುಲ್ ಉಲಾಮ ಕರ್ನಾಟಕ ಇದರ ಅಧ್ಯಕ್ಷ ಝೈನಲ್ ಉಲಾಮ ಅಬ್ದುಲ್ ಹಮೀದ್ ಮುಸ್ಲಿಯರ್ ಮಾಣಿ ಉದ್ಘಾಟಿಸುವರು. ಖ್ಯಾತ ವಿದ್ವಾಂಸ ಅಬ್ದುಲ್ ಜಲೀಲ್ ಸಖಾಫಿ ತರಗತಿ ನಡೆಸಲಿದ್ದಾರೆ. ಜಿಲ್ಲೆಯ ಸಹಸ್ರಾರು ಉಲಾಮಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಲೇಮಾನ್ ಸಖಾಫಿ ಮಾಳಿಯೇಕಲ್ ನೇತೃತ್ವದಲ್ಲಿ ಶಿಬಿರ ನಡೆಯಲಿದೆ ಎಂದರು.ಸಮಾವೇಶದಲ್ಲಿ ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಸಂಜೆ 4 ಗಂಟೆಗೆ ಮೊಹಲ್ಲ ಸಂಗಮ ನಡೆಯಲಿದೆ ಇದರಲ್ಲಿ ಎಲ್ಲಾ ಜಮಾಯತ್ ಆಡಳಿತ ಮಂಡಳಿಯವರು ಭಾಗವಹಿಸಲಿದ್ದು ಖ್ಯಾತ ಚಿಂತಕ ಡಾ ಎ. ಪಿ ಅಬ್ದುಲ್ ಹಕ್ಕಿಂ ಅಝರಿ ಹಾಗೂ ನ್ಯಾಯವಾದಿ, ಹಸನ್ ಸಖಾಫಿ ಚುಳ್ಳಿಕೋಡ್ ತರಗತಿ ನಡೆಸುವರು.ಸಂಜೆ 5 ಗಂಟೆಗೆ ಸಾರ್ವಜನಿಕ ಸಮ್ಮೇಳನ ನಡೆಯಲಿದ್ದು ಸಾರ್ವಜನಿಕ ಸಮ್ಮೇಳನದಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಾಮ ಎ.ಪಿ, ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಸಮಸ್ತ ಕೇರಳ ಜoಇಯ್ಯಯತುಲ್ ಉಲಾಮ ಅಧ್ಯಕ್ಷ ರಈಸುಲ್ ಉಲಾಮ ಇ ಸುಲೇಮಾನ್ ಮುಸ್ಲಿಯರ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕ ಮುಸ್ಲಿಂ ಜಮಾಯತ್ ಪ್ರಧಾನ ಕಾರ್ಯದರ್ಶಿ ಅದವೇಲ್ ಮಹಮದ್ ಹಾಜಿ ಕುಂಜಿಲ, ಕೂರ್ಗ್ ಜಂಇಯ್ಯಯತುಲ್ ಉಲಾಮ ಸೈಯ್ಯಿದ್ ಶಿಹಾದ್ದೀನ್ ಆಲ್ ಐದರೂಸಿ ಎಮ್ಮೆಮಾಡು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ಅಶ್ರಫ್ ಅಸ್ಸಾನಿ ವಿರಾಜಪೇಟೆ, ಎಸ್‌ವೈಎಸ್ ರಾಜ್ಯ ಸಮಿತಿ ಅಧ್ಯಕ್ಷ ಇಲ್ಯಾಸ್ ಹೈದರೂಸಿ, ಎಮ್ಮೆಮಾಡು ಮುಸ್ಲಿಂ ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ ಇದ್ದರು.