ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಒತ್ತು

| Published : Apr 21 2025, 12:58 AM IST

ಸಾರಾಂಶ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಇತರೆ ಎಲ್ಲಾ ವರ್ಗ ಸೇರಿದಂತೆ ಇಲ್ಲಿನ ವೈ.ಎನ್‌.ಹೊಸಕೋಟೆ ಗ್ರಾಮದ ಸರ್ವತೋಮುಖಭಿವೃದ್ದಿಗೆ ವಿಶೇಷ ಒತ್ತು ನೀಡಿ ಕೆಲಸ ಮಾಡುತ್ತಿರುವುದಾಗಿ ಶಾಸಕ ಹಾಗೂ ತುಮುಲ್‌ ಅಧ್ಯಕ್ಷರಾದ ಎಚ್‌,ವಿ.ವೆಂಕಟೇಶ್‌ ಅವರು ಹೇಳಿದರು.

ಕನ್ನಡಪ್ರಭವಾರ್ತೆ ಪಾವಗಡ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಇತರೆ ಎಲ್ಲಾ ವರ್ಗ ಸೇರಿದಂತೆ ಇಲ್ಲಿನ ವೈ.ಎನ್‌.ಹೊಸಕೋಟೆ ಗ್ರಾಮದ ಸರ್ವತೋಮುಖಭಿವೃದ್ದಿಗೆ ವಿಶೇಷ ಒತ್ತು ನೀಡಿ ಕೆಲಸ ಮಾಡುತ್ತಿರುವುದಾಗಿ ಶಾಸಕ ಹಾಗೂ ತುಮುಲ್‌ ಅಧ್ಯಕ್ಷರಾದ ಎಚ್‌,ವಿ.ವೆಂಕಟೇಶ್‌ ಅವರು ಹೇಳಿದರು.

ಅವರು ಭಾನುವಾರ ತಾಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಎಸ್‌ಸಿಪಿ ಯೋಜನೆ ಅಡಿಯ 50ಲಕ್ಷ ರು.ವೆಚ್ಚದ ಸಿಸಿ ರಸ್ತೆ ಕಾಮಗಾರಿ ಪ್ರಗತಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ತಾಲೂಕಿನ ಜನತೆಯ ಸಹಕಾರದ ಮೇರೆಗೆ ಗ್ರಾಮೀಣ ರಸ್ತೆ ಸಂಪರ್ಕ ಸೇರಿದಂತೆ ಶಾಲಾಕಾಲೇಜು ಕಟ್ಟಡಗಳ ದುರಸ್ತಿ, ಸಮುದಾಯ ಭವನ ನಿರ್ಮಾಣ ಹಾಗೂ ಸಿಸಿರಸ್ತೆ ಹಾಗೂ ಚರಂಡಿಗಳ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ. ತಾಲೂಕಿನದ್ಯಂತ ಜನಪರ ಕಾರ್ಯಗಳ ಪ್ರಗತಿಗೆ ಆದ್ಯತೆ ನೀಡಿ ಅನುದಾನ ಕಲ್ಪಿಸಿದ್ದು, ಇಲ್ಲಿನ ಎಸ್‌ಸಿ ಕಾಲೋನಿಯ ಪ್ರಗತಿಗೆ ವಿಶೇಷ ಒತ್ತು ನೀಡಿ, ಲೋಕೋಪಯೋಗಿ ಇಲಾಖೆಯ ಎಸ್‌ಸಿಪಿ ಯೋಜನೆ ಅಡಿ 50ಲಕ್ಷ ರು.ವಿನಿಯೋಗಿಸಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ. ಕಾಮಗಾರಿ ಗುಣಮಟ್ಟ ಕಾಪಾಡುವ ಮೂಲಕ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಕಾಲೋನಿಯ ನಾಗರಿಕರಿಗೆ ಅನುಕೂಲ ಕಲ್ಪಿಸುವಂತೆ ಕಾಮಗಾರಿಯ ಗುತ್ತಿಗೆದಾರರಿಗೆ ಆದೇಶಿಸಲಾಗಿದೆ ಎಂದರು.

ಈ ವೇಳೆ ಮುಖಂಡರುಗಳಾದ ಎಸ್‌.ಟಿ.ನಾಗರಾಜು,ಎಸ್‌ವಿಟಿ ಪ್ರಸಾದ್‌, ವಿಶ್ವನಾಥ್‌, ಎನ್‌.ಆರ್‌. ಅಶ್ವತ್‌ಕುಮಾರ್‌, ಜಾಫರ್‌, ಎಂ.ಸಿ.ರಾಜಣ್ಣ, ಶಿವಾನಂದಪ್ಪ, ಗ್ಯಾಸ್‌ ಕೃಷ್ಣಪ್ಪ, ಶಂಷುದ್ದೀನ್, ಜಯಕೀರ್ತಪ್ಪ, ಆನಂದ, ಎಂ.ಸಿ.ರಾಜಣ್ಣ, ಎಂ.ಸಿ.ಜಯರಾಮ್, ಮುನ್ನಾ, ಖಲೀಲ್ ,ಗ್ರಾಮ ಪಂಚಾಯಿತಿ ಸದಸ್ಯ ಶಂಕರ್ ಹಾಗೂ ಇತರೆ ಅನೇಕ ಮಂದಿ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.